ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಸೋಮವಾರದ(ಮಾರ್ಚ್ 6) ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಟಾಸ್ ಸೋತ ಕೌರ್ ಪಡೆ ಮೊದಲು ಬೌಲಿಂಗ್ ನಡೆಸಲಿದೆ. ಆರ್ಸಿಬಿಯ ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿತು. ಆಶಾ ಶೋಭನಾ ಬದಲು ಶ್ರೇಯಾಂಕಾ ಪಾಟೀಲ್ ಅವರಿಗೆ ಅವಕಾಶ ನೀಡಲಾಯಿತು.
ಮುಂಬಯಿಯ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆಲುವಿನ ಖಾತೆ ತೆರೆಯಲು ಪಣ ತೊಟ್ಟಿದ್ದರೆ, ಎದುರಾಳಿ ಮುಂಬೈ ಈ ಪಂದ್ಯದಲ್ಲಿಯೂ ಗೆದ್ದು ಸತತ ಎರಡು ಗೆಲುವು ದಾಖಲಿಸುವ ಯೋಜನೆಯಲ್ಲಿದೆ. ಹೀಗಾಗಿ ಉಭಯ ತಂಡಗಳ ಈ ಹೋರಾಟವನ್ನು ಹೈ ವೋಲ್ಟೇಜ್ ಪಂದ್ಯ ಎಂದು ನಿರೀಕ್ಷಿಸಬಹುದು.
ಇದನ್ನೂ ಓದಿ WPL 2023 : ಬಟರ್ ಚಿಕನ್ ಆಸೆಗೆ ಮ್ಯಾಚ್ ಗೆಲ್ಲಿಸಿದ್ದ ಗ್ರೇಸ್ ಹ್ಯಾರಿಸ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನಾ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ದಿಶಾ ಕಸಟ್, ಹೀತರ್ ನೈಟ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೆಗಾನ್ ಶಟ್, ಪ್ರೀತಿ ಬೋಸ್, ರೇಣುಕಾ ಸಿಂಗ್.
ಮುಂಬೈ ಇಂಡಿಯನ್ಸ್: ಹ್ಯಾಲಿ ಮ್ಯಾಥ್ಯೂಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ, ನಥಾಲಿ ಸ್ಕಿವರ್ ಬ್ರಂಟ್,ಅಮೇಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್, ಹುಮೈರಾ ಖಾಜಿ, ಐಸ್ಸಿ ವೋಂಗ್, ಜಿಂತಿಮಣಿ ಕಲಿಟಾ, ಶೇಖ್ ಇಶಾಖ್.