Site icon Vistara News

World Cup 2023 : ಎಲ್ಲವೂ ಇಂಪೋರ್ಟೆಡ್; ವಿಶ್ವ ಕಪ್​ ಕ್ರಿಕೆಟ್​ ಸ್ಟೇಡಿಯಂಗಳಿಗೆ ಭರ್ಜರಿ ಕಾಯಕಲ್ಪ!

World Cup 2023

ನವ ದೆಹಲಿ: ಐಸಿಸಿ ವಿಶ್ವಕಪ್ 2023 ಕ್ಕೆ (World Cup 2023) ಮುಂಚಿತವಾಗಿ ಪಂದ್ಯಗಳು ನಡೆಯುವ ಕೆಲವು ಸ್ಟೇಡಿಯಂಗಳ ನವೀಕರಣ ನಡೆಯುತ್ತಿದೆ. ಸ್ಟೇಡಿಯಮ್​ಗಳಲ್ಲಿ ಮೂಲಸೌಕರ್ಯದ ಕೊರತೆ ಕಂಡು ಬಂದಿರುವ ಜತೆಗೆ ಆಧುನಿಕ ಕ್ರಿಕೆಟ್​ಗೆ ಪೂರಕವಲ್ಲದ ವಾತಾವರಣ ಇದ್ದ ಕಾರಣ ನವೀಕರಣ ಮಾಡಲಾಗುತ್ತಿದೆ. ಜತೆಗೆ ಈವೆಂಟ್​ಗಾಗಿ ಭಾರತಕ್ಕೆ ಬರುವ ತಂಡಗಳಿಗೆ ಅತ್ಯುತ್ತಮ ಅನುಭವವನ್ನು ನೀಡಲು ಬಿಸಿಸಿಐ ಈ ಯೋಜನೆ ಕೈಗೊಂಡಿದೆ. ಅಹ್ಮದಾಬಾದ್, ಚೆನ್ನೈ, ಮುಂಬಯಿ , ಧರ್ಮಶಾಲಾ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಲಕ್ನೋ ಮತ್ತು ಕೋಲ್ಕತಾದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ಅಭ್ಯಾಸ ಪಂದ್ಯಗಳು ನಡೆಯಲಿವೆ. ಈ ಸ್ಟೇಡಿಯಮ್​ನಲ್ಲಿ ಕೆಲವು ನವೀಕರಣವಾಗಲಿವೆ.

ವಿಶ್ವಕಪ್ ಪಂದ್ಯಗಳು ನಡೆಯಲಿರು ಕ್ರೀಡಾಂಗಣವನ್ನು ಪಂದ್ಯಾವಳಿಗೆ ಮುಂಚಿತವಾಗಿ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ನವೀಕರಿಸಲಾಗುತ್ತಿದೆ. ಅದಕ್ಕಾಗಿ 50 ಕೋಟಿ ರೂ.ಗಳ ಅನುದಾನ ಪಡೆಯುಲಿದೆ. 10 ವಿಶ್ವಕಪ್ ತಾಣಗಳಿಗೆ 500 ಕೋಟಿ ರೂ.ಗಳನ್ನು ವಿತರಿಸಲು ಭಾರತೀಯ ಕ್ರಿಕೆಟ್ ಮಂಡಳಿ ಬಜೆಟ್ ಮಂಡಿಸಿದೆ. ಮೊದಲಿಗೆ, ನಾಲ್ಕು ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್​ಗೆ ಆತಿಥ್ಯ ವಹಿಸಲಿರುವ ಮುಂಬಯಿಯ ವಾಂಖೆಡೆ ಕ್ರೀಡಾಂಗಣವು ತನ್ನ ಔಟ್​ಫೀಲ್ಡ್​ ಬದಲಾವಣೆ ಮಾಡಲಿದೆ. ಅದೇ ಸಮಯದಲ್ಲಿ ಹೊಸ ಎಲ್ಇಡಿ ದೀಪಗಳೂ ಅಳವಡಿಕೆಯಾಗಲಿವೆ. ಜೊತೆಗೆ ಕಾರ್ಪೊರೇಟ್ ಬಾಕ್ಸ್​ಗಳು ಮತ್ತು ಶೌಚಾಲಯಗಳು ನವೀಕರಣಗೊಳ್ಳಲಿವೆ.

