ಬೆಂಗಳೂರು: ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್(Ishan Kishan) ಇನ್ನೇನು ಸರಣಿ ಆರಂಭಕ್ಕೆ ಒಂದೆರಡು ದಿನಗಳು ಬಾಕಿ ಇರುವಾಗ ಮಾನಸಿಕ ಸಮಸ್ಯೆಯ ವಿಷಯವನ್ನು ಮುನ್ನೆಲೆಗೆ ತಂದು ಈ ಸರಣಿಯಿಂದ ಹಿಂದೆ ಸರಿದಿದ್ದರು. ಬಳಿಕ ದೇಶೀಯ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿಯಲ್ಲಿ ಆಡುವಂತೆ ಸೂಚಿಸಿದ ಆಯ್ಕೆ ಸಮಿತಿ ಮತ್ತು ಕೋಚ್ ದ್ರಾವಿಡ್ ಅವರ ಸಲಹೆಯನ್ನು ಕಡೆಗಣಿಸಿ ಬರೋಡಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ಐಪಿಎಲ್ಗಾಗಿ ಅಭ್ಯಾಸ ನಡೆಸುತ್ತಿದ್ದಾರೆ(ishan kishan practice) ಎಂಬ ಮಾತುಗಳು ಕೇಳಿ ಬಂದಿತ್ತು. ಇದೇ ವಿಚಾರವಾಗಿ ಇಶಾನ್ ವಿರುದ್ಧ ಹಲವು ಟೀಕೆಗಳು ಕೂಡ ಕೇಳಿ ಬಂದಿತ್ತು. ಆದರೆ ಅವರು ರಣಜಿ ಮತ್ತು ರಾಷ್ಟ್ರೀಯ ತಂಡದಿಂದ ದೂರ ಸರಿದಿರುವ ಕಾರಣ ಇದೀಗ ಬಹಿರಂಗವಾಗಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ಗ್ರೌಂಡ್ ರಿಪೋರ್ಟ್ ಪ್ರಕಾರ ಏಕದಿನ ವಿಶ್ವಕಪ್ ಸೋಲಿನ ಬಳಿಕ ಇಶಾನ್ ಕಿಶನ್ ಮಾನಸಿಕವಾಗಿ ಆಯಾಸಗೊಂಡಿರುವುದು ನಿಜ ಎಂದು ತಿಳಿಸಿದೆ. ಇದೇ ಕಾರಣದಿಂದ ಇಶಾನ್ ಕಳೆದ ಒಂದು ತಿಂಗಳಿನಿಂದ ಬರೋಡಾದಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಶಾನ್ ಅವರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲೆಂದೇ ಬರೋಡಾದಲ್ಲಿ 2BHK ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿರುವುದು.
Ishan Kishan looks so good. Doesn't even resemble himself from 2 months back. Happy his friends and family are with him while he started his training again to work on the 'technical aspects' Dravid told him he needs to work on in SA when KL was chosen to keep over him. pic.twitter.com/ESVypxId5H
— Sharan M. (@SharanM333902) February 17, 2024
ಇಶಾನ್ ಕಿಶನ್ ಅವರು ಬರೋಡಾದಲ್ಲಿ ಬಾಡಿಗೆ ಪಡೆದಿರುವ ಫ್ಲಾಟ್ನಲ್ಲಿ ತಮ್ಮ ಕುಟುಂಬದ ಜತೆಗಿದ್ದಾರೆ ಎನ್ನುದಕ್ಕೆ ಹಲವು ಫೋಟೊಗಳು ಕೂಡ ಸಾಕ್ಷಿಯಾಗಿದೆ. ಇಶಾನ್ ಅವರು ತಮ್ಮ ಸಹೋದನ ಮಕ್ಕಳು ಮತ್ತು ತಾಯಿದೊಂದಿರುವ ಫೋಟೊಗಳು ವೈರಲ್ ಆಗಿದೆ.
Ishan Kishan rented a 2BHK flat in Vadodara, where his family, except his elder brother, stays with him. Their support boosts him during this tough time. After constant travel since his debut, he cherishes home-cooked meals and spends time with his nephew, feeling relaxed. (IE) pic.twitter.com/tMai74nkot
— Vipin Tiwari (@Vipintiwari952_) February 18, 2024
ಅಚ್ಚರಿ ಎಂದರೆ ಇಶಾನ್ ಕಿಶನ್ ವಿರುದ್ಧ ಹಲವು ಟೀಕೆಗಳು ಕೇಳಿ ಬಂದರೂ ಕೂಡ ಅವರು ಈ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಕ್ಷಿಣ ಆಫ್ರಿಕಾ ಸರಣಿ ವೇಳೆ ರಜೆ ಪಡೆದಿದ್ದ ಇಶಾನ್ ನೆರವಾಗಿ ಭಾರತಕ್ಕೆ ಬರುವ ಬದಲು ದುಬೈನಲ್ಲಿ ಇಳಿದು ಪಾರ್ಟಿಗೆ ಹೋಗಿದ್ದರು. ಬಳಿಕ ದ್ರಾವಿಡ್ ಅವರು ರಣಜಿ ಆಡುವಂತೆ ಸೂಚನೆ ನೀಡಿದರೂ ಕೂಡ ಇದನ್ನು ಇಶಾನ್ ಕಡೆಗಣಿಸಿದ್ದರು ಎನ್ನಲಾಗಿತ್ತು.
ಇದೇ ವಿಚಾರವಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಪರೋಕ್ಷವಾಗಿ ಎಚ್ಚರಿಕೆಯನ್ನು ನೀಡಿದ್ದರು. ಇದನ್ನೂ ಕೂಡ ಇಶಾನ್ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಇಶಾನ್ ಬೇಕಂತಲ್ಲೇ ಕ್ರಿಕೆಟ್ ವೃತ್ತೀಜಿವನ ಹಾಳು ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಇದೀಗ ಇಶಾನ್ ಯಾವುದೇ ಐಪಿಎಲ್ ಅಭ್ಯಾಸ ಮಾಡುತ್ತಿಲ್ಲ, ಅವರು ನಿಜಕ್ಕೂ ತಮ್ಮ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ. ಮಾನಸಿಕವಾಗಿ ಸದೃಢವಾದ ಬಳಿಕ ಕ್ರಿಕೆಟ್ ಅಭ್ಯಾಸ ಆರಂಭಿಸಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ಕಾರ್ಯಚರಣೆಯಿಂದ ತಿಳಿದುಬಂದಿದೆ.