ಬೆಂಗಳೂರು: ಬಹುನಿರೀಕ್ಷಿತ 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಮಹಿಳಾ ಟಿ20(WPL 2024) ಟೂರ್ನಿ ಮೂರು ದಿನಗಳಲ್ಲಿ ಆರಂಭಗೊಳ್ಳಲಿದೆ. ಆರಂಭಿಕ 11 ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭಗೊಂಡಿದ್ದು ಬುಕ್ಮೈಶೋ ವೆಬ್ಸೈಟ್ನಲ್ಲಿ ಟಿಕೆಟ್ಗಳು ಲಭ್ಯವಿದೆ. ಎಲ್ಲ ಸ್ಟ್ಯಾಂಡ್‌ಗಳಿಗೆ ಆನ್ಲೈನ್ನಲ್ಲಿ 100 ರೂ. ಮುಖಬೆಲೆ ಹೊಂದಿವೆ.
ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲಿ ಮಹಿಳೆಯರಿಗೆ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ನೀಡಲಾಗಿತ್ತು. ಈ ಬಾರಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಹಾಲಿ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ.
📍Bengaluru
— Women's Premier League (WPL) (@wplt20) February 20, 2024
The @UPWarriorz are 🆙 and raring to go for #TATAWPL Season 2 😎 pic.twitter.com/ZtHaGpKdEr
ಆತಿಥೇಯ ಆರ್ಸಿಬಿ ಮಹಿಳಾ ತಂಡ ಫೆಬ್ರವರಿ 4ರಂದು ಯುಪಿ ವಾರಿಯರ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿ ಲೀಗ್ನಿಂದ ಮೊದಲ ತಂಡವಾಗಿ ಹೊರಬಿದ್ದಿದ್ದ ಆರ್ಸಿಬಿ ಈ ಬಾರಿ ತವರಿನ ಸಂಪೂರ್ಣ ಲಾಭವೆತ್ತಿ ಶ್ರೇಷ್ಠ ಪ್ರದರ್ಶನ ತೋರಬೇಕಿದೆ. ಕಳೆದ ವರ್ಷ ಸಂಪೂರ್ಣವಾಗಿ ಮುಂಬೈನಲ್ಲಿ ಟೂರ್ನಿ ನಡೆದಿತ್ತ. ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿಯೂ ನಡೆಯಲಿದೆ.
🎫 Tickets for all Bengaluru matches in #TATAWPL 2024 are now LIVE 🤩
— Women's Premier League (WPL) (@wplt20) February 17, 2024
Hurry and get them now 👉 https://t.co/FbEJ9ruc64
See you at the stands 👋 pic.twitter.com/PSL7mUQeOn
ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರಿಂದ ನೃತ್ಯ ಪ್ರದರ್ಶನ
ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ನ ಕೆಲವು ಸ್ಟಾರ್ಗಳು ಕಾಣಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Kartik Aaryan) ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಇವರ ಜತೆ ಕರ್ನಾಟಕದ ಕೆಲವು ಸಿನೆಮಾ ತಾರೆಯರು ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಫೆಬ್ರವರಿ 23 ರಂದು ಸಂಜೆ 6:30 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಚೊಚ್ಚಲ ಆವೃತ್ತಿಯಾದ ಕಳೆದ ಬಾರಿಯ ಉದ್ಘಾಟನಾ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಮತ್ತು ಗಾಯಕ ಎಪಿ ಧಿಲ್ಲೋನ್ ಪ್ರದರ್ಶನ ನೀಡಿದ್ದರು.
ಇದನ್ನೂ ಓದಿ WPL 2024 : ಆರ್ಸಿಬಿ ತಂಡಕ್ಕೆ ಆಘಾತ, ಎಡಗೈ ಬ್ಯಾಟರ್ ಟೂರ್ನಿಯಿಂದ ಔಟ್
Yeh Kingdom nahin, Ab Queendom Hai!
— Women's Premier League (WPL) (@wplt20) February 19, 2024
Join @TheAaryanKartik as he fights for the Crown for his Queendom!
Watch the #TATAWPL 2024 Opening Ceremony on @JioCinema & @Sports18 LIVE from the M. Chinnaswamy Stadium, Bengaluru.
🗓️ 23rd Feb
⏰ 6.30 PM
🎟️ https://t.co/jP2vYAWukG pic.twitter.com/p5tVvkWcMp
ಪೂರ್ಣ ವೇಳಾಪಟ್ಟಿ
ಫೆಬ್ರವರಿ 23- ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್: ಬೆಂಗಳೂರು
ಫೆಬ್ರವರಿ 24- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಯುಪಿ ವಾರಿಯರ್ಸ್: ಬೆಂಗಳೂರು
ಫೆಬ್ರವರಿ 25- ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ಬೆಂಗಳೂರು
ಫೆಬ್ರವರಿ 26 -ಯುಪಿ ವಾರಿಯರ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್: ಬೆಂಗಳೂರು
ಫೆಬ್ರವರಿ 27- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್: ಬೆಂಗಳೂರು
ಫೆಬ್ರವರಿ 28- ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್: ಬೆಂಗಳೂರು
ಫೆಬ್ರವರಿ 29- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್: ಬೆಂಗಳೂರು
ಮಾರ್ಚ್ 1-ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್; ಬೆಂಗಳೂರು
ಮಾರ್ಚ್ 2-ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್: ಬೆಂಗಳೂರು
ಮಾರ್ಚ್ 3- ಗುಜರಾತ್ ಜೈಂಟ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್: ಬೆಂಗಳೂರು
ಮಾರ್ಚ್ 4- ಯುಪಿ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ಬೆಂಗಳೂರು
ಮಾರ್ಚ್ 5 -ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ದೆಹಲಿ
ಮಾರ್ಚ್ 6 – ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೆಹಲಿ
ಮಾರ್ಚ್ 7 – ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ದೆಹಲಿ
ಮಾರ್ಚ್ 8 – ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್: ದೆಹಲಿ
ಮಾರ್ಚ್ 9-ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್: ದೆಹಲಿ
ಮಾರ್ಚ್ 10-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೆಹಲಿ
ಮಾರ್ಚ್ 11- ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್: ದೆಹಲಿ
ಮಾರ್ಚ್ 12- ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು; ದೆಹಲಿ
ಮಾರ್ಚ್ 13-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್: ದೆಹಲಿ
ಮಾರ್ಚ್ 15 -ಎಲಿಮಿನೇಟರ್: ದೆಹಲಿ
ಮಾರ್ಚ್ 17 -ಫೈನಲ್: ದೆಹಲಿ