ಮುಂಬಯಿ: ತೀವ್ರ ಕುತೂಹಲ(WPL 2023) ಮೂಡಿಸಿದ ಚೊಚ್ಚಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ(Smriti Mandhana) ಅತ್ಯಧಿಕ 3.4 ಕೋಟಿ ರೂ. ಮೊತ್ತಕ್ಕೆ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಪಾಲಾಗುವ ಮೂಲಕ ದಾಖಲೆ ನಿರ್ಮಿಸಿದ್ದರು.
ಇದೀಗ ಮಂಧಾನಾ ಅವರಿಗೆ ಆರ್ಸಿಬಿ ನೀಡುತ್ತಿರುವ ಹಣ ಪಾಕಿಸ್ತಾನ ಆಟಗಾರರು ಪಾಕ್ ಪ್ರೀಮಿಯರ್ ಲೀಗ್ನಲ್ಲಿ ಪಡೆಯುತ್ತಿರುವ ಹಣಕ್ಕಿಂತ ದುಪ್ಪಟ್ಟಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪಾಕ್ ಆಟಗಾರರು ಟ್ರೋಲ್ ಆಗುತ್ತಿದ್ದಾರೆ.
ಇದನ್ನೂ ಓದಿ WPL Auction 2023 : ಮಹಿಳೆಯರ ಪ್ರೀಮಿಯರ್ ಲೀಗ್ ಹರಾಜಿನ ಬಳಿಕ ಐದು ತಂಡಗಳ ಸದಸ್ಯರ ಪಟ್ಟಿ ಇಲ್ಲಿದೆ
ಆರ್ಸಿಬಿ ತಂಡ ಮಂಧಾನಾ ಅವರನ್ನು 3.4 ಕೋಟಿ ರೂ.ಗೆ ಬಿಡ್ ಮಾಡಿ ತಂಡಕ್ಕೆ ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಮಂಧಾನಾ ಮಹಿಳಾ ಪ್ರೀಮಿಯರ್ ಲೀಗ್ನ ಚೊಚ್ಚಲ ಆವೃತ್ತಿಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಟವಾದ ಆಟಗಾರ್ತಿ ಎಂಬ ದಾಖಲೆ ಕೂಡ ಬರೆದರು. ಆದರೆ ಇದೀಗ ಮಂಧಾನಾ ಪಾಕ್ ಪ್ರೀಮಿಯರ್ ಲೀಗ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಪಿಎಸ್ಎಲ್ನಲ್ಲಿ ಪಡೆಯುವುದಕ್ಕಿಂತ ಎರಡು ಪಟ್ಟು ಹಣವನ್ನು ಪಡೆಯುತ್ತಿದ್ದಾರೆ ಎಂದು ನೆಟ್ಟಿಗರು ಪಾಕ್ ಆಟಗಾರರನ್ನು ಟ್ರೋಲ್ ಮಾಡಿದ್ದಾರೆ.
ವರದಿಯೊಂದರ ಪ್ರಕಾರ ಪಾಕಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ಬಾಬರ್ ಅಜಂಗೆ ಸಿಗುತ್ತಿರುವ ಸಂಬಳ 1.4 ಕೋಟಿ. ಆದರೆ ಮಂಧಾನಾಗೆ ಆರ್ಸಿಬಿ 3.4 ಕೋಟಿಯನ್ನು ನೀಡುತ್ತಿದೆ. ಮಂಧಾನಾ ಹೊರತಾಗಿಯೂ ಕೆಲ ಆಟಗಾರ್ತಿಯರು ಪಾಕ್ ಆಟಗಾರರಿಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಾಬರ್ ಅಜಂ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.