ಬೆಂಗಳೂರು: ಚೊಚ್ಚಲ ಆವೃತ್ತಿಯ ಬಹುನಿರೀಕ್ಷಿತ ಮಹಿಳೆಯರ ಕ್ರಿಕೆಟ್(WPL 2023) ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ಆರ್ಸಿಬಿ(RCB) ತಂಡಕ್ಕೆ ಆಸ್ಟ್ರೇಲಿಯಾದ ಬೆನ್ ಸಾಯರ್(Ben Sawyer) ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸಾಯರ್ ಅವರು ಕೋಚ್ ಆದ ವಿಚಾರವನ್ನು ಆರ್ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್,ದಿ ಹಂಡ್ರೆಡ್ ಮತ್ತು ಆಸ್ಟ್ರೇಲಿಯಾ ಮೂರು ಬಾರಿ ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಅವರ ನೇತೃತ್ವದಲ್ಲಿ ಆರ್ಸಿಬಿ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಎಂದು ಕಾದು ನೋಡಬೇಕಿದೆ. 45 ವರ್ಷದ ಸಾಯರ್ ಅವರು ಪ್ರಸ್ತುತ ಕಿವೀಸ್ ಮಹಿಳಾ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ WPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯ ಪಟ್ಟಿ
“ಬೆನ್ ಸಾಯರ್ ಅವರು ಕಳೆದ 20 ವರ್ಷಗಳಿಂದ ಮಹಿಳೆಯರ ಕ್ರಿಕೆಟ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಈ ಅಪಾರ ಅನುಭವದಿಂದ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ. ಹರಾಜಿನಲ್ಲಿ ಆಟಗಾರ್ತಿಯರ ಆಯ್ಕೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು” ಎಂದು ಆರ್ಸಿಬಿ ಟ್ವಿಟರ್ನಲ್ಲಿ ಹೇಳಿದೆ.