Site icon Vistara News

WPL 2023: ಹ್ಯಾಟ್ರಿಕ್​ ವಿಕೆಟ್​ ಕಿತ್ತು ದಾಖಲೆ ಬರೆದ ಇಸ್ಸಿ ವಾಂಗ್

WPL 2023: Issy Wong took a hat-trick wicket and wrote a record

WPL 2023: Issy Wong took a hat-trick wicket and wrote a record

ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್(WPL 2023)​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಇಸ್ಸಿ ವಾಂಗ್(Issy Wong) ಅವರು ಹ್ಯಾಟ್ರಿಕ್​ ವಿಕೆಟ್​ ಕಿತ್ತು ಮಿಂಚಿದ್ದಾರೆ. ಈ ಮೂಲಕ ಮೊದಲ ಆವೃತ್ತಿಯಲ್ಲಿ ಹ್ಯಾಟ್ರಿಕ್​ ವಿಕೆಟ್​ ಕಿತ್ತ ಮೊದಲ ಬೌಲರ್​ ಎಂಬ ಇತಿಹಾಸ ನಿರ್ಮಿಸಿದರು.

ಶುಕ್ರವಾರ ರಾತ್ರಿ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್​ ತಂಡ ನ್ಯಾಟ್​ ಸ್ಕಿವರ್​-ಬ್ರಂಟ್(Nat Sciver-Brunt)​​ ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 182 ರನ್​ ಬಾರಿಸಿ ಸವಾಲೊಡ್ಡಿತು. ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಯುಪಿ ವಾರಿಯರ್ಸ್​ ತಂಡ 17.4 ಓವರ್​ಗಳಲ್ಲಿ ಕೇವಲ 110 ರನ್​ಗೆ ಆಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಮುಂಬೈ 72 ರನ್​ಗಳ ಗೆಲುವು ದಾಖಲಿಸಿತು.

ಈ ಪಂದ್ಯದಲ್ಲಿ ಘಾತಕ ಬೌಲಿಂಗ್​ ನಡೆಸಿದ ಇಂಗ್ಲೆಂಡ್​ ಕ್ರಿಕೆಟ್​ ತಂಡದ ಯುವ ಆಟಗಾರ್ತಿ ಇಸ್ಸಿ ವಾಂಗ್​ 4 ವಿಕೆಟ್​ ಕಿತ್ತು ಮಿಂಚಿದರು. ಇದರಲ್ಲಿ ಹ್ಯಾಟ್ರಿಕ್​​ ವಿಕೆಟ್​ ಕೂಡ ಒಳಗೊಂಡಿತು. ಅವರ ಬೌಲಿಂಗ್​ ದಾಳಿಯನ್ನು ಎದುರಿಸಲು ಯಾವ ಹಂತದಲ್ಲಿಯೂ ಯುಪಿಗೆ ಸಾದ್ಯವಾಗಲ್ಲೇ ಇಲ್ಲ. ಒಟ್ಟು ನಾಲ್ಕು ಓವರ್​ಗಳಲ್ಲಿ ಕೇವಲ 15 ರನ್​ ಮಾತ್ರ ಬಿಟ್ಟುಕೊಟ್ಟರು.

ಇದನ್ನೂ ಓದಿ WPL 2023 : ಯುಪಿ ವಿರುದ್ಧ 72 ರನ್​ಗಳ ಭರ್ಜರಿ​ ಜಯ; ಮುಂಬಯಿ ಇಂಡಿಯನ್ಸ್ ಫೈನಲ್​ಗೆ ಎಂಟ್ರಿ

ಯುಪಿ ವಿರುದ್ಧ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದ ಮುಂಬೈ ಭಾನುವಾರ ನಡೆಯುವ ಪ್ರಶಸ್ತಿ ಕಾದಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸವಾಲು ಎದುರಿಸಲಿದೆ.

Exit mobile version