Site icon Vistara News

WPL 2024: ಇಂದು ಮುಂಬೈ-ಆರ್​ಸಿಬಿ ಎಲಿಮಿನೇಟರ್ ಫೈಟ್​; ಗೆದ್ದವರಿಗೆ ಫೈನಲ್​ ಟಿಕೆಟ್​

smriti mandhana and harmanpreet kaur wpl

ನವದೆಹಲಿ: ಇಂದು ನಡೆಯುವ ಮಹಿಳಾ ಪ್ರೀಮಿಯರ್​ ಲೀಗ್​ನ(WPL 2024) ಎಲಿಮಿನೇಟರ್(Eliminator)​ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು(Royal Challengers Bangalore Women) ಮತ್ತು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians Women) ತಂಡಗಳು ಮುಖಾಮುಖಿಯಾಗಲಿದೆ. ಯಾರೇ ಗೆದ್ದರು ಫೈನಲ್​ ಟಿಕೆಟ್​ ಗಿಟ್ಟಿಸಿಕೊಳ್ಳಲಿದ್ದಾರೆ. ಈ ತಂಡ ಯಾವುದು ಎನ್ನುವುದು ಪಂದ್ಯದ ಕುತೂಹಲ.

ಕಳೆದ ವರ್ಷಕ್ಕೆ ಹೋಲಿಸಿದರೆ ಆರ್​ಸಿಬಿ ಈ ಬಾರಿ ಶ್ರೇಷ್ಠ ಪ್ರದರ್ಶನ ತೋರಿದೆ. ಹೀಗಾಗಿ ಈ ಬಾರಿ ತಂಡದ ಮೇಲೆ ನಂಬಿಕೆಯೊಂದನ್ನು ಇಡಬಹುದಾಗಿದೆ. ಆಲ್​ರೌಂಡರ್​ ಎಲ್ಲಿಸ್​ ಪೆರ್ರಿ, ರಿಚಾ ಘೋಷ್​ ಮತ್ತು ನಾಯಕಿ ಮಂಧಾನ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್​ನಲ್ಲಿ ರೇಣುಕಾ ಠಾಕೂರ್​ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ. ಪ್ರತಿ ಪಂದ್ಯದಲ್ಲಿಯೂ ಅವರು ದುಬಾರಿಯಾಗಿ ಕಂಡು ಬಂದಿದ್ದಾರೆ. ಆರ್​ಸಿಬಿ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಮುಂಬೈಗೆ 7 ವಿಕೆಟ್‌ಗಳ ಸೋಲುಣಿಸಿತ್ತು. ಇದೇ ಆತ್ಮವಿಶ್ವಾದಲ್ಲಿ ಇಂದು ಆಡಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.

ಮುಂಬೈ ಬಲಿಷ್ಠ


ಆರ್​ಸಿಬಿ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ​ ಮುಂಬೈ ಸೋಲು ಕಂಡಿತು ಎನ್ನುವ ಮಾತ್ರಕ್ಕೆ ದುರ್ಬಲ ಎಂದು ಭಾವಿಸಿದರೆ ಇದು ಸುಳ್ಳು. ಮುಂಬೈ ತಂಡ ಎಲ್ಲ ವಿಭಾಗದಲ್ಲಿ ಬಲಿಷ್ಠವಾಗಿದೆ. ನಾಯಕಿ ಹರ್ಮನ್​ಪ್ರೀತ್​ ಕೌರ್​ ಯಾವುದೇ ಹಂತದಲ್ಲಿಯೂ ಸಿಡಿದು ನಿಂತು ತಂಡಕ್ಕೆ ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ನ್ಯಾಟ್ ಸ್ಕಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್ ಇವರೆಲ್ಲ ತಂಡದ ಪ್ರಮುಖ ಆಟಗಾರ್ತಿಯರಾಗಿದ್ದಾರೆ. ಕನಿಷ್ಠ ಇಬ್ಬರು ಸಿಡಿದು ನಿಂತರೂ ಮುಂಬೈಗೆ ದೊಡ್ಡ ಮೊತ್ತಕ್ಕೇನು ಕೊರತೆಯಾಗದು.

ಇದನ್ನೂ ಓದಿ WPL 2024: ಫೈನಲ್​ಗೆ ಲಗ್ಗೆಯಿಟ್ಟ ಡೆಲ್ಲಿ​; ನಾಳೆ ಮುಂಬೈ-ಆರ್​ಸಿಬಿ ಎಲಿಮಿನೇಟರ್​ ಕಾಳಗ

ಸಂಭಾವ್ಯ ತಂಡ


ಮುಂಬೈ ಇಂಡಿಯನ್ಸ್​:
ಹೀಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ,ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಎಸ್ ಸಜನಾ, ಅಮನ್ಜೋತ್ ಕೌರ್, ಹುಮಾರಿಯಾ ಕಾಜಿ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್.

ಆರ್​ಸಿಬಿ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಮೊಲಿನೆಕ್ಸ್, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ರಿಚಾ ಘೋಷ್, ಜಾರ್ಜಿಯಾ ವೇರ್ಹ್ಯಾಮ್, ಎಸ್ ಮೇಘನಾ, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಠಾಕೂರ್.

Exit mobile version