Site icon Vistara News

ವಿಶ್ವ ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ಶಿಪ್​; ಭಾರತಕ್ಕೆ ನಾಲ್ಕು ಪದಕ ಖಾತ್ರಿ

World Women's Boxing Championship; India is guaranteed four medals

World Women's Boxing Championship; India is guaranteed four medals

ನವದೆಹಲಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(World Boxing Championship) ಭಾರತದ ಬಾಕ್ಸರ್‌ಗಳು ಪ್ರಾಬಲ್ಯ ಮರೆದಿದ್ದಾರೆ. ಬುಧವಾರ ರಾತ್ರಿ ನಡೆದ ಕ್ವಾರ್ಟರ್​ ಫೈನಲ್​ ಕಾದಾಟದಲ್ಲಿ ನಿಖತ್ ಜರೀನ್(Nikhat Zareen) ಸೇರಿದಂತೆ ನಾಲ್ವರು ಬಾಕ್ಸರ್‌ಗಳು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ನಾಲ್ಕು ಪದಕಗಳು ಖಾತ್ರಿಯಾಗಿದೆ.

ಇದಕ್ಕೂ ಮುನ್ನ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕಾಮನ್‌ವೆಲ್ತ್‌ ಕೂಟದ ಚಾಂಪಿಯನ್‌ ನೀತು(Nitu Ghanghas) ಅವರು 48 ಕೆಜಿ ವಿಭಾಗದಲ್ಲಿ ಜಪಾನ್‌ನ ಮಡೊಕಾ ವಡಾ ಅವರನ್ನು ಮಣಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿದ್ದರು. ಇದೀಗ ಒಟ್ಟಾರೆ ಭಾರತಕ್ಕೆ ನಾಲ್ಕು ಪದಕ ಖಚಿತಗೊಂಡಿದೆ.

26 ವರ್ಷದ ನಿಖತ್ ಜರೀನ್ 50 ಕೆಜಿ ವಿಭಾಗದಲ್ಲಿ 2 ಬಾರಿಯ ವಿಶ್ವ ಚಾಂಪಿಯನ್​ ಥಾಯ್ಲೆಂಡ್‌ನ ಚುತಮತ್ ರಕ್ಸತ್ ಅವರನ್ನು 5-2 ಅಂತರದಿಂದ ಮಣಿಸುವಲ್ಲಿ ಯಶಸ್ಸು ಸಾಧಿಸಿ ಸೆಮಿಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಪದಕವನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ ವಿಶ್ವ ಮಹಿಳಾ ಬಾಕ್ಸಿಂಗ್​; ಭಾರತಕ್ಕೆ ಮೊದಲ ಪದಕ ಖಾತ್ರಿಪಡಿಸಿದ ನೀತು

ದಿನದ ಮತ್ತೊಂದು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು 75 ಕೆಜಿ ಮಿಡಲ್‌ವೇಟ್ ವಿಭಾಗದಲ್ಲಿ ಮೊಜಾಂಬಿಕ್‌ನ ಅಡೋಸಿಂಡಾ ಗಮಾನೆ ರಾಡಿ ಅವರನ್ನು 5-0 ಅಂತರದ ಪ್ರಬಲ ಪಂಚ್​ಗಳ ಮೂಲಕ ಹಿಮ್ಮೆಟ್ಟಿಸಿದರು.

Exit mobile version