ಮುಂಬಯಿ: ಚೊಚ್ಚಲ ವನಿತಾ ಟಿ20 ಪ್ರೀಮಿಯರ್ ಲೀಗ್‌ನಲ್ಲಿ(WPL 2023) ಪಾಲ್ಗೊಳ್ಳಲಿರುವ 5 ಫ್ರಾಂಚೈಸಿಗಳು ಭರ್ಜರಿ ಮೊತ್ತಕ್ಕೆ ಹರಾಜಾಗಿವೆ. ಇದೀಗ ಬಿಸಿಸಿಐ ಈ ಟೂರ್ನಿಗೆ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಎಂದು ಹೆಸರಿಟ್ಟಿದೆ.
ತಂಡಗಳ ಹರಾಜು ನಡೆಯುವ ಮುನ್ನ ಕ್ರಿಕೆಟ್ ಪ್ರೇಮಿಗಳೆಲ್ಲ ಈ ಟೂರ್ನಿಗೆ ಮಹಿಳಾ ಐಪಿಎಲ್ ಎಂದೇ ಅನಧಿಕೃತವಾಗಿ ಹೆಸರಿಟ್ಟಿದ್ದರು. ಆದರೆ ಇನ್ನು ಮುಂದೆ ಈ ಟೂರ್ನಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಎಂದು ಕರೆಯಲಾಗುತ್ತದೆ.
ಫೆಬ್ರವರಿ ಮೊದಲ ವಾರದಲ್ಲಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ
ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದ್ದು, ಮಾರ್ಚ್ನಲ್ಲಿ ಎಲ್ಲ ಪಂದ್ಯಗಳು ಮುಂಬಯಿಯಲ್ಲಿ ನಡೆಯಲಿವೆ. ಬಳಿಕ ಪುರುಷರ ಐಪಿಎಲ್ ಆರಂಭವಾಗಲಿದೆ. ಹರಾಜಿನಲ್ಲಿ ಆಟಗಾರ್ತಿಯರ ಖರೀದಿಗೆ ಪ್ರತಿ ಫ್ರಾಂಚೈಸಿಗಳು ಗರಿಷ್ಠ 12 ಕೋಟಿ. ರೂ. ವ್ಯಯಿಸಬಹುದಾಗಿದೆ. ಪ್ರತಿ ತಂಡ ಕನಿಷ್ಠ 15ರಿಂದ ಗರಿಷ್ಠ 18 ಆಟಗಾರ್ತಿಯರನ್ನು ಒಳಗೊಂಡಿರುತ್ತದೆ. ಓರ್ವ ಅಸೋಸಿಯೇಟ್ ದೇಶದ ಆಟಗಾರ್ತಿ ಸಹಿತ ಪ್ರತಿ ತಂಡ ಆಡುವ 11ರ ಬಳಗದಲ್ಲಿ ಗರಿಷ್ಠ 5 ವಿದೇಶಿ ಆಟಗಾರ್ತಿಯರನ್ನು ಆಡಿಸಲು ಅವಕಾಶವಿದೆ.
ಇದನ್ನೂ ಓದಿ | Womens T20 Tri-Series: ವನಿತಾ ಟಿ20 ತ್ರಿಕೋನ ಸರಣಿ: ಅಜೇಯ ಓಟ ಮುಂದುವರಿಸಿದ ಟೀಮ್ ಇಂಡಿಯಾ