ಮುಂಬಯಿ: ಸ್ಮೃತಿ ಮಂಧಾನಾ(smriti mandhana) ಸಾರಥ್ಯದ ಆರ್ಸಿಬಿ(RCB) ತಂಡ ಬಲಿಷ್ಠವಾಗಿದೆ ಎಂದು ಭಾರತದ ಮಾಜಿ ಟೆನಿಸ್ ಆಟಗಾರ್ತಿ ಮತ್ತು ಆರ್ಸಿಬಿ ತಂಡದ ಮೆಂಟರ್ ಸಾನಿಯಾ ಮಿರ್ಜಾ(sania mirza) ಅಭಿಪ್ರಾಯ ಪಟ್ಟಿದ್ದಾರೆ.
ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗೆ(WPL 2023) ಇಂದು(ಶನಿವಾರ ಮಾರ್ಚ್ 4) ಅದ್ಧೂರಿ ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆರ್ಸಿಬಿ ತಂಡ ಭಾನುವಾರ(ಮಾರ್ಚ್ 5) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಆರ್ಸಿಬಿ ತಂಡದೊಂದಿಗಿನ ಸಂವಾದದಲ್ಲಿ ಸಾನಿಯಾ ಮಿರ್ಜಾ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ದೇಶದಲ್ಲಿ ಮಹಿಳಾ ಕ್ರೀಡೆಗಾಗಿ ಕೆಲಸ ಮಾಡುವುದು ತನ್ನ ಜೀವನದ ಗುರಿಯಾಗಿದೆ. ಮಹಿಳೆಯರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ಕ್ರೀಡೆಯಲ್ಲಿ ಯಾರಾದರೂ ಏನಾದರೂ ಸಾಧಿಸಲು ಬಯಸಿದರೆ ಅವರ ನೆರವಿಗಾಗಿ ನಾನಿದ್ದೇನೆ. ನಾನು ನಿಮಗೆ ನನ್ನ ನಂಬರ್ ನೀಡಬಲ್ಲೆ. ಕ್ರೀಡೆಯಲ್ಲಿ ನಿಮಗೆ ಬೇಕಾದ ಎಲ್ಲ ಸಲಹೆಯನ್ನು ನಾನು ನೀಡಲು ಸದಾ ಸಿದ್ಧ” ಎಂದು ಹೇಳಿದರು.
ಇದನ್ನೂ ಓದಿ WPL 2023: ಮಹಿಳಾ ಪ್ರೀಮಿಯರ್ ಲೀಗ್ 5 ತಂಡಗಳ ನಾಯಕಿಯರು
“ಈ ಬಾರಿ ಆರ್ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸವಿದೆ. ತಂಡದಲ್ಲಿ ಹೆಚ್ಚಾಗಿ ಯುವ ಆಟಗಾರ್ತಿಯರೇ ನೆಚ್ಚಿಕೊಂಡಿದ್ದಾರೆ. ಈ ಆಟಗಾರ್ತಿಯರ ಉತ್ತಮ ಪ್ರದರ್ಶನವನ್ನು ಮೈದಾನದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇನೆ” ಎಂದು ಸಾನಿಯಾ ಮಿರ್ಜಾ ಹೇಳಿದರು.