ಬ್ರಿಸ್ಬೇನ್ : ಎರಡೇ ದಿನದಲ್ಲಿ ಮುಕ್ತಾಯ ಕಂಡ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ (Test cricket) ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಇಲ್ಲಿನ ಗಬ್ಬಾ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯ ಟೆಸ್ಟ್ ಕ್ರಿಕೆಟ್ ಮಾರಕ ಎಂಬುದಾಗಿ ಹೇಳಲಾಗಿತ್ತು. ಇದೀಗ ಅಲ್ಲಿನ ಪಿಚ್ಗೆ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸ್ ಒಂದು ಡಿಮೆರಿಟ್ ಅಂಕಗಳ ದಂಡ ವಿಧಿಸಿದ್ದಾರೆ.
ಈ ಪಂದ್ಯವು ಎರಡು ದಿನಗಳ ಒಳಗೆ ಮುಕ್ತಾಯ ಕಂಡಿತ್ತು. 140 ಓವರ್ಗಳ ಒಳಗೆ 34 ವಿಕೆಟ್ಗಳು ಪತನಗೊಂಡಿದ್ದವು. ಅನಗತ್ಯ ಬೌನ್ಸ್ನಿಂದಾಗಿ ಬ್ಯಾಟರ್ಗಳು ಅಪಾಯ ಎದುರಿಸಿದ್ದರು. ಹೀಗಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ಗೆ ಸೂಕ್ತವಾಗಿರಲಿಲ್ಲ ಎಂದು ರೆಫರಿಗಳು ದಂಡವನ್ನು ವಿಧಿಸಿದ್ದಾರೆ.
ಬ್ರಿಸ್ಟೇನ್ನ ಈ ಪಿಚ್ ಟೆಸ್ಟ್ ಪಂದ್ಯಕ್ಕೆ ಅತ್ಯಂತ ಸೂಕ್ತ ಪಿಚ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಅಲ್ಲದೆ ಬೌಲರ್ಗಳಿಗೆ ಹೆಚ್ಚು ನೆರವು ಕೊಡುವ ಪಿಚ್ ಕೂಡ ಆಗಿರುತ್ತದೆ. ಆದರೆ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಹೆಚ್ಚುವರಿ ಬೌನ್ಸರ್ಗಳು ಬಿದ್ದ ಕಾರಣ ಬ್ಯಾಟರ್ಗಳು ಬೇಗನೆ ವಿಕೆಟ್ ಒಪ್ಪಿಸಬೇಕಾಯಿತು. ಅದಕ್ಕಾಗಿ ಡಿಮೆರಿಟ್ ಅಂಕಗಳನ್ನು ನೀಡಿದ್ದಾರೆ.
ಇದನ್ನೂ ಓದಿ | Gabba Test | ಗಬ್ಬಾ ಪಿಚ್ ಡಬ್ಬಾ; ನಿಮ್ಮದು ಬೂಟಾಟಿಕೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯನ್ನು ತೆಗಳಿದ ಸೆಹ್ವಾಗ್