Site icon Vistara News

IND vs SL: ಮರುಕಳಿಸೀತೇ 12 ವರ್ಷಗಳ ಹಿಂದಿನ ಫೈನಲ್​ ಪಂದ್ಯದ ಥ್ರಿಲ್?

India vs Sri Lanka, 33rd Match

ಮುಂಬಯಿ: ಸರಿಯಾಗಿ 12 ವರ್ಷಗಳ ಹಿಂದೆ ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ 2011ರ ವಿಶ್ವಕಪ್​ ಫೈನಲ್​ನಲ್ಲಿ ಮಹೇಂದ್ರ ಸಿಂಗ್​ ಧೋನಿ ಸಾರಥ್ಯದ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ 2ನೇ ವಿಶ್ವಕಪ್​ ಎತ್ತಿ ಹಿಡಿದಿತ್ತು. ಇದೀಗ ಹಾಲಿ ಆವೃತ್ತಿಯ ವಿಶ್ವಕಪ್​ನ ಲೀಗ್​ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಭಾರತ ಇದೇ ಸ್ಟೇಡಿಯಂನಲ್ಲಿ ಪಂದ್ಯ ಆಡಲು ಸಿದ್ಧವಾಗಿದೆ. ಇತ್ತಂಡಗಳ ಈ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯವನ್ನು ಅಭಿಮಾನಿಗಳು ಅಂದಿನ 2011ರ ವಿಶ್ವಕಪ್​ ಪಂದ್ಯದಂತೆ ನಿರೀಕ್ಷೆ ಮಾಡಿದ್ದಾರೆ.

ಅದು ಏಪ್ರಿಲ್‌ 2ರ ರಾತ್ರಿ ಹತ್ತು ದಾಟಿದ ಹೊತ್ತು, ಮುಂಬೈಯ ವಾಂಖೆಡೆ ಮೈದಾನದಲ್ಲಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಶ್ರೀಲಂಕಾದ ಕುಲಶೇಖರನ್​ ಎಸೆತಕ್ಕೆ ಸಿಕ್ಸರ್​ ಬಾರಿಸಿ ಭಾರತಕ್ಕೆ ಜಯ ಅಮೋಘ ಜಯ ತಂದಿತ್ತರು. ಇಡೀ ದೇಶವೇ ಹುಚ್ಚೆದ್ದು ಕುಣಿದಿತ್ತು. ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ‌(World Cup History) ಕನಸೊಂದು ಸಾಕಾರಗೊಂಡಿತ್ತು.


ಮತ್ತೊಮ್ಮೆ ರವಿಶಾಸ್ತ್ರಿ ಕಾಮೆಂಟ್ರಿ ನಿರೀಕ್ಷೆ…

ಫೈನಲ್​ನಲ್ಲಿ ಟೀಮ್​ ಇಂಡಿಯಾ ಶ್ರೀಲಂಕಾ ವಿರುದ್ಧ ಆರು ವಿಕೆಟ್​ಗಳ ಅಂತರದಿಂದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಮಹೇಲಾ ಜಯವರ್ಧನೆ ಶತಕದ ನೆರವಿನಿಂದ 275 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡ ಗೌತಮ್ ಗಂಭೀರ್(gautam gambhir) ಅವರ 97 ರನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 91 ರನ್ ನೆರವಿನಿಂದ ಜಯಭೇರಿ ಬಾರಿಸಿ ಇತಿಹಾಸ ನಿರ್ಮಿಸಿತ್ತು.

