Site icon Vistara News

AUS vs NED: ಬೆಳಕಿನಾಟದ ವಿಚಾರದಲ್ಲಿ ಮ್ಯಾಕ್ಸ್​ವೆಲ್​-ವಾರ್ನರ್​ ಮಧ್ಯೆ ಭಿನ್ನಾಭಿಪ್ರಾಯ

Arun Jaitley Stadium

ನವದೆಹಲಿ: ಭಾರತ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ(icc world cup 2023) ಕ್ರೀಡಾಭಿಮಾನಿಗಳ ಗಮನ ಸೆಳೆಯುವ ಉದ್ದೇಶದಿಂದ ಬಿಸಿಸಿಐ ಪಂದ್ಯ ವಿರಾಮದ ವೇಳೆ ಸ್ಟೇಡಿಯಂನಲ್ಲಿ ಲೇಸರ್​ ಶೋ ಮತ್ತು ಬೆಳಕಿನ ಪ್ರದರ್ಶನವನ್ನು(lighting show) ಮಾಡುತ್ತದೆ. ಆದರೆ ಇದೇ ವಿಚಾರದಲ್ಲಿ ಆಸೀಸ್​ ತಂಡದ ಆಟಗಾರರಿಬ್ಬರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೌದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ(Arun Jaitley Stadium) ಬುಧವಾರ ನಡೆದ ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್(AUS vs NED)​ ನಡುವಣ ಪಂದ್ಯದಲ್ಲಿ ವಿರಾಮದ ವೇಳೆ ಸ್ಟೇಡಿಯಂನ ಲೈಟ್ಸ್​ಗಳನ್ನು ಆರಿಸಿ ಬಳಿಕ ಬಣ್ಣ ಬಣ್ಣದ ಬೆಳಕಿನ ಪ್ರದರ್ಶನ ಮಾಡಲಾಯಿತು. ಈ ವಿಚಾರದಲ್ಲಿ ಆಸೀಸ್​ ತಂಡದ ಗ್ಲೆನ್​ ಮ್ಯಾಕ್ಸ್​ವೆಲ್(glenn maxwell)​ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Odi Cricket History: ಏಕದಿನ ಕ್ರಿಕೆಟ್​ನಲ್ಲಿ ಗೆಲುವಿನ ದಾಖಲೆ ಬರೆದ ಆಸ್ಟ್ರೇಲಿಯಾ

ವಿಸ್ಫೋಟಕ ಬ್ಯಾಟಿಂಗ್​ ಮೂಲಕ ವಿಶ್ವಕಪ್​ನಲ್ಲಿ ದಾಖಲೆಯ ಶತಕ ಬಾರಿಸಿದ ಮ್ಯಾಕ್ಸ್​ವೆಲ್​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡುವ ವೇಳೆ ತಮ್ಮ ಅಸಮಾಧಾನವನ್ನು ಹೊರಹಾಕಿದರು. “ಬೆಳಕಿನ ಪ್ರದರ್ಶನವು ಪ್ರೇಕ್ಷಕರಿಗೆ ಮನರಂಜನೆ ಆದರೆ ಆಟಗಾರರಿಗೆ ಇದು ಕೆಟ್ಟ ಕಲ್ಪನೆಯಾಗಿದೆ. ಏಕೆಂದರೆ ಇದು ಆಟಗಾರರನ್ನು ವಿಚಲಿತಗೊಳಿಸಿ ಪಂದ್ಯದ ಮೇಲೆ ಕೇಂದ್ರೀಕರಿಸಲು ಅಡ್ಡಿಯುಂಟುಮಾಡುತ್ತದೆ. ಇದು ಕ್ರಿಕೆಟಿಗರ ಪಾಲಿಗೆ ಅತ್ಯಂತ ಕೆಟ್ಟ ವಿಚಾರ” ಎಂದಿದ್ದಾರೆ.

