ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್(WPL 2024) ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ಪ್ರವೇಶ ಪಡೆದಿದೆ. ಬುಧವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಈ ಸಾಧನೆ ಮಾಡಿತು.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ 9 ವಿಕೆಟಿಗೆ ಕೇವಲ 126 ರನ್ ಗಳಿಸಿತು. ಅಲ್ಪ ಮೊತ್ತವನ್ನು ಡೆಲ್ಲಿ 13.1 ಓವರ್‌ಗಳಲ್ಲಿ 3 ವಿಕೆಟಿಗೆ 129 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಚೇಸಿಂಗ್ ವೇಳೆ ಶಫಾಲಿ ವರ್ಮ 37 ಎಸೆತಗಳಿಂದ 71 ರನ್ (7 ಬೌಂಡರಿ, 5 ಸಿಕ್ಸರ್), ಜೆಮಿಮಾ ರೋಡ್ರಿಗಸ್ ಅಜೇಯ 38 ರನ್ ಹೊಡೆದರು. ಡೆಲ್ಲಿ ಪರ ಬೌಲಿಂಗ್ನಲ್ಲಿ ಮರಿಜಾನ್ ಕಾಪ್, ಶಿಖಾ ಪಾಂಡೆ ಮತ್ತು ಮಿನ್ನು ಮಣಿ ತಲಾ 2 ವಿಕೆಟ್ ಉರುಳಿಸಿದರು.
Roaring into the 𝗙𝗜𝗡𝗔𝗟𝗦 🥳@DelhiCapitals are one step closer for the ultimate prize 🏆#TATAWPL | #Final | #DCvGG pic.twitter.com/Z5KnvUofl9
— Women's Premier League (WPL) (@wplt20) March 13, 2024
ಆರ್ಸಿಬಿಗೆ ಮುಂಬೈ ಎದುರಾಳಿ
ಶುಕ್ರವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಮತ್ತು ಆರ್‌ಸಿಬಿ ಮುಖಾಮುಖಿ ಆಗಲಿವೆ. ಇಲ್ಲಿ ಗೆದ್ದ ತಂಡ ಭಾನುವಾರ ನಡೆಯುವ ಫೈನಲ್‌ನಲ್ಲಿ ಡೆಲ್ಲಿ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಆಗಿರುವ ಮುಂಬೈ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಹೀಗಾಗಿ ಆರ್‌ಸಿಬಿ ಶಕ್ತಿ ಮೀರಿ ಪ್ರದರ್ಶನ ತೋರುವ ಅಗತ್ಯವಿದೆ.
ಇದನ್ನೂ ಒದಿ WPL 2024: ಆರ್‌ಸಿಬಿ-ಮುಂಬೈ ಪಂದ್ಯ ವೀಕ್ಷಿಸಿದ ನ್ಯೂಜಿಲ್ಯಾಂಡ್ ಉಪ ಪ್ರಧಾನಿ
And that's a wrap to the league stage!#TATAWPL 2024 Playoffs, here we come 😎 pic.twitter.com/pN77iO72uF
— Women's Premier League (WPL) (@wplt20) March 13, 2024
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಡೆಲ್ಲಿ ಕ್ಯಾಪಿಟಲ್ಸ್ | 8 | 6 | 2 | 12 (+1.198) |
ಮುಂಬೈ ಇಂಡಿಯನ್ಸ್ | 8 | 5 | 3 | 10 (+0.024) |
ಆರ್‌ಸಿಬಿ | 8 | 4 | 4 | 8 (+0.306) |
ಯುಪಿ ವಾರಿಯರ್ಸ್ | 8 | 3 | 5 | 6 (-0.371) |
ಗುಜರಾತ್ ಜೈಂಟ್ಸ್ | 8 | 2 | 6 | 4 (-1.158) |