Site icon Vistara News

World Cup 1983 : 3000 ಅಡಿ ಎತ್ತರದಲ್ಲಿ ಸಂಭ್ರಮಾಚರಣೆ ಮಾಡಿದ ವಿಶ್ವ ವಿಜೇತ ಲೆಜೆಂಡ್‌ಗಳು

1983 world cup winning team

#image_title

ಮುಂಬಯಿ: ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು 43 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡ 1983ರ ವಿಶ್ವಕಪ್‌ನಲ್ಲಿ (World Cup 1983) ಯಾರೂ ನಿರೀಕ್ಷೆ ಮಾಡದ ಸಾಧನೆ ಮಾಡಿತ್ತು. ಯಾವುದು ಅಸಾಧ್ಯವೆಂದು ಹೇಳಲಾಗಿತ್ತೋ ಅದನ್ನು ಮಾಡಿ ತೋರಿಸಿತ್ತ ಕಪಿಲ್‌ದೇವ್‌ ಬಳಗ. ಈ ವಿಶೇಷ ದಿನಕ್ಕೆ ಜೂನ್‌ 25ರಂದು 40 ವರ್ಷವಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗ ವಿಶ್ವದ ತನ್ನ ಸಹವರ್ತಿಗಳ ಮುಂದೆ ಅತ್ಯಂತ ಶ್ರೀಮಂತ ಸಂಸ್ಥೆ. ಕ್ರಿಕೆಟ್ ಜಗತ್ತಿನಲ್ಲಿ ಭಾರತ ಸೂಪರ್ ಪವರ್ ಆಗುವ ಪ್ರಕ್ರಿಯೆಯು 1983 ರ ವಿಶ್ವಕಪ್ ವಿಜಯದೊಂದಿಗೆ ಪ್ರಾರಂಭಗೊಂಡಿತ್ತು. ಏಕೆಂದರೆ ಈ ವಿಜಯವು ಇಡೀ ರಾಷ್ಟ್ರವನ್ನು ಪ್ರೇರೇಪಿಸುವಲ್ಲಿ ಯಶಸ್ವಿಯಾಯಿತು.

ಇತಿಹಾಸ ನಿರ್ಮಿಸಿದ ತಂಡದ ಸದಸ್ಯರಲ್ಲಿ ಒಬ್ಬರಾದ ಕೀರ್ತಿ ಆಜಾದ್ ಅವರೂ ಒಬ್ಬರು. ಅವರು ಭಾನುವಾರ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮತ್ತು ಅವರ ತಂಡದ ಸದಸ್ಯರು ವಿಮಾನದಲ್ಲಿ 35,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಮೂಲಕ ವಿಶ್ವ ಕಪ್‌ ವಿಜೇತ ತಂಡದ ಸದಸ್ಯರು ವಿಭಿನ್ನ ರೀತಿಯಲ್ಲಿ ಸಂಭ್ರಮಾರಣೆ ಮಾಡಿದ್ದಾರೆ.

‘ವಿಶ್ವಕಪ್ ಚಾಂಪಿಯನ್’
1983 ತಂಡದ ಪ್ರಯಾಣ
ನಮ್ಮ ಹಬ್ಬವನ್ನು ಜತೆಯಾಗಿ ಆಚರಿಸಲು
40ನೇ ವಾರ್ಷಿಕೋತ್ಸವದ ವಿಜಯ
ಜೂನ್ 25ರಂದು 35,000 ಅಡಿ ಎತ್ತರದಲ್ಲಿ
ಗಾಳಿಯಲ್ಲಿ ನಾವು ಹೆಮ್ಮೆಪಡುತ್ತಿದ್ದೇವೆ
ಭಾರತೀಯರು ಮತ್ತು ಭಾರತವನ್ನು ಪ್ರೀತಿಸುತ್ತಾರೆ
ಭಾರತ್ ಮಾತಾ ಕಿ ಜೈ ಎಂದು ಕೀರ್ತಿ ಆಜಾದ್‌ ಬರೆದುಕೊಂಡಿದ್ದಾರೆ.

ಹಮ್‌ ಜೀತೇಂಗೆ

ಅದಾನಿ ಗ್ರೂಪ್‌ ಆರಂಭಿಸಿರು ‘ಜೀತೆಂಗೆ ಹಮ್’ (ನಾವು ಗೆಲ್ಲುವೆವು) ಅಭಿಯಾನದ ಭಾಗವಾಗಲು ಮಾಜಿ ಕ್ರಿಕೆಟಿಗರು ವಿಮಾನದಲ್ಲಿ ತೆರಳುತ್ತಿದ್ದರು. ಈ ಅಭಿಯಾನವು ಅಭಿಮಾನಿಗಳನ್ನು ಒಂದುಗೂಡಿಸುವ ಉದ್ದೇಶವನ್ನು ಹೊಂದಿದೆ. ಭಾರತ ತಂಡದ ಹಿಂದಿನ ಹೀರೋಗಳನ್ನು ಪುರಸ್ಕರಿಸಲು ಮತ್ತು ಪ್ರಸ್ತುತ ಆಡುತ್ತಿರುವವರನ್ನು ಬೆಂಬಲಿಸಲು ಈ ಅಭಿಯಾನ ಆರಂಭಿಸಲಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 2023 ರ ಏಕದಿನ ವಿಶ್ವ ಕಪ್‌ನ ಹಿನ್ನೆಲೆಯಲ್ಲಿ ಈ ಅಭಿಯಾನ ಆರಂಭಿಸಲಾಗಿದೆ.

