Site icon Vistara News

WPL 2023: ಡೆಲ್ಲಿ ವಿರುದ್ಧ ಗೆಲುವಿನ ಖಾತೆ ತರೆದೀತೇ ಆರ್​ಸಿಬಿ?

WPL 2023: Will RCB win against Delhi?

WPL 2023: Will RCB win against Delhi?

ಮುಂಬಯಿ: ಬಹುಶಃ ಐಪಿಎಲ್‌ ಇತಿಹಾಸದಲ್ಲೇ ಆರ್‌ಸಿಬಿಯಷ್ಟು ನತದೃಷ್ಟ ತಂಡ ಬೇರೊಂದಿರಲಿಕ್ಕಿಲ್ಲ. ವಿಶ್ವ ದರ್ಜೆಯ ಶ್ರೇಷ್ಠ ಆಟಗಾರರಾದ ಕ್ರಿಸ್‌ ಗೇಲ್‌, 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್​, ವಿರಾಟ್​ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರಂತಹ ಅದೆಷ್ಟೋ ದೈತ್ಯ ಕ್ರಿಕೆಟಿಗರನ್ನೂ ಹೊಂದಿಯೂ ಆರ್‌ಸಿಬಿ ಪುರುಷರ ತಂಡ ಚಾಂಪಿಯನ್‌ ಆಗದಿರುವುದು ಐಪಿಎಲ್‌ ವಿಪರ್ಯಾಸಗಳಲ್ಲೊಂದು. ಇದೇ ಹಾದಿಯನ್ನು ಮಹಿಳಾ ಆರ್​ಸಿಬಿ ತಂಡವು ತುಳಿದಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿಯೂ ಸೋಲು ಕಂಡು ನಿರ್ಗಮನದ ಹಾದಿಯಲ್ಲಿ ಬಂದು ನಿಂತಿದೆ.

ಸೋಮವಾರ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಾದರೂ ಆರ್​ಸಿಬಿ ಗೆಲುವಿನ ಖಾತೆ ತೆರೆಯಬಹುದಾ ಎಂದು ಕಾದು ನೋಡಬೇಕಿದೆ. ಒಂದೊಮ್ಮೆ ಆರ್​ಸಿಬಿ ಈ ಪಂದ್ಯದಲ್ಲಿಯೂ ಸೋಲು ಕಂಡರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ತಂಡ ಡೆಲ್ಲಿ ವಿರುದ್ಧ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಈ ಸೋಲಿಗೆ ಇದೀಗ ಸೇಡು ತೀರಿಸಲೇ ಬೇಕಿದೆ.

ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್‌ ಹರಾಜಿನ ಚಿತ್ರಣ ಕಂಡಾಗ ಸ್ಮೃತಿ ಮಂಧಾನಾ ನೇತೃತ್ವದ ಆರ್‌ಸಿಬಿ ಹೆಚ್ಚು ಬಲಿಷ್ಠವಾಗಿ ಗೋಚರಿಸಿತ್ತು. ವಿಶ್ವ ದರ್ಜೆಯ ಸ್ಟಾರ್‌ ಆಟಗಾರರ ಬಲವಿತ್ತು. ಆದರೆ ಇದು ಕಾಗದದಲ್ಲಿ ಮಾತ್ರ ಎಂಬುದು ಸಾಬೀತಾಗಿದೆ. ಆಡಿದ 4 ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಆರ್​ಸಿಬಿ ಬೌಲಿಂಗ್​ ಕೂಟದಲ್ಲೇ ಅತ್ಯಂತ ದುರ್ಬಲವಾಗಿ ಗೋಚರಿಸಿದೆ.

ಡೆಲ್ಲಿ ಹೆಚ್ಚು ಬಲಿಷ್ಠ

ಆರ್​ಸಿಬಿ ಹೆಸರಿಗಷ್ಟೆ ಬಲಿಷ್ಠವಾಗಿ ಗೋಚರಿಸಿದೆ. ಆದರೆ ಡೆಲ್ಲಿ ಮಾತ್ರ ಹೆಚ್ಚು ಬಲಿಷ್ಠ. ಬ್ಯಾಟಿಂಗ್​ ಬೌಲಿಂಗ್​ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಡ್ಯಾಶಿಂಗ್​ ಓಪನರ್​ ಶಫಾಲಿ ವರ್ಮ, ನಾಯಕಿ ಮೆಗ್​ ಲ್ಯಾನಿಂಗ್​ ತಂಡಕ್ಕೆ ಉತ್ತಮ ಆರಂಭ ನೀಡಿದರೆ. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್​ ತಂಡಕ್ಕೆ ನೆರವಾಗಬಲ್ಲರು. ಬೌಲಿಂಗ್​ನಲ್ಲಿ ಅನುಭವಿ ಶಿಖಾ ಪಾಂಡೆ ಮತ್ತು ಮರಿಜಾನೆ ಕಾಪ್​ ಘಾತಕ ಬೌಲಿಂಗ್​ಗೆ ಹೆಸರುವಾಸಿಯಾಗಿದ್ದಾರೆ. ಇವರ ಸವಾಲನ್ನು ಮೆಟ್ಟಿ ನಿಂತರಷ್ಟೇ ಆರ್​ಸಿಬಿಗೆ ಗೆಲುವು ಒಲಿಯಬಹುದು.

Exit mobile version