2011ರ ವಿಶ್ವಕಪ್​ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ವಾಂಖೆಡೆ ಕ್ರೀಡಾಂಗಣವು ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಅತ್ಯುತ್ತಮ ಆತಿಥ್ಯ ಸೇವೆಯನ್ನು ಒದಗಿಸಲಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಮೋಲ್ ಕಾಳೆ ಭರವಸೆ ನೀಡಿದ್ದಾರೆ. ಹೊಸ ಔಟ್ ಫೀಲ್ಡ್, ಹೊಸ ಎಲ್ಇಡಿ ದೀಪಗಳಿಗೆ ನವೀಕರಿಸುವುದು, ಕಾರ್ಪೊರೇಟ್ ಬಾಕ್ಸ್​ಗಳ ನವೀಕರಣ ಮತ್ತು ನವೀಕರಿಸಿದ ಹೊಸ ಶೌಚಾಲಯಗಳು ಸೇರಿದಂತೆ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ” ಎಂದು ಕಾಳೆ ಇಂಡಿಯನ್ಸ್ ಎಕ್ಸ್​ಪ್ರೆಸ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ : ind vs wi : ಪ್ರತ್ಯೇಕವಾಗಿ ವಿಂಡೀಸ್ ಪ್ರಯಾಣ ಶುರು ಮಾಡಿದ ವಿರಾಟ್​, ಕೊಹ್ಲಿ! ಏನಾಯಿತು ಅವರಿಗೆ?

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಹೊಸ ಎಲ್ಇಡಿ ದೀಪಗಳನ್ನು ಅಳವಡಿಸಲಾಗುತ್ತಿಎ. ಎರಡು ಕೆಂಪು ಮಣ್ಣಿನ ಪಿಚ್​ಗಳನ್ನು ಅಳವಡಿಸಲು ಹೊಂಡ ಅಗೆಯಲಾಗಿದೆ. ಇಂಗ್ಲೆಂಡ್ ವಿರುದ್ಧದ ಭಾರತದ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಲಕ್ನೋ ಪಿಚ್​ ಕೂಡ ಸುಧಾರಣೆಗೆ ಒಳಪಡಲಿದೆ. ಇದು. ಐಪಿಎಲ್ ಸಮಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ತನ್ನ ಆಸನ ಮತ್ತು ಶೌಚಾಲಯಗಳನ್ನು ನವೀಕರಿಸುತ್ತಿದೆ. ಮತ್ತೊಂದೆಡೆ, ಧರ್ಮಶಾಲಾದ ಎಚ್​​ಸಿಎ ಕ್ರೀಡಾಂಗಣವು ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯ ಸೇರಿದಂತೆ ಐದು ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲು ಸಜ್ಜಾಗಿರುವುದರಿಂದ ನವೀಕರಣಕ್ಕೆ ಒಳಪಡುತ್ತಿದೆ. 6,000 ಮೀಟರ್ ವಿಶೇಷ ಕೊಳವೆಗಳನ್ನು ಹೊಂದಿರುವ ಹೊಸ ಒಳಚರಂಡಿ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ, ಹೆಚ್ಚುವರಿ ಮಳೆನೀರನ್ನು ತ್ವರಿತವಾಗಿ ತೊಡೆದುಹಾಕುವ ವ್ಯವಸ್ಥೆ, ಶೀತ ಹವಾಮಾನಕ್ಕೆ ಹೆಚ್ಚು ಸೂಕ್ತವಾದ ರೈಗ್ರಾಸ್ ಬಳಲಾಗುತ್ತಿದೆ. ಅದನ್ನು ಸ್ಕಾಟ್ಲೆಂಡ್​​ನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ.

ನಾವು ಕ್ರೀಡಾಂಗಣದ ಸಂಪೂರ್ಣ ಮೇಲ್ಮೈಯನ್ನು ಬದಲಾಯಿಸಿದ್ದೇವೆ. ನಾವು ವಿವಿಐಪಿ ಮತ್ತು ಆತಿಥ್ಯ ಬಾಕ್ಸ್​ಗಳನ್ನು ಸಹ ಮಾರ್ಪಡಿಸಿದ್ದೇವೆ. ಈ ಪ್ರಕ್ರಿಯೆಗಾಗಿ ನಾವು ಅತ್ಯುತ್ತಮ ತಜ್ಞರನ್ನು ನೇಮಿಸಿಕೊಂಡಿದ್ದೇವೆ. ನಾವು ಉತ್ತಮ ಒಳಚರಂಡಿ ಸೌಲಭ್ಯಗಳನ್ನು ಹೊಂದಿದ್ದೇವೆ ಮತ್ತು ವಿದೇಶದಿಂದ ಹುಲ್ಲನ್ನು ಪಡೆದಿದ್ದೇವೆ ಎಂದು ಎಚ್​​ಪಿಎಸ್​ ಸದಸ್ಯ ಅರುಣ್​ ಧುಮಾಲ್​ ಇಂಡಿಯನ್ಸ್ ಎಕ್ಸ್​ಪ್ರೆಸ್​ಗೆ ತಿಳಿಸಿದ್ದಾರೆ.

