Site icon Vistara News

WPL 2024: ಆರ್​ಸಿಬಿ-ಮುಂಬೈ ಪಂದ್ಯ ವೀಕ್ಷಿಸಿದ ನ್ಯೂಜಿಲ್ಯಾಂಡ್​ ಉಪ ಪ್ರಧಾನಿ

New Zealand Deputy PM Winston Peters

ನವದೆಹಲಿ: ಭಾರತ ಪ್ರವಾಸದಲ್ಲಿರುವ ನ್ಯೂಜಿಲ್ಯಾಂಡ್​ನ ಉಪ ಪ್ರಧಾನಿ ವಿನ್ಸ್ಟನ್ ಪೀಟರ್ಸ್(New Zealand Deputy PM Winston Peters) ಅವರು ಪ್ರಸಕ್ತ ಸಾಗಿತ್ತಿರುವ ಮಹಿಳಾ ಪ್ರೀಮಿಯರ್​ ಲೀಗ್​(ಡಬ್ಲ್ಯುಪಿಎಲ್​)ನ(WPL 2024) ಮುಂಬೈ ಇಂಡಿಯನ್ಸ್(Mumbai Indians Women)​ ಮತ್ತು ಆರ್​ಸಿಬಿ(Royal Challengers Bangalore) ವಿರುದ್ಧದ ಪಂದ್ಯವನ್ನು ವೀಕ್ಷಿಸಿದ್ದಾರೆ. ಮಂಗಳವಾರ ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು.

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 7 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಪ್ಲೇ ಆಫ್​ ಪ್ರವೇಶ ಪಡೆದಿತ್ತು. ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಖೇಶ್ ಅಂಬಾನಿ ಜತೆ ನ್ಯೂಜಿಲ್ಯಾಂಡ್​ ಉಪ ಪ್ರಧಾನಿ ವಿನ್ಸ್ಟನ್ ಪೀಟರ್ಸ್ ಈ ಪಂದ್ಯವನ್ನು ವೀಕ್ಷಿಸುವ ಮೂಲಕ ಗಮನ ಸೆಳೆದರು. ಪಂದ್ಯದ ಬಳಿಕ ನ್ಯೂಜಿಲ್ಯಾಂಡ್​ನ ತಂಡದ ಆಟಗಾರ್ತಿಯರಾದ ಅಮೇಲಿಯ ಕೆರ್​ ಮತ್ತು ಸೋಫಿ ಡಿವೈನ್​ ಅವರು ವಿನ್ಸ್ಟನ್ ಪೀಟರ್ಸ್ ಜತೆ ಕುಶಲೋಪರಿ ನಡೆಸಿ ಫೋಟೊ ತೆಗಿಸಿಕೊಂಡರು.

ಇದೇ ವೇಳೆ ಮಾತನಾಡಿದ ಪೀಟರ್ಸ್, ಭಾರತವು ನಮಗೆ ಬಹಳ ಮುಖ್ಯವಾದ ರಾಷ್ಟ್ರವಾಗಿದೆ. ಭಾರತಕ್ಕೆ ಭೇಟಿ ನೀಡಿರುವುದು ಬಹಳ ಸಂತಸ ತಂದಿದೆ. ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರೊಂದಿಗೆ ಸಭೆ ನಡೆಸಿದ್ದು, ಹಲವು ವಿಷಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಇದೇ ಸಂದರ್ಭದಲ್ಲಿ ಮಹಿಳಾ ಕ್ರಿಕೆಟ್ ಎಷ್ಟು ಜನಪ್ರಿಯವಾಗಿದೆ ಎಂಬುದನ್ನು ನೋಡಲು ತುಂಬಾ ರೋಮಾಂಚನಕಾರಿಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ WPL 2024: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ದಾಖಲೆ ಬರೆದ ಆರ್​ಸಿಬಿಯ ಎಲ್ಲಿಸ್ ಪೆರ್ರಿ

ಪಂದ್ಯ ಗೆದ್ದ ಆರ್​ಸಿಬಿ


ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡ 19 ಓವರ್​ಗಳಲ್ಲಿ 113 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಆಡಿದ ಆರ್​ಸಿಬಿ 15 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 1145 ರನ್ ಬಾರಿಸಿ ಗೆಲುವು ಸಾಧಿಸಿತು. ಘಾತಕ ಬೌಲಿಂಗ್​ ದಾಳಿ ನಡೆಸಿ 6 ವಿಕೆಟ್​ ಕಿತ್ತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore ) ತಂಡದ ಆಟಗಾರ್ತಿ ಎಲ್ಲಿಸ್ ಪೆರ್ರಿ(Ellyse Perry) ಅವರು ದಾಖಲೆಯೊಂದನ್ನು ಬರೆದಿದ್ದಾರೆ. ಮಹಿಳಾ ಪ್ರೀಮಿಯರ್​ ಲೀಗ್​ನ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ವಿಕೆಟ್ ಕಿತ್ತ ಆಟಗಾರ್ತಿ ಎನಿಸಿಕೊಂಡರು.

ಇದಕ್ಕೂ ಮುನ್ನ ಡಬ್ಲ್ಯುಪಿಎಲ್​ ಟೂರ್ನಿಯ ಪಂದ್ಯವೊಂದರಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ದಾಖಲೆ ಡೆಲ್ಲಿ ತಂಡದ ಆಟಗಾರ್ತಿ ಮರಿಝನ್ನೆ ಕಾಪ್ ಹೆಸರಿನಲ್ಲಿತ್ತು. ಅವರು ಕಳೆದ ವರ್ಷ ನಡೆದ ಚೊಚ್ಚಲ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 15 ರನ್ ನೀಡಿ 5 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಎಲ್ಲಿಸ್ ಪೆರ್ರಿ ಅಳಿಸಿ ಹಾಕಿದ್ದಾರೆ. ನಾಲ್ಕು ಓವರ್​ ಎಸೆದು 15 ರನ್​ಗೆ 6 ವಿಕೆಟ್​ ಕಿತ್ತು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

Exit mobile version