Site icon Vistara News

WPL 2023: ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಗುಜರಾತ್​ ಜೈಂಟ್ಸ್​

WPL 2023: Gujarat Giants eyeing second win

WPL 2023: Gujarat Giants eyeing second win

ಮುಂಬಯಿ: ಮಹಿಳಾ ಪ್ರೀಮಿಯರ್​ ಲೀಗ್​ನ(WPL 2023) ಶನಿವಾರದ(ಮಾರ್ಚ್​ 11) ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​(Gujarat Giants) ಮತ್ತು ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ಮುಖಾಮುಖಿಯಾಗಲಿವೆ. ಹಂಗಾಮಿ ನಾಯಕಿ ಸ್ನೇಹ್​ ರಾಣಾ ಸಾರಥ್ಯದ ಗುಜರಾತ್​ ತಂಡ ಫೈನಲ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.

ಡೆಲ್ಲಿ ಕ್ಯಾಪಿಟಲ್ಸ್​ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಗುಜರಾತ್​ ಕೂಡ 3 ಪಂದ್ಯಗಳನ್ನಾಡಿ ಒಂದರಲ್ಲಿ ಗೆಲುವು ಸಾಧಿಸಿ 4ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಉತ್ತಮ ರನ್​ರೇಟ್​ನಲ್ಲಿ ಗೆದ್ದರೆ ದ್ವಿತೀಯ ಸ್ಥಾನಕ್ಕೇರುವ ಅವಕಾಶವಿದೆ. ಈ ನಿಟ್ಟಿನಲ್ಲಿ ಗುಜರಾತ್​ ಶಕ್ತಿ ಮೀರಿ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ WPL 2023 : ಆರ್​ಸಿಬಿಗೆ ಮಗದೊಂದು ಹೀನಾಯ ಪರಾಜಯ, ಯುಪಿ ವಿರುದ್ಧ 10 ವಿಕೆಟ್​ ಸೋಲು

ಟೂರ್ನಿಯಲ್ಲಿ ಆಡಿದ ಮೊದಲೆರಡು ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಮೆರೆದಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮುಂಬೈ ಇಂಡಿಯನ್ಸ್​ ವಿರುದ್ಧದ ಮೂರನೇ ಪಂದ್ಯದಲ್ಲಿ ತೀರಾ ಕಳಪೆ ಪ್ರದರ್ಶನ ತೋರಿ ಸೋಲಿಗೆ ತುತ್ತಾಗಿತ್ತು. ಇದೀಗ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳುವ ಯೋಜನೆಯಲ್ಲಿದೆ. ಮೆಗ್​ ಲ್ಯಾನಿಂಗ್​ ಮತ್ತು ಜೆಮಿಮಾ ರೋಡ್ರಿಗಸ್​ ಉತ್ತಮ ಫಾರ್ಮ್​ನಲ್ಲಿರುವುದು ತಂಡಕ್ಕೆ ಪ್ಲಸ್‍ ಪಾಯಿಂಟ್‍.

Exit mobile version