2023ರ ಏಕದಿನ ವಿಶ್ವಕಪ್ ಗಾಗಿ ಟೀಮ್ ಇಂಡಿಯಾವನ್ನು ಸಜ್ಜುಗೊಳಿಸುವಲ್ಲಿ ಅದಾನಿ ಗ್ರೂಪ್ ನೊಂದಿಗೆ ಕೆಲಸ ಮಾಡಲು ನಮಗೆ ಸಂತಸವಿದೆ. ಎಂದು ಕಪಿಲ್ ದೇವ್ ಹೇಳಿದ್ದಾರೆ. ಅಭಿಯಾನದ ಭಾಗವಾಗಿ ಗೌತಮ್ ಅದಾನಿ ಅವರಿಗೆ 1983ರ ವಿಶ್ವಕಪ್ ತಂಡದ ಸಹಿಯನ್ನು ಹೊಂದಿರುವ ವಿಶೇಷ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಅಂದಿನ ನಾಯಕ ಕಪಿಲ್ ದೇವ್ ಅವರು ಬ್ಯಾಟ್‌ ಹಸ್ತಾಂತರಿಸಿದರು. ಈ ಬ್ಯಾಟ್ ಅದಾನಿ ಗ್ರೂಪ್‌ ಮೂಲಕ 2023ರ ಏಕದಿನ ವಿಶ್ವ ಕಪ್‌ ಆಡಲಿರುವ ಭಾರತ ತಂಡಕ್ಕೆ ಹಸ್ತಾತರಗೊಳ್ಳಲಿದೆ. ಈ ಬ್ಯಾಟ್‌ ಮೂಲಕ ಹಾಳೀ ಆಟಗಾರರು ಸ್ಫೂರ್ತಿ ಪಡೆಯಲಿದ್ದಾರೆ.

ಇದನ್ನೂ ಓದಿ : 1983 World Cup: ಕಪಿಲ್‌ ಪಡೆಯ ಏಕದಿನ ವಿಶ್ವಕಪ್‌ ವಿಜಯ ದಿವಸಕ್ಕೆ 40ರ ಸಂಭ್ರಮ

1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಮುಂದಿನ ವಿಶ್ವ ಕಪ್‌ ಅಭಿಯಾನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. “2023ರ ಏಕದಿನ ವಿಶ್ವಕಪ್‌ ವೇಳೆ ಟೀಮ್ ಇಂಡಿಯಾವನ್ನು ಒಟ್ಟುಗೂಡಿಸಲು ಅದಾನಿ ಗ್ರೂಪ್‌ನೊಂದಿಗೆ ಕೈಜೋಡಿಸಿದ್ದೇವೆ. ಅದಕ್ಕಾಗಿ ನಾವುನಾವು ಹೆಮ್ಮೆಪಡುತ್ತೇವೆ. ಈ ಅಭಿಯಾನವು 1983 ರಲ್ಲಿ ನಮ್ಮನ್ನು ಗೆಲುವಿನತ್ತ ಮುನ್ನಡೆಸಿದ ಉತ್ಸಾಹ ಮತ್ತು ಅದಮ್ಯ ಮನೋಭಾವವನ್ನು ಸಂಕೇತಿಸುತ್ತದೆ. ವಿಶ್ವಕಪ್ 2023ರ ತಯಾರಿಯ ವೇಳೆ ತಂಡವು ಹೃದಯಪೂರ್ವಕ ಸಾಮೂಹಿಕ ಬದ್ಧತೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಯಶಸ್ಸಿನ ನಿಜವಾದ ಅಳತೆಯು ಕೇವಲ ಫಲಿತಾಂಶದಲ್ಲಿ ಮಾತ್ರವಲ್ಲ, ವೈಯಕ್ತಿಕ ಉತ್ಕೃಷ್ಟತೆಯಲ್ಲಿಯೂ ಅಡಗಿರುತ್ತದೆ ” ಎಂದು ಕಪಿಲ್ ದೇವ್ ನ್ಯೂಸ್ 18 ಕ್ರಿಕೆಟ್ ನೆಕ್ಸ್ಟ್‌ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಕಪಿಲ್ ದೇವ್ ಅವರ ತಂಡದ ಪ್ರಮುಖ ಆಟಗಾರನಾಗಿದ್ದ ಅವರು ರೋಜರ್ ಬಿನ್ನಿ ಪ್ರಸ್ತುತ ಬಿಸಿಸಿಐ ಅಧ್ಯಕ್ಷ. ಅವರು ಭಾರತ ತಂಡ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 1983 ರ ವಿಶ್ವಕಪ್ ವಿಜೇತ ತಂಡದ ವಿಜಯ ದೃಢ ನಿಶ್ಚಯದಿಂದ ಬಂದಿರುವುದು. ತಂಡಕ್ಕೆ ಅದು ಸ್ಫೂರ್ತಿಯಿಂದ ತುಂಬಿದ ನಂಬಲಾಗದ ಪ್ರಯಾಣವಾಗಿತ್ತು. ಒಟ್ಟಾಗಿ, ಅಪೇಕ್ಷಿತ ಟ್ರೋಫಿಯನ್ನು ಮರಳಿ ತರುವುದು ನಮ್ಮ ಉದ್ದೇಶ. ಅಭಿಮಾನಿಗಳಾಗಿ ಒಗ್ಗೂಡೋಣ ಮತ್ತು ಇತಿಹಾಸವನ್ನು ರಚಿಸಲು ಅವರನ್ನು ಪ್ರೇರೇಪಿಸೋಣ ಎಂದು ಅವರು ಹೇಳಿದ್ದಾರೆ.

Exit mobile version