ನಾವು ಕೆಲವು ಆಸನಗಳನ್ನು ಬದಲಾಯಿಸಿಕೊಂಡಿದ್ದೇವೆ. ಸ್ಟ್ಯಾಂಡ್​​ಗಳಿಗೆ ಬಣ್ಣ ಹಚ್ಚಿದ್ದೇವೆ. ಸೋರಿಕೆ ಸಮಸ್ಯೆ ಇತ್ತು, ನಾವು ಅದನ್ನು ಸಹ ಸರಿಪಡಿಸಿದ್ದೇವೆ. ಮಳೆಯ ಬಂದರೂ ತಕ್ಷಣ ಪಂದ್ಯ ಆರಂಭಿಸಲು ಬಯಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಪವಾರ್ ಅವರು ಪ್ರಸ್ತುತ ನಡೆಯುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (ಎಂಪಿಎಲ್) ಪುಣೆ ಕ್ರೀಡಾಂಗಣದ ಸುಧಾರಣೆಯ ಬಗ್ಗೆ ವಿವರಿಸಿದ್ದಾರೆ.

ಕ್ರೀಡಾಂಗಣದ ಮುಕ್ಕಾಲು ಭಾಗಕ್ಕೆ ಚಾವಣಿ ಇಲ್ಲ. ಆದರೂ ಸೀಟ್​​ಗಳ ಹೆಚ್ಚಳಕ್ಕೆ ಶ್ರಮಿಸಲಾಗಿದೆ. ಸ್ವಚ್ಛ ಶೌಚಾಲಯಗಳು, ಉತ್ತಮ ರಸ್ತೆಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳಗಳನ್ನು ನಿಯೋಜಿಸಿದ್ದೇವೆ. ಯಾವುದೇ ಸೀಟುಗಳು ಕೆಟ್ಟ ಸ್ಥಿತಿಯಲ್ಲಿದ್ದರೆ ನಾವು ಅವುಗಳನ್ನು ಬದಲಾಯಿಸಲು ಮುಂದಾಗಿದ್ದೇವೆ. ಫೆನ್ಸಿಂಗ್ ಮೆಟಲ್ ಸರಿಯಾಗಿದೆಯೇ, ಟಿಕೆಟ್ ರೀಡರ್ ಗಳು ಕೆಲಸ ಮಾಡುತ್ತಿವೆಯೇ ಅಥವಾ ಇಲ್ಲವೇ ಎಂದು ನಾವು ಪರೀಕ್ಷಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ದೇಶದ ಅತ್ಯಂತ ಹಳೆಯ ಕ್ರೀಡಾಂಗಣಗಳಲ್ಲಿ ಒಂದಾದ ಅರುಣ್ ಜೇಟ್ಲಿ ಕ್ರೀಡಾಂಗಣವು ಪ್ರೇಕ್ಷಕರನೂತನ ಆಸನಗಳನ್ನು ಪಡೆಯುತ್ತಿದೆ. ಟಿಕೆಟಿಂಗ್ ಸಾಫ್ಟ್​ವೇರ್​ ನವೀಕರಿಸುವುದರ ಜೊತೆಗೆ ಶೌಚಾಲಯಗಳನ್ನು ಸಿದ್ಧಪಡಿಸಲಾಗುತ್ತಿದೆ.

“ಕ್ರೀಡಾಂಗಣದಲ್ಲಿನ ಫ್ಲಡ್​ಲೈಟ್​ಗಳು ಉತ್ತಮ ಗುಣಮಟ್ಟದ್ದಾಗಿವೆ. ಆದ್ದರಿಂದ ನಾವು ಅವುಗಳನ್ನು ಬದಲಾಯಿಸಬೇಕಾಗಿಲ್ಲ. ಆಸನಗಳನ್ನು ಬದಲಾಯಿಸಲಾಗುತ್ತಿದೆ ಮತ್ತು ಶೌಚಾಲಯಗಳನ್ನು ನವೀಕರಿಸಲಾಗುತ್ತಿದೆ ಎಂದು ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್ ಮಂಚಂದಾ ಹೇಳಿದ್ದಾರೆ.

Exit mobile version