ಬೆಂಗಳೂರು: ಏಕದಿನ ವಿಶ್ವಕಪ್ನಲ್ಲಿ(World Cup History) ಅತ್ಯಧಿಕ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿ ಇಲ್ಲಿದೆ. ಈ ಬಾರಿಯ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭಗೊಂಡು ನವೆಂಬರ್ 19ರ ತನಕ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದೆ.
1. ಸಚಿನ್ ತೆಂಡೂಲ್ಕರ್(Sachin Tendulkar)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಅತ್ಯಧಿಕ ವಿಶ್ವಕಪ್ ಆಡಿದ ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ. ಒಟ್ಟು 6 ವಿಶ್ವಕಪ್ ಟೂರ್ನಿಗಳನ್ನು ಆಡಿ ಹಲವು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಒಟ್ಟು 45 ವಿಶ್ವಕಪ್ ಪಂದ್ಯಗಳನ್ನು ಆಡಿ 2278 ರನ್ ಬಾರಿಸಿದ್ದಾರೆ. ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ಗೆ ಮೊದಲ ಸ್ಥಾನ. 15 ಅಧರ್ಶಶತಕ ಬಾರಿಸಿದ್ದಾರೆ. 6 ಶತಕ ದಾಖಲಾಗಿದೆ.
2. ಶಕೀಬ್ ಅಲ್ ಹಸನ್(Shakib Al Hasan)
ಬಾಂಗ್ಲಾದೇಶ ತಂಡದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ 29 ವಿಶ್ವಕಪ್ ಪಂದ್ಯಗಳಿಂದ 10* ಅರ್ಧಶತಕ ಬಾರಿಸಿದ್ದಾರೆ. ಈ ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಅವರಿಗೆ ತಮ್ಮ ಅರ್ಧಶತಕಗಳ ಸಂಖ್ಯೆಯನ್ನು ಹೆಚ್ಚಿಸುವ ಅವಕಾಶವಿದೆ. 2 ಶತಕ ಬಾರಿಸಿದ್ದಾರೆ. 1146* ರನ್ ಗಳಿಸಿದ್ದಾರೆ. 36 ವರ್ಷದ ಶಕೀಬ್ಗೆ ಇದು ಕೊನೆಯ ವಿಶ್ವಕಪ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ World Cup History: ವಿಶ್ವಕಪ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರು
3. ಜಾಕ್ ಕ್ಯಾಲಿಸ್(Jacques Kallis)
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಕ್ ಕ್ಯಾಲಿಸ್ ಅವರು ವಿಶ್ವಕಪ್ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. 36 ವಿಶ್ವಕಪ್ ಪಂದ್ಯಗಳನ್ನು ಆಡಿರುವ ಅವರು 9 ಅರ್ಧಶತಕ ಬಾರಿಸಿದ್ದಾರೆ. 1148 ರನ್ ಬಾರಿಸಿದ್ದಾರೆ.
ಇದನ್ನೂ ಓದಿ World Cup History: ಲಾರ್ಡ್ಸ್ ಅಂಗಳದಲ್ಲಿ ಚೊಚ್ಚಲ ವಿಶ್ವಕಪ್ ಎತ್ತಿದ ‘ಕಪಿಲ್ ಡೆವಿಲ್ಸ್’
4. ಸ್ಟೀವನ್ ಸ್ಮಿತ್(steve smith)
ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಆಟಗಾರ ಸ್ಟೀವನ್ ಸ್ಮಿತ್ ಅವರು ಸದ್ಯ 24 ವಿಶ್ವಕಪ್ ಪಂದ್ಯಗಳನ್ನು ಆಡಿ 8 ಅರ್ಧಶತಕ ಬಾರಿಸಿದ್ದಾರೆ. 834 ರನ್ ಗಳಿಸಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿಯೂ ಅವರು ಆಡುತ್ತಿರುವ ಕಾರಣ ತಮ್ಮ ಅರ್ಧಶತಕಗಳ ಸಂಖ್ಯೆಯನ್ನು ಹೆಚ್ಚಿಸುವ ಅವಕಾಶವಿದೆ. ಅಲ್ಲದೆ ಅವರು ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. 2015 ವಿಶ್ವಕಪ್ ವಿಜೇತ ತಂಡದಲ್ಲಿ ಆಡಿದ್ದರು.
5.ಹರ್ಷಲ್ ಗಿಬ್ಸ್(Herschelle Gibbs)
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ಅವರು ವಿಶ್ವಕಪ್ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಒಟ್ಟು 25 ಪಂದ್ಯಗಳಿಂದ 1067 ರನ್ ಬಾರಿಸಿದ್ದಾರೆ. 8 ಅರ್ಧಶತಕ ಸಿಡಿಸಿದ್ದಾರೆ.
