Site icon Vistara News

WPL 2023: ಮುಂಬೈ ಇಂಡಿಯನ್ಸ್​ ತಂಡಕ್ಕೆ ಹರ್ಮನ್​ಪ್ರೀತ್​ ಕೌರ್​ ನಾಯಕಿ

WPL 2023: Harmanpreet Kaur to captain Mumbai Indians

WPL 2023: Harmanpreet Kaur to captain Mumbai Indians

ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(WPL 2023)ನಲ್ಲಿ ಹರ್ಮನ್​ಪ್ರೀತ್​ ಕೌರ್​ ಮುಂಬೈ ಇಂಡಿಯನ್ಸ್​ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಟೀಮ್ ಇಂಡಿಯಾದ ನಾಯಕಿಯಾಗಿರುವ ಹರ್ಮನ್​ಪ್ರೀತ್​ ಕೌರ್(Harmanpreet Kaur)​ ಅವರನ್ನು ಹರಾಜಿನಲ್ಲಿ ಮುಂಬೈ ಇಂಡಿಯನ್ಸ್​ ತಂಡ 1.8 ಕೋಟಿ. ರೂ. ನೀಡಿ ಖರೀದಿಸಿತ್ತು. ಇದೀಗ ತಂಡದ ನಾಯಕತ್ವದ ಹೊಣೆ ನೀಡಿದೆ. ಕೌರ್​ ಅವರನ್ನು ತಂಡದ ನಾಯಕಿಯನ್ನಾಗಿ ಆಯ್ಕೆ ಮಾಡಿರುವ ವಿಚಾರವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದೆ.

ಭಾರತ ಪರ 151 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹರ್ಮನ್​ಪ್ರೀತ್ ಕೌರ್ ಜ್ವರದ ಮಧ್ಯೆಯೂ ಮಹಿಳಾ ಟಿ20 ವಿಶ್ವ ಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಆಡಿ ಎಲ್ಲರ ಮನಗೆದ್ದಿದ್ದರು. ಆದರೆ ಭಾರತ ಈ ಪಂದ್ಯದಲ್ಲಿ 5 ರನ್​ ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

ಇದನ್ನೂ ಓದಿ WPL 2023: ಅಭ್ಯಾಸ ಆರಂಭಿಸಿದ ಮಹಿಳಾ ಆರ್​ಸಿಬಿ ತಂಡ

ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ 136 ಇನಿಂಗ್ಸ್ ಆಡಿರುವ ಕೌರ್​​ 1 ಶತಕ ಹಾಗೂ 10 ಅರ್ಧಶತಕ ಬಾರಿಸಿದ್ದಾರೆ. ಒಟ್ಟು ಟಿ20 ಕ್ರಿಕೆಟ್​ನಲ್ಲಿ 3058 ರನ್​ ಕಲೆಹಾಕಿದ್ದಾರೆ.

Exit mobile version