ನವ ದೆಹಲಿ: ವೆಸ್ಟ್ ಇಂಡೀಸ್ (ind vs wi) ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಸೋಲು ಅನುಭವಿಸಿದೆ. 2016 ರ ಬಳಿಕ 3-2 ಅಂತರದೊಂದಿಗೆ ಕೆರಿಬಿಯನ್ ತಂಡವು ಭಾರತ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಗೆಲುವು ಸಾಧಿಸಿದೆ. ಆದರೆ 5ನೇ ಟಿ 20 ಐ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೆನ್ ಇನ್ ಬ್ಲೂ ತಂಡದ ಪ್ರದರ್ಶನ ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ. ಅವರೆಲ್ಲರೂ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಹಿಗ್ಗಾಮುಗ್ಗ ಜಾಡಿಸಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಅವರ ಕಳಪೆ ಆಯ್ಕೆಗಳಿಂದಾಗಿಯೇ ಭಾರತ ತಂಡ ಸೋಲು ಕಂಡಿದೆ ಎಂದು ಅವರೆಲ್ಲರೂ ಆರೋಪಿಸಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಸರಣಿ ಆರಂಭದಲ್ಲಿ 2- 0 ಅಂತರದ ಮುನ್ನಡೆ ಸಾಧಿಸಿತ್ತು. ಬಳಿಕ ಎರಡು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿತ್ತು. ಅಂತಿಮ ಪಂದ್ಯದಲ್ಲಿ ಸೋತಿತು. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯಲಿದ್ದು ಭಾರತ ತಂಡ ಈ ಪ್ರದರ್ಶನ ಅಭಿಮಾನಿಗಳನ್ನು ಕೆರಳಿಸಿತು.
ಪಾಂಡ್ಯ ಅವರ ಕಳಪೆ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಮತ್ತು ಕಳಪೆ ನಾಯಕತ್ವದ ಆಯ್ಕೆಗಳಿಂದಾಗಿ ಭಾರತ ಸೋತಿತು ಎಂದು ಅಭಿಮಾನಿಗಳು ಅವರನ್ನು ಟೀಕಿಸಿದ್ದಾರೆ. ಇದು ಭಾರತವು ಸತತ 11 ಸರಣಿಗಳ ಗೆಲುವಿನ ಸರಣಿಯನ್ನು ಕಳೆದುಕೊಳ್ಳುವಂತಾಯಿತು. ಭಾರತದ ಆತಿಥ್ಯದಲ್ಲಿ ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಫಲವಾದ ವೆಸ್ಟ್ ಇಂಡೀಸ್ ವಿರುದ್ಧವೇ ಸೋತಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣ.
ಲಾಡರ್ ಹಿಲ್ನಲ್ಲಿ ನಡೆದ ಪಂದ್ಯದಲ್ಲಿ ನಿಕೋಲಸ್ ಪೂರನ್ ಮತ್ತು ಬ್ರೆಂಡನ್ ಕಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಭಾರತ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 3-2ರಿಂದ ಗೆದ್ದುಕೊಂಡಿತು. ವೆಸ್ಟ್ ಇಂಡೀಸ್ ಪರ ಬ್ರೆಂಡನ್ ಕಿಂಗ್ 55 ಎಸೆತಗಳಲ್ಲಿ ಅಜೇಯ 85 ರನ್ ಗಳಿಸಿದರೆ, ಪೂರನ್ 35 ಎಸೆತಗಳಲ್ಲಿ 47 ರನ್ ಗಳಿಸಿದರು. ಭಾರತ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ಗಳ ವಿಜಯ ಸಾಧಿಸಿತು.
ಇದನ್ನೂ ಓದಿ : WTC Final 2023: ಟ್ರೋಫಿ ಗೆಲ್ಲುವ ವಿಶ್ವಾಸವಿದೆ; ಕೋಚ್ ರಾಹುಲ್ ದ್ರಾವಿಡ್