ಮುಂಬಯಿ: ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್(ICC World Cup 2023) ಪಂದ್ಯಗಳ ಟಿಕೆಟ್(icc world cup tickets) ಮಾರಾಟ ಈಗಾಗಲೇ ಆರಂಭಗೊಂಡಿದೆ. ಹಲವು ಪಂದ್ಯಗಳ ಟಿಕೆಟ್ ಕೂಡ ಆನ್ಲೈನ್ನಲ್ಲಿ ಸೋಲ್ಡ್ ಔಟ್ ಆಗಿದೆ. ಆದರೆ ಹೈವೋಲ್ಟೇಜ್ ಕದನವಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವೆ ಅಕ್ಟೋಬರ್ 14ರಂದು ನಡೆಯುವ ಪಂದ್ಯದ ಟಿಕೆಟ್ ದರ ಕೇಳಿ ಕೆಲವರು ಅಚ್ಚರಿಗೊಂಡಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಇತ್ತಂಡಗಳ ಈ ಪಂದ್ಯದ ಎ ದರ್ಜೆಯ ಟಿಕೆಟ್‌ಗಳು ಜಾಗತಿಕ ಆನ್‌ಲೈನ್ ಪ್ಲಾಟ್‌ಫಾರ್ಮ್” ವಯಾಗೋಗೋದಲ್ಲಿ(Viagogo) ಕೇವಲ ಒಂದು ಟಿಕೆಟ್ನ ದರ 19,51,580 ರೂ.ಗೆ (ಶಿಪ್ಪಿಂಗ್ ಮತ್ತು ಹೋಮ್ ಡೆಲಿವರಿ ಹೆಚ್ಚುವರಿ) ಮಾರಾಟ ಮಾಡಲಾಗುತ್ತಿದೆ. ಆದರೆ ಅಧಿಕೃತ ಟಿಕೆಟ್ ಪಾಲುದಾರ ಬುಕ್ಮೈಶೋದಲ್ಲಿ (Bookmyshow.com) ಎಲ್ಲ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿದೆ. ಸದ್ಯ ವಯಾಗೊಗೊದಲ್ಲಿ ಇನ್ನೂ 100 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಹೊಂದಿದೆ ಎಂದು ವಯಾಗೊಗೊ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿರುವುದರಿಂದ, ಅಕ್ಟೋಬರ್ 5 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನ ಪಂದ್ಯವಾದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯಕ್ಕೆ ಕಡಿಮೆ ದರದಲ್ಲಿ ಟಿಕೆಟ್ ನೀಡಲು ಮುಂದಾಗಿದೆ. ಇಲ್ಲಿ ಎ ದರ್ಜೆಯ ಸೀಡ್ಗಳಿಗೆ ಕೇವಲ 6,000 ರೂ. ಮೊತ್ತದಿಂದ ಪ್ರಾರಂಭವಾಗಿ 1,000, 1,500, 2,000 ಮತ್ತು 3,000 ರೀಗಳ ಟಿಕೆಟ್ ದೊರೆಯಲಿದೆ.
ಭಾರತದ ಇತರ ಪಂದ್ಯಗಳ ಟಿಕೆಟ್ ಕೂಡ ಅತ್ಯಂತ ದುಬಾರಿ ಮೊತ್ತದಿಂದ ಕೂಡಿದೆ. ಕ್ರಿಕೆಟ್ ಅಭಿಮಾನಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಲಕ್ನೋದಲ್ಲಿ ನಡೆಯುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಟಿಕೆಟ್‌ಗಳು 2,34,632 ರೂ. ಆರಂಭಿಕ ಬೆಲೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಆರಂಭಿಕ ಬೆಲೆ 38,877 ರೂ.ಗಳು, ವರ್ಗ ‘ಎ’ ಟೀಕೆಟ್ಗೆ 2,34,622 ರೂ. ನಿಗದಿಯಾಗಿದೆ. ಒಟ್ಟಾರೆ ಆನ್ಲೈನ್ನಲ್ಲಿ ವಿಪರೀತ ಮೊತ್ತಕ್ಕೆ ಟಿಕೆಟ್ ನಿಗದಿ ಮಾಡಿದಕ್ಕೆ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಟೂರ್ನಿ ಆರಂಭ
ಸಂಪೂರ್ಣವಾಗಿ ಭಾರತ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಈ ಮಹತ್ವದ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯ ಮತ್ತು ಫೈನಲ್ ಪಂದ್ಯಗಳೆರಡು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ.
ಇದನ್ನೂ ಓದಿ ICC World Cup 2023: ವಿಶ್ವಕಪ್ಗೆ ಕೇನ್ ವಿಲಿಯಮ್ಸನ್ ಫಿಟ್; ನಿಟ್ಟುಸಿರು ಬಿಟ್ಟ ಕಿವೀಸ್
ಭಾರತದ ಪಂದ್ಯಗ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಪಾಕಿಸ್ತಾನ- 14 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ
ಭಾರತ vs ನ್ಯೂಜಿಲ್ಯಾಂಡ್- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ
ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಭಾರತ vs ನೆದರ್ಲೆಂಡ್ಸ್ – 12 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು