ಮುಂಬಯಿ: ಕ್ರಿಕೆಟ್ ಅಭಿಮಾನಿಗಳೆಲ್ಲ ಕಾತುರದಿಂದ ಕಾಯುತ್ತಿರುವ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2023)ಗೆ ಶನಿವಾರ(ಮಾರ್ಚ್ 4) ಅದ್ಧೂರಿ ಚಾಲನೆ ಸಿಗಲಿದೆ. ಬಾಲಿವುಡ್ ಸ್ಟಾರ್ ನಟ, ನಟಿಯರ ಸಮ್ಮುಖದಲ್ಲಿ ನಡೆಯುವ ವರ್ಣರಂಜಿತ ಕಾರ್ಯಕ್ರಮದ ಮೂಲಕ ಈ ಚುಟುಕು ಮಾದರಿಯ ಕ್ರಿಕೆಟ್ಗೆ ಹಸಿರು ನಿಶಾನೆ ಸಿಗಲಿದೆ.
ಈಗಾಗಲೇ ಎಲ್ಲ ತಂಡಗಳು ಮುಂಬೈ ತಪಿಲಿದ್ದು ಮೊದಲ ಸೀಸನ್ಗಾಗಿ ಭರ್ಜರಿ ತಯಾರಿ ನಡೆಸಿವೆ. ಉದ್ಘಾಟನಾ ಆವೃತ್ತಿಯ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (GT) ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಒಟ್ಟು 20 ಪಂದ್ಯಗಳು ಮತ್ತು 2 ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಒಟ್ಟಾರೆ 23 ದಿನಗಳಲ್ಲಿ ಈ ಟೂರ್ನಿ ಪೂರ್ಣಗೊಳ್ಳಲಿದೆ.
ಪಂದ್ಯಾವಳಿಯ ಸ್ವರೂಪ
ಒಟ್ಟು 5 ತಂಡಗಳು ಸೆಣಸಲಿದ್ದು, ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಹಾಗೂ ಡಬಲ್ ಹೆಡ್ಡರ್ ಪಂದ್ಯಗಳಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯಲಿದೆ. ಮಾರ್ಚ್ 24ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಲೀಗ್ನ ಫೈನಲ್ ಪಂದ್ಯ ಮಾರ್ಚ್ 26 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದನ್ನೂ ಓದಿ WPL 2023 : ದುರ್ಗೆಯ ಶ್ಲೋಕದೊಂದಿಗೆ ಆರಂಭವಾಗುತ್ತದೆ ಮಹಿಳೆಯರ ಪ್ರೀಮಿಯರ್ ಲೀಗ್ನ ಗೀತೆ
ಮಹಿಳಾ ಪ್ರೀಮಿಯರ್ ಲೀಗ್ 2023ರ ಪಂದ್ಯಗಳು ಭಾರತದಲ್ಲಿ Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಜಿಯೋ ಸಿ ಅಪ್ಲಿಕೇಶನ್ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.