Site icon Vistara News

World Youth Archery: ಐತಿಹಾಸಿಕ ಚಿನ್ನ ಗೆದ್ದ ಭಾರತದ ಪಾರ್ಥ್ ಸಾಳುಂಕೆ

Parth Sushant Salunkhe wins gold

ಲಿಮೆರಿಕ್‌ (ಐರ್ಲೆಂಡ್‌): ಇಲ್ಲಿ ನಡೆದ ಯುತ್‌ ವರ್ಲ್ಡ್ ಚಾಂಪಿಯನ್‌ಶಿಪ್‌ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ(World Youth Archery Championships) ಭಾರತದ ಪಾರ್ಥ್ ಸಾಳುಂಕೆ(Parth Sushant Salunkhe) ಹೊಸ ಇತಿಹಾಸ ಬರೆದಿದ್ದಾರೆ. ರಿಕರ್ವ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪುರುಷ ಆರ್ಚರಿ ಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಈ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಭಾರತ ಒಟ್ಟು 11 ಪದಕಗಳನ್ನು ಜಯಿಸಿತು. 6 ಚಿನ್ನ, ಒಂದು ಬೆಳ್ಳಿ ಹಾಗೂ 4 ಕಂಚು ಇದರಲ್ಲಿ ಸೇರಿದೆ. ಇದು ಯುತ್‌ ವರ್ಲ್ಡ್ ಚಾಂಪಿಯನ್‌ಶಿಪ್‌ ಆರ್ಚರಿಯಲ್ಲಿ ಭಾರತ ಗೆದ್ದ ಅತ್ಯಧಿಕ ಸಂಖ್ಯೆಯ ಪದಕವಾಗಿದೆ. ಈ ಸಾಧನೆಯೊಂದಿಗೆ ಭಾರತ ಕೂಟದಲ್ಲಿ ದ್ವಿತೀಯ ಸ್ಥಾನ ಪಡೆಯಿತು. ಕೊರಿಯಾ ಅಗ್ರಸ್ಥಾನ ಅಲಂಕರಿಸಿತು. ಕೊರಿಯಾ ತಂಡ ಭಾರತಕ್ಕಿಂತ ಒಂದು ಪದಕ ಕಡಿಮೆ ಅಂದರೆ 10 ಪದಕ ಗೆದ್ದರೂ ಕೊರಿಯಾ ಬೆಳ್ಳಿ ಸಾಧನೆಯಲ್ಲಿ ಭಾರತಕ್ಕಿಂತ ಮೇಲುಗೈ ಸಾಧಿಸಿದ ಆಧಾರದಲ್ಲಿ ಅಗ್ರಸ್ಥಾನ ಸಿಕ್ಕಿತು.

19 ವರ್ಷದ ಪಾರ್ಥ್ ಸಾಳುಂಕೆ ಅಂಡರ್‌-21 ವಿಭಾಗದ ರಿಕರ್ವ್‌ ಫೈನಲ್‌ನಲ್ಲಿ ಕೊರಿಯಾದ ಬಿಲ್ಲುಗಾರ, 7ನೇ ಶ್ರೇಯಾಂಕದ ಸಾಂಗ್‌ ಇಂಜುನ್‌ ಅವರನ್ನು 7-3 ಅಂತರದಿಂದ ಹಿಮ್ಮೆಟ್ಟಿಸಿದರು. ಅಂಡರ್‌-21 ಮಹಿಳಾ ವಿಭಾಗದ ರಿಕರ್ವ್‌ ಸಿಂಗಲ್ಸ್‌ನಲ್ಲಿ ಭಾಜಾ ಕೌರ್‌ ಕಂಚಿನ ಪದಕ ಜಯಿಸಿದರು. ಅವರು ಚೈನೀಸ್‌ ತೈಪೆಯ ಸು ಸಿನ್‌ ಯು ವಿರುದ್ಧ 7-1ರಿಂದ ಗೆಲುವು ಕಂಡರು.

ಇದನ್ನೂ ಓದಿ Lakshya Sen: ಭಾರತದ ಲಕ್ಷ್ಯ ಸೇನ್‌, ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಚಾಂಪಿಯನ್‌

ಕೆನಡಾ ಓಪನ್‌ ಗೆದ್ದ ಲಕ್ಷ್ಯ ಸೇನ್‌

ಒಟ್ಟಾವ: ಭಾರತದ ಯುವ ಬ್ಯಾಡ್ಮಿಂಟನ್‌ ಆಟಗಾರ, ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಲಕ್ಷ್ಯ ಸೇನ್‌ (Lakshya Sen) ಅವರು ಕೆನಡಾ ಓಪನ್‌ 2023ರ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಪುರಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌, ಚೀನಾದ ಲಿ ಶಿ ಫೆಂಗ್‌ ಅವರನ್ನು 21-18, 22-20 ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಚಾಂಪಿಯನ್‌ ಎನಿಸಿದ್ದಾರೆ.

ಕೆನಡಾದ ಕ್ಯಾಲ್ಗರಿಯಲ್ಲಿ ಭಾನುವಾರ ರಾತ್ರಿ ನಡೆದ ಕೆನಡಾ ಓಪನ್‌ ಸೂಪರ್‌ 500 ಟೂರ್ನಿಯ ಫೈನಲ್ ಪಂದ್ಯದಲ್ಲಿ 19ನೇ ಶ್ರೇಯಾಂಕಿತ ಲಕ್ಷ್ಯ ಸೇನ್‌ ಅವರು ಎದುರಾಳಿಗೆ ಮುನ್ನಡೆ ಪಡೆಯಲು ಯಾವ ಅವಕಾಶವೂ ಕೊಡದೆ ಚಾಂಪಿಯನ್‌ ಆಟವಾಡಿದರು. ಮೊದಲ ಸೆಟ್‌ನಲ್ಲಿ ಮುನ್ನಡೆ ಸಾಧಿಸಲು ಲಿ ಶಿ ಫೆಂಗ್‌ ಎಷ್ಟೇ ಪ್ರಯತ್ನಪಟ್ಟರೂ ಲಕ್ಷ್ಯ ಸೇನ್‌ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಎರಡನೇ ಸೆಟ್‌ನಲ್ಲಿ ಫೆಂಗ್‌ ತೀವ್ರ ಪೈಪೋಟಿ ಒಡ್ಡಿದರೂ ಫಲ ಕೊಡಲಿಲ್ಲ.

Exit mobile version