Site icon Vistara News

WPL 2024: ಅನ್​ಸೋಲ್ಡ್​ ಆದ ಕನ್ನಡತಿ ವೇದಾ ಕೃಷ್ಣಮೂರ್ತಿ; 2 ಕೋಟಿ ಪಡೆದ ಅನ್ನಾಬೆಲ್

veda krishnamurthy

ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ 2024ರ(WPL 2024) ಮಿನಿ ಹರಾಜಿನಲ್ಲಿ ಸೇಲ್​ ಆಗುವ ಮೂಲಕ ಮತ್ತೆ ಕ್ರಿಕೆಟ್​ಗೆ ಮರಳುವ ನಿರೀಕ್ಷೆ ಮೂಡಿಸಿದ್ದ ಕನ್ನಡತಿ ವೇದಾ ಕೃಷ್ಣಮೂರ್ತಿಗೆ ಹಿನ್ನಡೆಯಾಗಿದೆ. 30 ಲಕ್ಷ ಮೂಲ ಬೆಲೆಯೊಂದಿಗೆ ಬಿಡ್ಡಿಂಗ್​ನಲ್ಲಿದ್ದ ಅವರನ್ನು ಯಾವುದೇ ಫ್ರಾಂಚೈಸಿಗಳು ಖರೀದಿಸಲಿಲ್ಲ. ಇದರಿಂದ ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಕಳದ ಬಾರಿ ಕೂಡ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

2011 ರಲ್ಲಿ ಭಾರತ ವನಿತಾ ಕ್ರಿಕೆಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದ ವೇದಾ ಕೃಷ್ಣಮೂರ್ತಿ ಅವರು ಟೀಮ್ ಇಂಡಿಯಾ ಪರ 48 ಏಕ ದಿನ ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದೇ ವರ್ಷ ಅವರು ಕರ್ನಾಟಕದ ಮಾಜಿ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ಸಪ್ತಪದಿ ತುಳಿದಿದ್ದರು.

165 ಆಟಗಾರರು ಹರಾಜುಪಟ್ಟಿಯಲ್ಲಿದ್ದು, 30 ಸ್ಥಾನಗಳಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಮೊದಲು ಹರಾಜಿನಲ್ಲಿ ಆಸ್ಟ್ರೇಲಿಯಾದ ಯುವ ಆಟಗಾರ್ತಿ ಫೋಬಿ ಲಿಚ್ ಫೀಲ್ಡ್ ಅವರ ಹೆಸರು ಬಂತು. ಇವರ ಖರೀದಿಗಾಗಿ ಯುಪಿ ವಾರಿಯರ್ಸ್​ ಮತ್ತು ಗುಜರಾತ್ ಜೈಂಟ್ಸ್​ ನಡುವೆ ತೀವ್ರವಾದ ಪೈಪೋಟಿ ನಡೆಯಿತು. 30 ಲಕ್ಷ ಮೂಲ ಬೆಲೆ ಹೊಂದಿದ್ದ ಅವರನ್ನು ಅಂತಿಮವಾಗಿ ಗುಜರಾತ್ ಜೈಂಟ್ಸ್ 1 ಕೋಟಿ. ರೂ ಬಿಡ್​ ಮಾಡಿ ತನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿತು.

ಇದನ್ನೂ ಓದಿ WPL Auction: ನಾಳೆ ಡಬ್ಲ್ಯುಪಿಎಲ್‌ ಆಟಗಾರ್ತಿಯರ ಹರಾಜು; ಎಷ್ಟು ಗಂಟೆಗೆ ಬಿಡ್ಡಿಂಗ್?

2 ಕೋಟಿ ಪಡೆದ ಅನ್ನಾಬೆಲ್

ಆಸ್ಟ್ರೇಲಿಯಾ ತಂಡದ ಸ್ಟಾರ್​ ಆಲ್​ರೌಂಡರ್​ ಅನ್ನಾಬೆಲ್ ಸತರ್ಲ್ಯಾಂಡ್ ಅವರು ಸದ್ಯ ಅತ್ಯಧಿಕ ಮೊತ್ತಕ್ಕೆ ಸೇಲ್​ ಆದ ಆಟಗಾರ್ತಿಯಾಗಿದ್ದಾರೆ. 5 ಫ್ರಾಂಚೈಸಿಗಳ ತೀವ್ರ ಪೈಪೋಟಿಯಲ್ಲಿ ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಬರೋಬ್ಬರಿ 2 ಕೋಟಿ ರೂ. ನೀಡಿ ಖರೀದಿಸಿತು. ದಕ್ಷಿಣ ಆಫ್ರಿಕಾ ತಂಡ ಹಿರಿಯ ಮತ್ತು ಅನುಭವಿ ಬೌಲರ್​ ಶಬ್ನಿಮ್ ಇಸ್ಮಾಯಿಲ್ ಅವರು 1.20 ಕೋಟಿ ರೂ.ಗೆ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡದ ಪಾಲಾದರು.

ಆರ್​ಸಿಬಿ ಸೇರಿದ ಆಟಗಾರ್ತಿಯರು

ಸದ್ಯ ಆರ್​ಸಿಬಿ ತಂಡ ಏಕ್ತಾ ಬಿಸ್ಟ್​ ಇಂಗ್ಲೆಂಡ್​ ತಂಡದ ಬೌಲರ್​ ಕೇಟ್​ ಕ್ರಾಸ್​ ಅವರನ್ನು ಖರೀದಿಸಿದೆ. ಕಳೆದ ಬಾರಿ ಆರ್​ಸಿಬಿ ಪರ ಆಡಿದ ನ್ಯೂಜಿಲ್ಯಾಂಡ್​ ತಂಡದ ಅನುಭವಿ ಆಟಗಾರ್ತಿ ಸೋಫಿ ಡಿವೈನ್​ ಅವರನ್ನು ಮತ್ತೆ ಮೂಲ ಬೆಲೆ 50 ಲಕ್ಷಕ್ಕೆ ರೀಟೆನ್​ ಮಾಡಿದೆ.

ಅಚ್ಚರಿ ಎಂದರೆ ಟೀಮ್​ ಇಂಡಿಯಾದ ಬರವಸೆಯ ಯುವ ಆಟಗಾರ್ತಿ ಪ್ರಿಯಾ ಪೂನಿಯಾ ಅವರು ಈ ಬಾರಿಯೂ ಅನ್​ಸೋಲ್ಡ್​ ಆದರು. ಟೀಮ್​ ಇಂಡಿಯಾ ಪರ 9 ಏಕದಿನ ಪಂದ್ಯಗಳನ್ನು ಆಡಿ 242 ರನ್​ ಬಾರಿಸಿದ್ದಾರೆ. ಆದರೂ ಅವರು ಅನ್​ಸೋಲ್ಡ್​ ಆಗಿರುವುದು ವಿಚಿತ್ರ ಕಂಡಿದೆ.

Exit mobile version