Site icon Vistara News

ವಿಶ್ವ ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ಶಿಪ್​; ಚಿನ್ನದ ನಿರೀಕ್ಷೆಯಲ್ಲಿ ಭಾರತದ ನಾಲ್ಕು ಬಾಕ್ಸರ್​ಗಳು

World Women's Boxing Championship; Four boxers from India are hoping for gold

World Women's Boxing Championship; Four boxers from India are hoping for gold

ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಾಲ್ಕು ಮಂದಿ ಬಾಕ್ಸರ್​ಗಳು ಅಮೋಘ ಸಾಮರ್ಥ್ಯ ತೋರುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದಾರೆ. ಒಲಿಂಪಿಕ್ಸ್​ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್‌(Lovlina Borgohain), ವಿಶ್ವ​ ಚಾಂಪಿಯನ್​ ನಿಖತ್ ಜರೀನ್, ನೀತು ಗಂಗಾಸ್‌(Nitu Ghanghas) ಮತ್ತು ಸ್ವೀಟಿ ಬೂರಾ ಅವರು ಫೈನಲ್​ ಪ್ರವೇಶಿಸಿದ್ದಾರೆ.

ಇಂದು (ಶನಿವಾರ ಮಾರ್ಚ್ 25) ನಡೆಯುವ 48 ಕೆಜಿ ವಿಭಾಗದ ಫೈನಲ್​ ಪಂದ್ಯದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಗಂಗಾಸ್​ ಅವರು ಮಂಗೋಲಿಯಾದ ಲುತ್ಸಾಯಿಖಾನ್‌ ಅಲ್ಟಂಟ್‌ಸೆಟ್‌ಸೆಗ್‌ ವಿರುದ್ಧ ಆಡಲಿದ್ದಾರೆ. 81 ಕೆಜಿ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಸ್ವೀಟಿ ಬೂರಾ ಅವರಿಗೆ ಚೀನಾದ ವಾಂಗ್‌ ಲೀನಾ ಸವಾಲು ಎದುರಾಗಿದೆ.

52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ನಿಖತ್ ಅವರಿಗೆ ಎರಡನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸುವ ಅವಕಾಶವಿದೆ. ಒಂದೊಮ್ಮೆ ಜರೀನ್​ ಫೈನಲ್​ನಲ್ಲಿ ಗೆದ್ದರೆ ಮೇರಿ ಕೋಮ್‌(6 ಬಾರಿ) ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬಾಕ್ಸರ್​ ಎನಿಸಿಕೊಳ್ಳಲಿದ್ದಾರೆ. ಭಾನುವಾರ ನಡೆಯುವ ಫೈನಲ್‌ನಲ್ಲಿ ನಿಖತ್‌ ಅವರು ವಿಯೆಟ್ನಾಂನ ಗುಯೆನ್‌ ಥಿ ಟಾಮ್‌ ಸವಾಲನ್ನು ಎದುರಿಸಲಿದ್ದಾರೆ.

ಮೊದಲ ಪದಕ​ ನಿರೀಕ್ಷೆಯಲ್ಲಿ ಲವ್ಲಿನಾ

ಲವ್ಲಿನಾ ಬೊರ್ಗೊಹೈನ್‌ (75 ಕೆಜಿ) ಈ ಕೂಟದಲ್ಲಿ ಮೊದಲ ಬಾರಿ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದಾರೆ. ಫೈನಲ್​ನಲ್ಲಿ ಲವ್ಲಿನಾ ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಪಂದ್ಯವೂ ಭಾನುವಾರ ನಡೆಯಲಿದೆ.

Exit mobile version