Site icon Vistara News

World Cup 2023 : ಮುಂಬಯಿ ತಲುಪಿದ ವಿಶ್ವ ಕಪ್​ ಟ್ರೋಫಿ

World Cup

ಮುಂಬಯಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿಶ್ವದಾದ್ಯಂತ ಹಲವಾರು ಸ್ಥಳಗಳಿಗೆ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕ ದಿನ ವಿಶ್ವ ಕಪ್​ ಟ್ರೋಫಿಯನ್ನು (World Cup 2023) ಪ್ರವಾಸವನ್ನು ಆಯೋಜಿಸಿದೆ. ಇದೀಗ ಟ್ರೋಫಿಯ ಮುಂಬಯಿಯ ಮಾಹಿಮ್​ನಲ್ಲಿರುವ ಬಾಂಬೆ ಸ್ಕಾಟಿಷ್ ಶಾಲೆಗೆ ಮಂಗಳವಾರ ಬಂದಿದೆ. ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದ ಹತ್ತು ಸ್ಥಳಗಳಲ್ಲಿ ವಿಶ್ವ ಕಪ್ ನಡೆಯಲಿದ್ದು ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.

ನಾವು ನಾಳೆ ವಿಶ್ವಕಪ್ ಅನ್ನು ನಮ್ಮ ಶಾಲೆಗೆ ತರುತ್ತೇವೆ. ಇದು ‘ಟ್ರೋಫಿ ಪ್ರವಾಸ’ದ ಒಂದು ಭಾಗವಾಗಿದೆ. ಟ್ರೋಫಿ ಕೊಲ್ಕೊತಾದಿಂದ ಲೇಹ್​​ಗೆ ಪ್ರಯಾಣಿಸಿ ಅಲ್ಲಿಂದ ಮುಂಬಯಿಗೆ ಬರುತ್ತಿದೆ. ಟ್ರೋಫಿಗೆ ಆತಿಥ್ಯ ವಹಿಸಲು ಈ ಅಪರೂಪದ ಅವಕಾಶವನ್ನು ಪಡೆದ ಮುಂಬೈನ ಏಕೈಕ ಶಾಲೆ ನಮ್ಮದು ಎಂದು ಬಾಂಬೆ ಸ್ಕಾಟಿಷ್ ಪ್ರಾಂಶುಪಾಲೆ ಸುನೀತಾ ಜಾರ್ಜ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ 20 ಶಾಲಾ ಕ್ರಿಕೆಟ್ ತಂಡಗಳು ಟ್ರೋಫಿಯನ್ನು ವೀಕ್ಷಿಸಲು ಬಂದಿದ್ದವು.

ಕಳೆದ ತಿಂಗಳು ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2023ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್​​ನ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಹತ್ತು ಸ್ಥಳಗಳಲ್ಲಿ ನಡೆಯಲಿರುವ ಪಂದ್ಯಾವಳಿಯ ಆರಂಭಿಕ ಪಂದ್ಯ ಮತ್ತು ಫೈನಲ್​​​ಗೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಹೈದರಾಬಾದ್, ಕೋಲ್ಕೊತಾ, ಲಕ್ನೋ, ಮುಂಬೈ ಮತ್ತು ಪುಣೆ ಇತರ ಒಂಬತ್ತು ಸ್ಥಳಗಳಾಗಿವೆ. ಅಭ್ಯಾಸ ಪಂದ್ಯಗಳಿಗೆ ಹೈದರಾಬಾದ್ ಜೊತೆಗೆ ಗುವಾಹಟಿ ಮತ್ತು ತಿರುವನಂತಪುರಂ ಆತಿಥ್ಯ ವಹಿಸಲಿದೆ. 2019ರ ವಿಶ್ವಕಪ್ ಫೈನಲಿಸ್ಟ್​​ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಬಹುನಿರೀಕ್ಷಿತ ಪಂದ್ಯದೊಂದಿಗೆ ಪಂದ್ಯಾವಳಿಯು ಅಹಮದಾಬಾದ್​ನ ಪ್ರಾರಂಭವಾಗಲಿದೆ. ಆತಿಥೇಯ ಭಾರತವು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ .

ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (ನವೆಂಬರ್ 4) ಮತ್ತು ಭಾರತ ಮತ್ತು ಪಾಕಿಸ್ತಾನ (ಅಕ್ಟೋಬರ್ 15) ಅಹಮದಾಬಾದ್​ನಲ್ಲಿ ತಮ್ಮ ಪಂದ್ಯಗಳನ್ನು ಆಡಲಿವೆ.‘

ಇದನ್ನೂ ಓದಿ : World Cup Qualifier: 48 ವರ್ಷಗಳ ಏಕದಿನ ವಿಶ್ವ ಕಪ್​ ಇತಿಹಾಸದಲ್ಲೇ ವಿಂಡೀಸ್​ಗೆ ಮೊದಲ ಬಾರಿ ನಿರಾಸೆ

ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಮೂಲಕ ಎಂಟು ತಂಡಗಳು 46ದಿನಗಳ ಟೂರ್ನಿಗೆ ಅರ್ಹತೆ ಪಡೆದಿವೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಫೈನಲಿಸ್ಟ್​​ಗಳು ಅಂತಿಮ ಎರಡು ಸ್ಥಾನಗಳನ್ನು ತುಂಬಲಿದ್ದಾರೆ.

ಹಿಂದಿನ ಟೂರ್ನಿಯಂತೆಯೇ ರೌಂಡ್-ರಾಬಿನ್ ಸ್ವರೂಪವನ್ನು ಮುಂದುವರಿಸಲಾಗಿದೆ, ಒಟ್ಟು 45 ಲೀಗ್ ಪಂದ್ಯಗಳು ನಡೆಯಲಿದ್ದು. ಪ್ರತಿ ತಂಡದ ವಿರುದ್ಧ ಸೆಣಸಲಿವೆ. ನಾಕೌಟ್ ಸುತ್ತುಗಳು ಸೇರಿದಂತೆ ಇತರ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ 2 ಗಂಟೆಗೆ ಪ್ರಾರಂಭವಾಗಲಿವೆ. ಆರು ದಿನಗಳ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ಪ್ರಾರಂಭವಾಗಲಿವೆ.

ಅಗ್ರ ನಾಲ್ಕು ತಂಡಗಳು ನವೆಂಬರ್ 15 ರಂದು ಮುಂಬಯಿಯಲ್ಲಿ ಮತ್ತು ನವೆಂಬರ್ 16 ರಂದು ಕೋಲ್ಕೊತಾದಲ್ಲಿ ನಡೆಯಲಿರುವ ಸೆಮಿಫೈನಲ್​​ಗೆ ಪ್ರವೇಶಿಸಲಿವೆ. ಸೆಮಿಫೈನಲ್ ಮತ್ತು ಚಾಂಪಿಯನ್ ಶಿಪ್ ಗೆ ಮೀಸಲು ದಿನಗಳು ಇರುತ್ತವೆ.

Exit mobile version