Site icon Vistara News

WPL 2023: ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಗೆದ್ದ ಯುಪಿ ವಾರಿಯರ್ಸ್​ ತಂಡದಿಂದ ಬೌಲಿಂಗ್​ ಆಯ್ಕೆ

WPL 2023: UP Warriors win the toss in eliminator match, opt for bowling

WPL 2023: UP Warriors win the toss in eliminator match, opt for bowling

ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌​ ಲೀಗ್​ನ ಶುಕ್ರವಾರದ ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಗೆದ್ದ ಯುಪಿ ವಾರಿಯರ್ಸ್​ ತಂಡದ ನಾಯಕಿ ಅಲಿಸ್ಸಾ ಹೀಲಿ ಮೊದಲು ಬೌಲಿಂಗ್​ ನಡೆಸುವ ನಿರ್ಧಾರ ಕೈಗೊಂಡರು. ಮುಂಬೈ ಇಂಡಿಯನ್ಸ್​ ಬ್ಯಾಟಿಂಗ್​ ಆಹ್ವಾನ ಪಡೆದಿದೆ.

ಮುಂಬಯಿಯ ಡಿ.ವೈ. ಪಾಟೀಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಇಲ್ಲಿ ಗೆದ್ದರಷ್ಟೇ ಫೈನಲ್​ ಪ್ರವೇಶ ಪಡೆಯಲಿದ್ದಾರೆ. ಬಳಿಕ ಮಾರ್ಚ್​ 26ರಂದು ನಡೆಯುವ ಡೆಲ್ಲಿ ವಿರುದ್ಧದ ಫೈನಲ್​ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಈ ಪಂದ್ಯಕ್ಕೆ ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಸಾಕ್ಷಿಯಾಗಿದ್ದಾರೆ. ಟಾಸ್​ಗೂ ಮುನ್ನ ಮಾತನಾಡಿದ ಅವರು ಮಹಿಳೆಯರು ಕೂಡ ಇಂದು ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಅದರಲ್ಲೂ ಭಾರತ, ಮಹಿಳೆಯರಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಬೆಂಬಲ ಸೂಚಿಸುತ್ತಿದೆ ಎಂದು ಹೇಳಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಅಂಡರ್​-19 ಟಿ20 ವಿಶ್ವ ಕಪ್​ ಫೈನಲ್​ನಲ್ಲಿಯೂ ನೀರಜ್​ ಚೋಪ್ರಾ ಭಾಗವಹಿಸಿ ಭಾರತ ತಂಡಕ್ಕೆ ಕೆಲ ಉಪಯುಕ್ತ ಸಲಹೆಯನ್ನು ನೀಡಿದ್ದರು.

ಸಂಭಾವ್ಯ ತಂಡಗಳು

ಮುಂಬಯಿ ಇಂಡಿಯನ್ಸ್​: ಹೇಲಿ ಮ್ಯಾಥ್ಯೂಸ್, ಯಸ್ತಿಕಾ ಭಾಟಿಯಾ, ನ್ಯಾಟ್ ಸೀವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ, ಜಿಂತಿಮಾನಿ ಕಲಿತಾ. ಶೇಕ್​ ಇಶಾಕ್​.

ಯುಪಿ ವಾರಿಯರ್ಸ್​: ಅಲಿಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಸಿಮ್ರಾನ್​ ಶೇಖ್​, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್​ ಹ್ಯಾರಿಸ್​, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ಪಾರ್ಶವಿ ಚೋಪ್ರಾ, ಎಸ್​. ಯಶಸ್ರಿ.

Exit mobile version