ನವದೆಹಲಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಇನ್ನೇನು ಕೆಲವೇ ಕ್ಷಣದಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಈ ಟೂರ್ನಿಯ ಅಧಿಕೃತ ಗೀತೆಯನ್ನು ಬಿಡುಗಡೆ ಮಾಡಲಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗೀತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಖ್ಯಾತ ಗಾಯಕ ಶಂಕರ್ ಮಹಾದೇವನ್, ನೀತಿ ಮೋಹನ್ ಮತ್ತು ಹರ್ದೀಪ್ ಕೌರ್ ಅವರು “ಯೇ ತೋ ಬಾಸ್ ಶುರುವಾತಿ ಹೈ” ಗೀತೆಗೆ ಧ್ವನಿ ನೀಡಿದ್ದಾರೆ.
ಎರಡು ನಿಮಿಷಗಳ ಈ ವಿಡಿಯೋದಲ್ಲಿ ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಸ್ನೇಹ್ ರಾಣಾ ಸೇರಿದಂತೆ ಹಲವು ಕ್ರಿಕೆಟ್ ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ ಮಹಿಳಾ ಕ್ರಿಕೆಟ್ ಬೆಳವಣಿ ತೋರುವ ರೀತಿಯಲ್ಲಿ ಈ ಗೀತೆಯಲ್ಲಿ ಚಿತ್ರಿಸಲಾಗಿದೆ.
ಇದನ್ನೂ ಓದಿ WPL 2023 : ಐಪಿಎಲ್ ಮೊದಲ ಪಂದ್ಯ ಅರ್ಧ ಗಂಟೆ ತಡವಾಗಿ ಆರಂಭ, ಟ್ವೀಟ್ನಲ್ಲಿ ಮಾಹಿತಿ ಪ್ರಕಟ
ಮೊದಲ ಆವೃತ್ತಿಯ ಉದ್ಘಾಟನಾ ಸಮಾರಂಭದ ಸಮಯವನ್ನು ಮರು ನಿಗದಿ ಮಾಡಲಾಗಿದೆ. ಆರಂಭದಲ್ಲಿ ಈ ಸಮಾರಂಭ 5.30ಕ್ಕೆ ನಿಗದಿಯಾಗಿತ್ತು. ಆದರೆ ಇದೀಗ ಈ ಕಾರ್ಯಕ್ರಮ ಅರ್ಧಗಂಟೆ ತಡವಾಗಿ ಆರಂಭವಾಗಲಿದೆ. ಉದ್ಘಾಟನಾ ಸಮಾರಂಭ ತಡವಾದ ಕಾರಣ ಪಂದ್ಯ 8 ಗಂಟೆಗೆ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ.