Site icon Vistara News

WPL 2023: ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ವೇಳಾಪಟ್ಟಿ ಸಿದ್ಧ; ವರದಿ

WPL

#image_title

ನವದೆಹಲಿ: ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(WPL 2023) ಮಾರ್ಚ್ 4ರಿಂದ 26ರ ವರೆಗೆ ಮುಂಬಯಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಜತೆಗೆ ಟೂರ್ನಿಯ ವೇಳಾಪಟ್ಟಿ ಸಿದ್ಧಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ(BCCI) ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸದ್ಯದ ಮಾಹಿತಿ ಪ್ರಕಾರ ಟೂರ್ನಿಯ ಎಲ್ಲ ಪಂದ್ಯಗಳಿಗೂ ಮುಂಬೈನ ಬ್ರೆಬೋರ್ನ್‌ ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಮುಖೇಶ್‌ ಅಂಬಾನಿ ಮಾಲಿಕತ್ವದ ಮುಂಬೈ ಹಾಗೂ ಗೌತಮ್‌ ಅದಾನಿ ಒಡೆತನದ ಅಹಮದಾಬಾದ್‌ ತಂಡಗಳು ಮುಖಾಮುಖಿಯಾಗಲಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ WPL Player Auction: ಡಬ್ಲ್ಯುಪಿಎಲ್ ಆಟಗಾರ್ತಿಯರ ಹರಾಜು ಮುಂದೂಡಿಕೆ

1 ಸಾವಿರ ಆಟಗಾರ್ತಿಯರ ನೊಂದಣಿ

ಮೊದಲ ಆವೃತ್ತಿಯ ಮಹಿಳಾ ಐಪಿಎಲ್​ಗೆ ಈಗಾಗಲೇ ಸಾವಿರ ಆಟಗಾರ್ತಿಯರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹರಾಜಿನಲ್ಲಿ ಐದು ತಂಡಗಳ ಮಾಲೀಕರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಆಟಗಾರ್ತಿಯರ ಹರಾಜು ಪ್ರಕ್ರಿಯೆ(WPL auction) ಫೆ. 11 ಅಥವಾ 13ಕ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ.

Exit mobile version