ಇದನ್ನೂ ಓದಿ World Cup History: ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಸರ್ವಾಧಿಕ 5 ಬಾರಿ ಚಾಂಪಿಯನ್
6. ಮೊಹಮ್ಮದ್ ಅಜರುದ್ದೀನ್(Mohammad Azharuddin)
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರು 8 ಅರ್ಧಶತಕ ಬಾರಿಸಿದ್ದಾರೆ. 30 ವಿಶ್ವಕಪ್ ಪಂದ್ಯಗಳನ್ನು ಆಡಿರುವ ಅಜರುದ್ದೀನ್ 826 ರನ್ ಬಾರಿಸಿದ್ದಾರೆ.
7. ಯುವರಾಜ್ ಸಿಂಗ್(Yuvraj Singh)
2011ರ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಅವರು 23 ವಿಶ್ವಕಪ್ ಪಂದ್ಯಗಳನ್ನು ಆಡಿ 7 ಅರ್ಧಶತಕ ಬಾರಿಸಿದ್ದಾರೆ. 738 ರನ್ ಕಲೆಹಾಕಿದ್ದಾರೆ. ಒಂದು ಶತಕ ಸಿಡಿಸಿದ್ದಾರೆ. 2011ರ ವಿಶ್ವಕಪ್ನಲ್ಲಿ ಯುವಿ ಅವರ ಅಸಾಮಾನ್ಯ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಒಂದು ಶತಕ, ನಾಲ್ಕು ಅರ್ಧಶತಕ ಸೇರಿ ಒಟ್ಟು 362 ರನ್ ಬಾರಿಸಿದ್ದರು. ಬೌಲಿಂಗ್ನಲ್ಲಿಯೂ ಮಿಂಚಿ 15 ವಿಕೆಟ್ ಕೆಡವಿದ್ದರು.
ಇದನ್ನೂ ಓದಿ World Cup History: ರೋಚಕ ಫೈನಲ್ನಲ್ಲಿ ಗೆದ್ದು ಬೀಗಿ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದ ವೆಸ್ಟ್ ಇಂಡೀಸ್!
8. ರಿಕಿ ಪಾಂಟಿಂಗ್(Ricky Ponting)
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್ ಗೆದ್ದ ಸಾಧನೆ ಮಾಡಿದ್ದಾರೆ. 46 ವಿಶ್ವಕಪ್ ಪಂದ್ಯಗಳನ್ನು ಆಡಿ 1743 ರನ್ ಬಾರಿಸಿದ್ದಾರೆ. 6 ಅರ್ಧಶತಕ ದಾಖಲಿಸಿದ್ದಾರೆ. 5 ಶತಕ ಕೂಡ ಬಾರಿಸಿದ್ದಾರೆ.
9. ರಾಹುಲ್ ದ್ರಾವಿಡ್(Rahul Dravid)
ಟೀಮ್ ಇಂಡಿಯಾದ ಮಾಜಿ ಆಟಗಾರ ಪ್ರಸ್ತುತ ಹೆಡ್ ಕೋಚ್ ಆಗಿರುವ 6 ಅರ್ಧಶತಕ ಬಾರಿಸಿದ್ದಾರೆ. 22 ವಿಶ್ವಕಪ್ ಪಂದ್ಯಗಳನ್ನು ಆಡಿ 860 ರನ್ ಕಲೆಹಾಕಿದ್ದಾರೆ. 2 ಶತಕ ದಾಖಲಿಸಿದ್ದಾರೆ. 2007ರ ವಿಶ್ವಕಪ್ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ಭಾರತ ಲೀಗ್ನಲ್ಲೇ ಸೋಲು ಕಂಡಿತ್ತು. ಈ ಬಾರಿ ತಂಡದ ಕೋಚ್ ಆಗಿ ವಿಶ್ವಕಪ್ ಗೆಲ್ಲುವ ಅವಕಾಶ ಅವರಿಗಿದೆ.
10. ಕುಮಾರ ಸಂಗಕ್ಕರ(kumara sangakkara)
ಶ್ರೀಲಂಕಾದ ಮಾಜಿ ನಾಯಕ ಹಾಗೂ ಆಟಗಾರ ಕುಮಾರ ಸಂಗಕ್ಕರ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. 37 ಪಂದ್ಯಗಳನ್ನು ಬರೆದಿರುವ ಅವರು 7 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 1532 ರನ್ ಕಲೆಹಾಕಿದ್ದಾರೆ. 5 ಶತಕ ದಾಖಲಾಗಿದೆ.
ಹೆಚ್ಚಿನ ವಿಶ್ವಕಪ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