Site icon Vistara News

ವಿಶ್ವಕಪ್ ಹೀರೊ ಈಗ ರಿಯಲ್ ಲೈಫ್ ಹೀರೊ; ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ ಜೋಗಿಂದರ್ ಶರ್ಮಾ

Joginder Sharma

ಅಂಬಾಲಾ (ಹರಿಯಾಣ): ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಜೋಗಿಂದರ್ ಶರ್ಮಾ ಅವರು ಅಂಬಾಲಾದಲ್ಲಿ ಉಂಟಾಗಿರುವ ವಿನಾಶಕಾರಿ ಪ್ರವಾಹ ಪೀಡಿತರ ಪಾಲಿಗೆ ಹೀರೋ ಆಗಿ ಮಾರ್ಪಟ್ಟಿದ್ದಾರೆ. 2007ರ ಟಿ 20 ವಿಶ್ವಕಪ್ ಹೀರೋ ಅಂಬಾಲಾದಲ್ಲಿ ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಅವರ ಪ್ರಯತ್ನಗಳಿಗೆ ಸ್ಥಳೀಯವಾಗಿ ಮೆಚ್ಚುಗೆ ವ್ಯಕ್ತಗೊಂಡಿವೆ.

ರೋಹ್ಟಕ್ ಮೂಲದವರಾದ ಜೋಗಿಂದರ್ ಶರ್ಮಾ ದೇಶೀಯ ಕ್ರಿಕೆಟ್​​ನಲ್ಲಿ ಹರಿಯಾಣವನ್ನು ಪ್ರತಿನಿಧಿಸಿದ್ದರು. ಅವರಿಗ ಪ್ರವಾಹ ಪೀಡಿತರ ಪುನರ್ವಸತಿಗಾಗಿ ಕಾರ್ಯ ನಿರ್ಗಹಿಸುತ್ತಿರುವ ವಿಡಿಯೊವನ್ನು ಟ್ವಿಟರ್​ನಲ್ಲಿ ಹಾಕಿಕೊಂಡಿದ್ದಾರೆ. ಮೊಣಕಾಲು ಮಟ್ಟದ ನೀರಿನಲ್ಲಿ ನಿಂತಿರುವ ಅವರು ಪ್ರವಾಹ ಸಂತ್ರಸ್ತರಿಗೆ ನೆರವಾಗುತ್ತಿರುವುದು ಆ ವಿಡಿಯೊದಲ್ಲಿ ಕಂಡು ಬಂದಿದೆ.

ನಿಮ್ಮನ್ನು ಹೆದರಿಸುವ ಪ್ರವಾಹದಿಂದ ಪಾರಾಗಲು ಅಂಬಾಲಾ ಪೊಲೀಸ್ ತಂಡ ನೆರವು ನೀಡುತ್ತದೆ” ಎಂದು ಅವರು ಟ್ವೀಟ್​ ಪೋಸ್ಟ್​​ಗೆ ಶೀರ್ಷಿಕೆ ನೀಡಿದ್ದಾರೆ.

ಉತ್ತರ ಭಾರತದಲ್ಲಿ ಎಲ್ಲೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಿಶೇಷವಾಗಿ ದೆಹಲಿ, ದೆಹಲಿ ಎನ್​​ಸಿರಾರ್​, ಹರಿಯಾಣ ಮತ್ತು ಪಂಜಾಬ್​​ನಲ್ಲಿ ಸಿಕ್ಕಾಪಟ್ಟೆ ಹಾನಿ ಉಂಟಾಗಿದೆ. ಪರಿಸ್ಥಿತಿ ನಿರ್ವಹಣೆಗೆ ವ್ಯಾಪಕ ರಕ್ಷಣಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ವಿವಿಧ ಸಂಸ್ಥೆಗಳು ಮತ್ತು ಸೈನ್ಯದ ಪಾಲ್ಗೊಳ್ಳುವಿಕೆಯೊಂದಿಗೆ ಸಂತ್ರಸ್ತ ನಾಗರಿಕೆಗೆ ರಕ್ಷಣೆ ನೀಡಲಾಗುತ್ತಿದೆ.

ಇದನ್ನೂ ಓದಿ : Joginder Sharma : ಟಿ20 ವಿಶ್ವ ಕಪ್​ ವಿಜೇತ ವೇಗದ ಬೌಲರ್​ ಜೋಗಿಂದರ್ ಶರ್ಮಾ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ

ಜೋಗಿಂದರ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಪ್ರಮುಖ ಅಂಶವೆಂದರೆ 2007ರಲ್ಲಿ ಉದ್ಘಾಟನಾ ಟಿ 20 ವಿಶ್ವಕಪ್ನ ಫೈನಲ್​​ನ ಸ್ಮರಣೀಯ ಬೌಲಿಂಗ್ ಸ್ಪೆಲ್. ಎಂ.ಎಸ್.ಧೋನಿ ನೇತೃತ್ವದ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತದ ಐತಿಹಾಸಿಕ ಗೆಲುವು ಸಾಧಿಸುವಲ್ಲಿ ಜೋಗಿಂದರ್​ ನಿರ್ಣಾಯಕ ಪಾತ್ರ ವಹಿಸಿದ್ದರು. ಕೊನೆಯ ಓವರ್​ನಲ್ಲಿ 12 ರನ್​ಗಳನ್ನು ರಕ್ಷಿಸುವ ದೊಡ್ಡ ಜವಾಬ್ದಾರಿಯನ್ನು ಜೋಗಿಂದರ್​ಗೆ ನೀಡಲಾಗಿತ್ತು. ಮಿಸ್ಬಾ-ಉಲ್-ಹಕ್ ಅವರ ಪ್ರಮುಖ ವಿಕೆಟ್ ಪಡೆದ ವೇಗದ ಬೌಲರ್ ಭಾರತಕ್ಕೆ ಐದು ರನ್​ಗಳ ಗೆಲುವು ತಂದುಕೊಟ್ಟಿದ್ದರು.

ಟಿ 20 ವಿಶ್ವಕಪ್ ನಂತರ ಜೋಗಿಂದರ್ ಶರ್ಮಾ ನಾಲ್ಕು ಏಕದಿನ ಮತ್ತು ಆಷ್ಟೇ ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು, ಒಟ್ಟು ಐದು ವಿಕೆಟ್​ಗಳನ್ನು ಪಡೆದಿದ್ದಾರೆ. ದೇಶೀಯ ಕ್ರಿಕೆಟ್​​ನಲ್ಲಿ ಜೋಗಿಂದರ್ ಶರ್ಮಾ 77 ಪಂದ್ಯಗಳಿಂದ 297 ವಿಕೆಟ್​ಗಳನ್ನು ಪಡೆದಿದ್ದು, 21.09 ಸರಾಸರಿ ಮತ್ತು 2.65 ಎಕಾನಮಿ ರೇಟ್ ಹೊಂದಿದ್ದಾರೆ. ಹೆಚ್ಚುವರಿಯಾಗಿ, ಲಿಸ್ಟ್-ಎ ಕ್ರಿಕೆಟ್​ನಲ್ಲಿ 80 ಪಂದ್ಯಗಳಿಂದ 115 ವಿಕೆಟ್​ ಉರುಳಿಸಿದ್ದಾರೆ. 23.22 ಸರಾಸರಿ ಮತ್ತು 4.48 ಎಕಾನಮಿ ರೇಟ್ ಹೊಂದಿದ್ದಾರೆ.

Exit mobile version