Site icon Vistara News

IND vs PAK: ಭಾರತ ವಿರುದ್ಧ ಪಿತೂರಿ ನಡೆಸಿದ್ದ ಪಾಕ್​ ಕ್ರಿಕೆಟ್​ ಮಂಡಳಿಗೆ ಭಾರಿ ಮುಖಭಂಗ

World Cup 2023

ಬೆಂಗಳೂರು: ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ(Ahmedabad ) ನಡೆದ ಭಾರತ(IND vs PAK) ವಿರುದ್ಧದ ಪಂದ್ಯದ ವೇಳೆ ಆತಿಥೇಯ ಪ್ರೇಕ್ಷಕರು ತೋರಿದ ವರ್ತನೆಯ ಬಗ್ಗೆ ಆಕ್ಷೇಪವೆತ್ತಿ ಐಸಿಸಿಗೆ ದೂರು(PCB’s complaint) ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಗೆ ಭಾರಿ ಮುಖಭಂಗವಾಗಿದೆ. ಈ ದೂರನ್ನು ಐಸಿಸಿ(ICC) ನಿರಾಕರಿಸಿದೆ.

ಕಳೆದ ಶನಿವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ(Narendra Modi Stadium) ನಡೆದುದ್ದ ವಿಶ್ವಕಪ್‌ನ ಬಹುನಿರೀಕ್ಷಿತ ಇಂಡೋ-ಪಾಕ್​ ಪಂದ್ಯದಲ್ಲಿ ಪಾಕ್ ಆಟಗಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಪ್ರೇಕ್ಷಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ವರ್ತನೆ ತೋರಿದ್ದಾರೆ. ಇದು ಐಸಿಸಿ ಟೂರ್ನಿ ಆಯೋಜಿಸುವ ಕ್ರಮವಲ್ಲ ಎಂದು ಪಿಸಿಬಿ ಐಸಿಸಿಗೆ ದೂರು ಸಲ್ಲಿಸಿತ್ತು. ಆದರೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಐಸಿಸಿ ನಿರಾಕರಿದೆ. ಇದರಿಂದ ಭಾರತದ ಮತ್ತು ಬಿಸಿಸಿಐ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬಂದ ಪಿಸಿಬಿಗೆ ಮುಖಭಂಗವಾಗಿದೆ.

ಐಸಿಸಿ ನೀತಿ ಸಂಹಿತೆಯ ಪ್ರಕಾರ, ಜನಾಂಗೀಯ ಆರೋಪ ಅಥವಾ ಆಟಗಾರರ ಮೇಲೆ ಪ್ರೇಕ್ಷಕರು ಹಲ್ಲೆ, ದೌರ್ಜನ್ಯ ನಡೆಸಿದರೆ ಜರುಗಿಸಬಹುದು. ಒಂದು ತಂಡ ಅಥವಾ ಗುಂಪಿನ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಹೇಳುವ ಮೂಲಕ ಐಸಿಸಿಯೂ ಪಾಕ್​ ಕ್ರಿಕೆಟ್​ ಮಂಡಳಿಯ ಆರೋಪವನ್ನು ಅಲ್ಲಗಳೆದಿದೆ.

ಪಾಕ್​ ಆರೋಪವೇನು?

ಪಂದ್ಯದ ಸೋಲಿಗೆ ಏನಾದರು ಮಾಡಿ ಭಾರತಕ್ಕೆ ಕೆಟ್ಟ ಹೆಸರುನ್ನು ತರುವ ಪಿತೂರಿಯಿಂದ, ಭಾರತೀಯ ಅಭಿಮಾನಿಗಳು ಪಂದ್ಯ ನಡೆಯುತ್ತಿದ್ದಾಗ ‘ಜೈ ಶ್ರೀರಾಮ್’’ ಘೋಷಣೆ ಕೂಗಿದ್ದಾರೆ. ಅಲ್ಲದೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಯೊಂದಿಗೆ ಮಿತಿ ಮಿರಿದ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಪಾಕ್ ಐಸಿಸಿಗೆ ದೂರು ನೀಡಿತ್ತು. ಅಲ್ಲದೆ ಪಂದ್ಯದ ವೇಳೆ ಹಾಜರಿದ್ದ ಪಿಸಿಬಿ ಅಧ್ಯಕ್ಷ ಝಕಾ ಆಶ್ರಫ್​ ಕೂಡ ಮೂರು ದಿನಗಳ ಬಳಿಕ ಪಾಕ್ ಪತ್ರಕರ್ತರು, ಅಭಿಮಾನಿಗಳಿಗೆ ವೀಸಾ ವಿಳಂಬದ ಬಗ್ಗೆ ಐಸಿಸಿಗೆ ದೂರು ನೀಡಿದ್ದರು.

ಪಾಕ್​ ನಡುವಿನ ವಿಶ್ವಕಪ್ ಟೂರ್ನಿಯ ಪಂದ್ಯ ಬಿಸಿಸಿಐನ ಕಾರ್ಯಕ್ರಮ ಎನ್ನುವಂತೆ ಭಾಸವಾಯಿತು. ಪ್ರೇಕ್ಷಕರ ಬೆಂಬಲವೂ ಪಾಕ್ ಆಟಗಾರರಿಗೆ ದೊರೆಯಲಿಲ್ಲ. ತಂಡದ ಸೋಲು-ಗೆಲುವಿನಲ್ಲಿ ಬೆಂಬಲಿಗರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸೋಲಿನ ಬಳಿಕ ಪಾಕ್ ಕೋಚ್ ಮಿಕ್ಕಿ ಅರ್ಥರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಮಿಕ್ಕಿ ಅರ್ಥರ್ ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರುಗಣಿಸಿರುವ ಐಸಿಸಿ ತಮ್ಮ ಹೇಳಿಕಯ ಬಗ್ಗೆ ಸ್ಪಷ್ಟನೆ ನೀಡುತಂತೆ ಆದೇಶಿಸಿದೆ.

ಪಾಕ್​ಗೆ 8ನೇ ಸೋಲು

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಡೇಡಿಯಂನಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತ್ತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತ್ತು. ಭಾರತ ತಂಡ ಈ ಗೆಲುವಿನಿಂದಿಗೆ 1992ರಿಂದ ಮೊದಲ್ಗೊಂಡು 2023ರ ವರೆಗಿನ ಎಲ್ಲ 8 ಪಂದ್ಯಗಳಲ್ಲೂ ಗೆಲುವು ದಾಖಲಿಸಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.

Exit mobile version