Site icon Vistara News

WPL 2023: ಟಾಸ್​ ಗೆದ್ದ ಯುಪಿ ವಾರಿಯರ್ಸ್​; ಡೆಲ್ಲಿಗೆ ಬ್ಯಾಟಿಂಗ್​ ಆಹ್ವಾನ

WPL 2023: UP Warriors win the toss; Batting invitation to Delhi

WPL 2023: UP Warriors win the toss; Batting invitation to Delhi

ಮುಂಬಯಿ: ಮಂಗಳವಾರದ ಮಹಿಳಾ ಪ್ರೀಮಿಯರ್​ ಲೀಗ್​ನ(WPL 2023) ಬಹುನಿರೀಕ್ಷಿತ ಪಂದ್ಯದಲ್ಲಿ ಟಾಸ್​ ಗೆದ್ದ ಯುಪಿ ವಾರಿಯರ್ಸ್​ ತಂಡದ ನಾಯಕಿ ಅಲಿಸ್ಸಾ ಹೀಲಿ ಮೊದಲು ಬೌಲಿಂಗ್​ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಟಾಸ್ ಸೋತ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟಿಂಗ್​ ಆಹ್ವಾನ ಪಡೆದಿದೆ.

ಯುಪಿ ವಾರಿಯರ್ಸ್​ ಪರ ಕಳೆದ ಪಂದ್ಯದ ಮ್ಯಾಚ್​ ವಿನ್ನರ್​ ಗ್ರೇಸ್​ ಹ್ಯಾರಿಸ್​ ಈ ಪಂದ್ಯದಿಂದ ಹೊರಗುಳಿದರು. ಅವರ ಬದಲು ಶಬ್ನಿಮ್​ ಇಸ್ಮಾಯಿಲ್‌ ಆಡುವ ಬಳಗದಲ್ಲಿ ಅವಕಾಶ ಪಡೆದರು. ಡೆಲ್ಲಿ ಪರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಈ ಪಂದ್ಯದಲ್ಲಿಯೂ ಕಣಕ್ಕಿಳಿಸಿತು.

ಇದನ್ನೂ ಓದಿ WPL 2023: ಮಹಿಳಾ ದಿನಾಚರಣೆಯ ಪ್ರಯುಕ್ತ ಕ್ರಿಕೆಟ್​ ಪ್ರಿಯರಿಗೆ ಉಚಿತ ಟಿಕೆಟ್​ ಆಫರ್ ನೀಡಿದ ಬಿಸಿಸಿಐ

ಮುಂಬಯಿಯ ಡಾ. ಡಿ.ವೈ. ಪಾಟೀಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ ಬಹಳ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಇದೆ. ಏಕೆಂದರೆ ಉಭಯ ತಂಡಗಳು ಬಲಿಷ್ಠವಾಗಿದ್ದು ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯವನ್ನು ಗೆದ್ದು ಬೀಗಿವೆ. ಹೀಗಾಗಿ ಈ ಪಂದ್ಯವೂ ರೋಚಕವಾಗಿರಬಹುದೆಂದು ನಿರೀಕ್ಷಿಸಬಹುದು.

ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್​: ಮೆಗ್‌ ಲ್ಯಾನಿಂಗ್‌ (ನಾಯಕಿ), ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ಮರಿಜಾನ್‌ ಕಾಪ್‌, ಅಲೈಸ್‌ ಕ್ಯಾಪ್ಸಿ, ತನಿಯಾ ಭಾಟಿಯಾ, ಅರುಂಧತಿ ರೆಡ್ಡಿ, ಜೆಸ್‌ ಜೊನಾಸೆನ್‌, ರಾಧಾ ಯಾದವ್‌, ಶಿಖಾ ಪಾಂಡೆ,ತಾರಾ ನೋರಿಸ್‌.

ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

Exit mobile version