ದುಬೈ: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಐಸಿಸಿ(ICC) ಬಹುನಿರೀಕ್ಷಿತ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(ICC World Test Championship) ಪಂದ್ಯದ ದಿನಾಂಕವನ್ನು ಪ್ರಕಟಿಸಿದೆ.
ದ್ವಿತೀಯ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 07ರಿಂದ 11ರ ವರೆಗೆ ಲಂಡನ್‌ನ ದಿ ಓವಲ್ ಮೈದಾನದಲ್ಲಿ ಜರುಗಲಿದೆ. ಜೂನ್ 12ರಂದು ಒಂದು ದಿನ ಮೀಸಲು ದಿನವನ್ನು ನಿಗದಿ ಪಡಿಸಲಾಗಿದೆ. 2021ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟೆಸ್ಟ್ ವಿಶ್ವ ಕಪ್ ಸೌತಾಂಪ್ಟನ್ನಲ್ಲಿ ನಡೆದಿತ್ತು. ಇಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತವನ್ನು 8 ವಿಕೆಟ್ಗಳಿಂದ ಮಣಿಸಿ ಕಪ್ ಎತ್ತಿ ಸಂಭಮಿಸಿತ್ತು.
ಇದನ್ನೂ ಓದಿ Border Gavaskar Trophy: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಇತಿಹಾಸ, ರೋಚಕ ಸಂಗತಿಗಳ ಮಾಹಿತಿ
ಸದ್ಯ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿನ್ನಾಡಲು ಸಜ್ಜಾಗಿದ್ದು. ಒಂದೊಮ್ಮೆ ಟೀಮ್ ಇಂಡಿಯಾ ಈ ಸರಣಿಯಲ್ಲಿ ಮೇಲುಗೈ ಸಾಧಿಸಿದರೆ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲಿದೆ. ಈ ಮೂಲಕ ಕಳೆದ ಬಾರಿ ಕೈ ತಪ್ಪಿದ ಟ್ರೋಫಿಯನ್ನು ಈ ಬಾರಿ ವಶಪಡಿಸಿಕೊಳ್ಳುವ ಅವಕಾಶ ಭಾರತದ ಮುಂದಿದೆ.