Site icon Vistara News

WPL 2024: ಪ್ಲೇ ಆಫ್ ಪ್ರವೇಶಿಸಿದ ಹಾಲಿ ಚಾಂಪಿಯನ್​ ಮುಂಬೈ; ನೂತನ ಅಂಕಪಟ್ಟಿ ಹೇಗಿದೆ?

Womens Premier League 2024

ನವದೆಹಲಿ: ಶನಿವಾರ ನಡೆದ ದೊಡ್ಡ ಮೊತ್ತದ ಮೇಲಾಟದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ನೀಡುವ ಮೂಲಕ ಎದುರಾಳಿ ಗುಜರಾತ್​ ತಂಡವನ್ನು ಮಗುಚಿ ಹಾಕಿದೆ. ಈ ಮೂಲಕ ಈ ಬಾರಿಯ ಡಬ್ಲ್ಯುಪಿಎಲ್​ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ.

ಇಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 7 ವಿಕೆಟ್ ನಷ್ಟಕ್ಕೆ 190ರನ್ ಕಲೆ ಹಾಕಿತು. ಬೆತ್ ಮೂನಿ 66(35ಎಸೆತ), ಹೇಮಲತಾ74(40ಎಸೆತ)ಭಾರತಿ ಫುಲ್ಮಾಲಿ ಔಟಾಗದೆ 21 ರನ್ ಗಳಿಸಿದರು.

ಕೌರ್​ ಪ್ರಚಂಡ ಬ್ಯಾಟಿಂಗ್​


ಗುರಿ ಬೆನ್ನಟ್ಟಿದ ಮುಂಬೈಗೆ ಆರಂಭಿ ಆಟಗಾರ್ತಿಯರಾದ ಯಾಸ್ತಿಕಾ ಭಾಟಿಯಾ (49) ಉತ್ತಮ ಆರಂಭ ನೀಡಿದರು. ಆ ಬಳಿಕ ನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರಚಂಡ ಬ್ಯಾಟಿಂಗ್​ ನಡೆಸಿ ಅಜೇಯ 95 ರನ್ ಬಾರಿಸಿದರು. ಇವರ ಈ ಬ್ಯಾಟಿಂಗ್​ ನೆರವಿನಿಂದ ಮುಂಬೈ 19.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಕೌರ್ 48 ಎಸೆತಗಳಲ್ಲಿ ಅಮೋಘ ಆಟವಾಡಿ 95 ರನ್ ಗಳಿಸಿದರು. 10ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದರು.

ನೂತನ ಅಂಕಪಟ್ಟಿ


ಮುಂಬೈ ಇಂಡಿಯನ್ಸ್​ ತಂಡ ಈ ಗೆಲುವಿನ ಮೂಲಕ 10 ಅಂಕ ಪಡೆದ ಪ್ಲೇ ಆಫ್ ಪ್ರವೇಶ ಪಡೆಯಿತು. ಇಂದು ನಡೆಯುವ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಣ ಪಂದ್ಯದಲ್ಲಿ ಡೆಲ್ಲಿ ಗೆದ್ದರೆ ಇದು ಕೂಡ ಪ್ಲೇ ಆಫ್​ಗೇರಲಿದೆ. ಆ ಬಳಿಕ ಉಳಿದ ಒಂದು ಸ್ಥಾನಕ್ಕೆ ಮೂರು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ.

ತಂಡಪಂದ್ಯಗೆಲುವುಸೋಲುಅಂಕ
ಮುಂಬೈ ಇಂಡಿಯನ್ಸ್​75210 (+0.343)
ಡೆಲ್ಲಿ ಕ್ಯಾಪಿಟಲ್ಸ್​6428 (+1.059)
ಆರ್​ಸಿಬಿ​​6336 (+0.038)
ಯುಪಿ ವಾರಿಯರ್ಸ್​7346 (-0.365)
ಗುಜರಾತ್​ ಜೈಂಟ್ಸ್​6142 (
-1.111)
Exit mobile version