Site icon Vistara News

World Rapid Chess | ಫಿಡೆ ಮಹಿಳೆಯರ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಶಿಪ್‌: ಕಂಚು ಗೆದ್ದ ಸವಿತಾ ಶ್ರೀ

Savitha Shri

ಅಲ್ಮಾತಿ, (ಕಜಕಿಸ್ತಾನ): ಇಲ್ಲಿ ನಡೆದ ಫಿಡೆ ಮಹಿಳೆಯರ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಬಿ.ಸವಿತಾ ಶ್ರೀ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

15 ವರ್ಷದ ಸವಿತಾ ಅವರು 11 ಸುತ್ತುಗಳಲ್ಲಿ ಒಟ್ಟು ಎಂಟು ಅಂಕಗಳನ್ನು ಕಲೆಹಾಕಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಎಂಟು ಸುತ್ತುಗಳ ಬಳಿಕ ಸವಿತಾ 6.5 ಅಂಕಗಳನ್ನು ಹೊಂದಿದ್ದರು. ಆದರೆ ಒಂಬತ್ತನೇ ಸುತ್ತಿನಲ್ಲಿ ಕಜಕಿಸ್ತಾನದ ಜನ್ಸಯ ಅಬ್ದುಮಲಿಕ್‌ ಎದುರು ಸೋತ ಕಾರಣ ಸವಿತಾ ಚಿನ್ನ ಅಥವಾ ಬೆಳ್ಳಿ ಗೆಲ್ಲುವ ಅವಕಾಶದಿಂದ ವಂಚಿತರಾದರು.

ಏಷ್ಯನ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಕೊನೇರು ಹಂಪಿ ಅವರು ಆರನೇ ಸ್ಥಾನ ಗಳಿಸಿದರು.
ಸವಿತಾ, ಹಂಪಿ ಮತ್ತು ಇತರ ಇಬ್ಬರು ಸ್ಪರ್ಧಿಗಳು ತಲಾ ಎಂಟು ಅಂಕಗಳನ್ನು ಗಳಿಸಿದ್ದರು. ‘ಟೈಬ್ರೇಕ್‌’ ಸ್ಕೋರ್‌ ಅಳವಡಿಸಿದಾಗ ಸವಿತಾ ಅವರು ಇತರರನ್ನು ಹಿಂದಿಕ್ಕಿ ಕಂಚು ತಮ್ಮದಾಗಿಸಿಕೊಂಡರು.

ಸವಿತಾ ಶ್ರೀ ಅವರ ಈ ಸಾಧನೆಗೆ ಚೆಸ್​ ಮಾಂತ್ರಿಕ, ಭಾರತದ ವಿಶ್ವನಾಥನ್ ಆನಂದ್​ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಿರಿಯ ವಯಸ್ಸಿನಲ್ಲಿ ಈ ಸಾಧನೆ ತೋರಿದ್ದು ಅದ್ಭುತ. ನಿಮ್ಮ ಪ್ರದರ್ಶನವನ್ನು ಗಮನಿಸುವಾಗ ಭವಿಷ್ಯದಲ್ಲಿ ಇನ್ನು ಉನ್ನತ ಪ್ರಶಸ್ತಿಗಳನ್ನು ಗೆಲ್ಲುವ ವಿಶ್ವಾಸ ನನಗಿದೆ ಎಂದು ಆನಂದ್ ಹೇಳಿದ್ದಾರೆ.

ಇದನ್ನೂ ಓದಿ | Womens T20 World Cup | ವನಿತಾ ಟಿ20 ವಿಶ್ವ ಕಪ್​ಗೆ ಭಾರತ ತಂಡ ಪ್ರಕಟ; ತಂಡಕ್ಕೆ ಮರಳಿದ ಶಿಖಾ ಪಾಂಡೆ!

Exit mobile version