Site icon Vistara News

WPL 2023: ಮಳೆಯಿಂದ ಅಡಚಣೆಯಾದ ಡೆಲ್ಲಿ-ಯುಪಿ ಪಂದ್ಯ ಮತ್ತೆ ಆರಂಭ

WPL 2023: Rain interrupts Delhi-UP match; Match stoppage

WPL 2023: Rain interrupts Delhi-UP match; Match stoppage

ಮುಂಬಯಿ: ಮಳೆಯಿಂದ ಅಡಚಣೆಯಾದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಯುಪಿ ವಾರಿಯರ್ಸ್​ ವಿರುದ್ಧದ ಪಂದ್ಯ ಮತ್ತೆ ಆರಂಭಗೊಂಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ 9 ಓವರ್​ಗಳಲ್ಲಿ ಒಂದು ವಿಕೆಟ್​ ಕಳೆದುಕೊಂಡು 87 ರನ್​ ಗಳಿಸಿದ ವೇಳೆ ಮಳೆ ಆರಂಭವಾಗಿ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಆದರೆ ಇದೀಗ ಮಳೆ ನಿಂತಿದ್ದು ಪಂದ್ಯ ನಡೆಯುತ್ತಿದೆ.

ಮುಂಬಯಿಯ ಡಾ. ಡಿ.ವೈ. ಪಾಟೀಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸುತ್ತಿರುವ ಡೆಲ್ಲಿ ತಂಡದ ನಾಯಕಿ ಮೆಗ್​ ಲ್ಯಾನಿಂಗ್(53*)​ ಸ್ಫೋಟಕ ಬ್ಯಾಟಿಂಗ್​ ಮೂಲಕ ಅರ್ಧಶತಕ ಸಿಡಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಸದ್ಯ ಅವರು 34 ಎಸೆತಗಳಿಂದ 7 ಬೌಂಡರಿ ಮತ್ತು 3 ಸಿಕ್ಸರ್​ ಬಾರಿಸಿದ್ದಾರೆ. ಇವರ ಜತೆಗಾರ್ತಿ ಮರಿಜಾನ್​ ಕಾಪ್​ 9 ರನ್​ ಗಳಿಸಿ ಬ್ಯಾಟಿಂಗ್​ ನಡೆಸುತ್ತಿದ್ದಾರೆ.

ಇದನ್ನೂ ಓದಿ WPL 2023: ಮಹಿಳಾ ದಿನಾಚರಣೆಯ ಪ್ರಯುಕ್ತ ಕ್ರಿಕೆಟ್​ ಪ್ರಿಯರಿಗೆ ಉಚಿತ ಟಿಕೆಟ್​ ಆಫರ್ ನೀಡಿದ ಬಿಸಿಸಿಐ

ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮಿಂಚಿದ ಶಫಾಲಿ ವರ್ಮ 17 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ವಿಕೆಟ್​ ಮೆಗ್​ಗ್ರಾತ್​ ಪಾಲಾಯಿತು.

Exit mobile version