ಇದನ್ನೂ ಓದಿ Quinton de Kock: ಶತಕ ಬಾರಿಸಿ ಸಂಗಕ್ಕರ ದಾಖಲೆ ಸರಿಗಟ್ಟಿದ ಕ್ವಿಂಟನ್​ ಡಿ ಕಾಕ್


ಅಂದು ಕಾಮೆಂಟ್ರಿ ಮಾಡುತ್ತಿದ್ದ 1983ರ ವಿಶ್ವಕಪ್​ ತಂಡದ ಸದಸ್ಯ ರವಿಶಾಸ್ತ್ರಿ ಅವರು ತಮ್ಮ ಕಂಚಿನ ಕಂಠದಲ್ಲಿ ‘ಇಂಡಿಯಾ ಲಿಫ್ಟ್ ದಿ ವರ್ಲ್ಡ್ ಕಪ್, ಆಫ್ಟರ್ 28 ಇಯರ್ಸ್” ಎಂದು ಹೇಳುವ ಮೂಲಕ ಈ ಗೆಲುವನ್ನು ಸಂಭ್ರಮಿಸಿದ್ದರು. ಇದೀಗ ಗುರುವಾರ ನಡೆಯುವ ಪಂದ್ಯದಲ್ಲಿಯೂ ಭಾರತ ಇದೇ ರೀತಿಯಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶ ಪಡೆಯುವುದನ್ನು ರವಿಶಾಸ್ತ್ರಿ ತಮ್ಮದೇ ಶೈಲಿಯಲ್ಲಿ ಕಾಮೆಂಟ್ರಿ ಮೂಲಕ ಹೇಳುವ ಸೌಭಾಗ್ಯ ಸಿಗಲಿ ಎನ್ನುವುದು ಶತಕೋಟಿ ಭಾರತೀಯರ ಆಶಯವಾಗಿದೆ.

ಇದನ್ನೂ ಓದಿ IND vs SL: ಇಂಡೋ-ಲಂಕಾ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳು ಹೀಗಿದೆ


ಕಡೆಗಣಿಸಿದರೆ ಅಪಾಯ…

ಲಂಕಾ ತಂಡ ಭಾರತಕ್ಕೆ ಹೋಲಿಸಿದರೆ ದುರ್ಬಲದಂತೆ ಕಂಡರೂ ಈ ಸವಾಲನ್ನು ಅಷ್ಟು ಸುಲಭವಾಗಿ ಪರಿಗಣಿಸಬಾರದು. ಏಕೆಂದರೆ ಲಂಕಾ ಹಾಲಿ ಚಾಂಪಿಯನ್​ ಇಂಗ್ಲೆಂಡ್​ಗೆ 8 ವಿಕೆಟ್​ಗಳ ಸೋಲುಣಿಸಿತ್ತು. ಹೀಗಾಗಿ ಲಂಕಾ ಸವಾಲನ್ನು ಭಾರತ ಯಾವುದೇ ಕಾರಣಕ್ಕೂ ಲಘುವಾಗಿ ಕಾಣದೆ ಬಲಿಷ್ಠ ಎದುರಾಳಿಯೆಂದೇ ತಿಳಿದು ಆಡಬೇಕು.

ಇದನ್ನೂ ಓದಿ NZ vs SA: ಕಿವೀಸ್​ ಕಿವಿ ಹಿಂಡಿದ ಹರಿಣ ಪಡೆ; 190 ರನ್​ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೆ ಜಿಗಿತ

ವಿಶ್ವಕಪ್​ ಮುಖಾಮುಖಿ

ಭಾರತ ಮತ್ತು ಶ್ರೀಲಂಕಾ ತಂಡಗಳು ವಿಶ್ವಕಪ್​ನಲ್ಲಿ ತನ್ನದೇ ಆದ ದಾಖಲೆಗಳನ್ನು ಹೊಂದಿದೆ. ಉಭಯ ತಂಡಗಳು ಒಟ್ಟು 9 ಬಾರಿ ವಿಶ್ವಕಪ್​ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇತ್ತಂಡಗಳು ತಲಾ 4 ಪಂದ್ಯಗಳನ್ನು ಗೆದ್ದ ದಾಖಲೆ ಹೋಂದಿದೆ. 1992ರ ವಿಶ್ವಕಪ್​ ಪಂದ್ಯವೊಂದು ಮಳೆಯಿಂದ ರದ್ದುಗೊಂಡಿತ್ತು.

ಭಾರತದ ಮೊದಲ ಗೆಲುವು

ಭಾರತ ತಂಡ ಲಂಕಾ ವಿರುದ್ಧ ವಿಶ್ವಕಪ್​ನಲ್ಲಿ ಮೊದಲ ಗೆಲುವು ಸಾಧಿಸಿದ್ದು 1999ರಲ್ಲಿ. ಈ ಪಂದ್ಯವನ್ನು ಭಾರತ ಭರ್ಜರಿ 157ರನ್​ಗಳಿಂದ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ರಾಹುಲ್​ ದ್ರಾವಿಡ್​ ಮತ್ತು ಸೌರವ್​ ಗಂಗೂಲಿ ಪ್ರಚಂಡ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿ ಸಂಭ್ರಮಿಸಿದ್ದರು. ದ್ರಾವಿಡ್​ 145 ರನ್​ ಬಾರಿಸಿದರೆ, ಗಂಗೂಲಿ 183 ರನ್​ ಬಾರಿಸಿದ್ದರು.

Exit mobile version