ಅತಿ ವೇಗದ ಶತಕ ಬಾರಿಸಿದ ಮ್ಯಾಕ್ಸ್​ವೆಲ್​

ಈ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಆಡಲಿಳಿದ ಮ್ಯಾಕ್ಸ್​ವೆಲ್ ನೆದರ್ಲೆಂಡ್ಸ್​ ಬೌಲರ್​ಗಳ ಮೇಲೆರಗಿ​ ಕೇವಲ 40 ಎಸೆತಗಳಿಂದ ಶತಕ ಬಾರಿಸಿ ವಿಶ್ವಕಪ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ ಇದೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಆಟಗಾರ ಐಡೆನ್​ ಮಾರ್ಕ್ರಮ್​ ಅವರು 49 ಎಸೆತಗಳಿಂದ ಶತಕ ಬಾರಿಸಿದ ದಾಖಲೆಯನ್ನು ಮುರಿದರು.

ಇದನ್ನೂ ಓದಿ AUS vs NED: ದುಬಾರಿ ಮೊತ್ತ ನೀಡಿ ಅನಗತ್ಯ ದಾಖಲೆ ಬರೆದ ಬಾಸ್ ಡಿ ಲೀಡೆ

ಈ ಹಿಂದೆ ಮ್ಯಾಕ್ಸ್​ವೆಲ್​ ಅವರು 2015ರ ವಿಶ್ವಕಪ್​ನಲ್ಲಿ 51 ಎಸೆತಗಳಿಂದ ಶತಕ ಬಾರಿಸಿದ್ದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಲು ಬಂದ ಮ್ಯಾಕ್ಸ್​ವೆಲ್​ ಅವರು ಒಟ್ಟು 44 ಎಸೆತ ಎದುರಿಸಿ 106 ರನ್​ಬಾರಿಸಿ ಔಟಾದರು. ಅವರ ಈ ಸೊಗಸಾದ ಬ್ಯಾಟಿಂಗ್​ ವೇಳೆ ಬರೋಬ್ಬರಿ 8 ಸಿಕ್ಸರ್​ ಮತ್ತು 9 ಬೌಂಡರಿ ಸಿಡಿಯಿತು.

ವಾರ್ನರ್​ ಮೆಚ್ಚುಗೆ

ಡೇವಿಡ್​ ವಾರ್ನರ್(david warner) ಅವರು ಬಿಸಿಸಿಐ ಈ ನಡೆಯನ್ನು ಶ್ಲಾಘಿಸಿದ್ದಾರೆ. “ವಿನೂತ ಶೈಲಿಯ ಈ ಲೈಟ್ ಶೋ ನನಗೆ ನನ್ನ ಮನಸ್ಸಿಗೆ ಮುದ ನೀಡಿದೆ. ಅಭಿಮಾನಿಗಳಿಲ್ಲದೆ ಕ್ರಿಕೆಟಿಗರೂ ಏನೂ ಅಲ್ಲ. ಅವರ ಖುಷಿಯೇ ನಮ್ಮ ಖುಷಿ” ಎಂದು ಟ್ವಿಟರ್​ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಸಚಿನದ ದಾಖಲೆ ಸರಿಗಟ್ಟಿದ ವಾರ್ನರ್​

ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾಕ್ಕೆ ಡೇವಿಡ್​ ವಾರ್ನರ್​ ಅವರು ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. 93 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 104 ರನ್​ ಬಾರಿಸಿ ಶತಕ ಸಂಭ್ರಮಿಸಿದರು. ಇದೇ ವೇಳೆ ವಿಶ್ವಕಪ್​ನಲ್ಲಿ ಟೂರ್ನಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ಸಚಿನ್​ ತೆಂಡೂಲ್ಕರ್​(Sachin Tendulkar) ಅವರ ದಾಖಲೆಯನ್ನು ಸರಿಗಟ್ಟಿದರು. ಸಚಿನ್​ ಮತ್ತು ವಾರ್ನರ್​ ವಿಶ್ವಕಪ್​ನಲ್ಲಿ ತಲಾ 6 ಶತಕ ಬಾರಿಸಿದ್ದಾರೆ.  7 ಶತಕ ಬಾರಿಸಿರುವ ರೋಹಿತ್​ ಶರ್ಮ ಅವರು ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್​ ಅವರು ಈ ದಾಖಲೆಯನ್ನು ಹಾಲಿ ಆವೃತ್ತಿಯಲ್ಲಿ ನಿರ್ಮಿಸಿದ್ದರು. 

Exit mobile version