Site icon Vistara News

WPL 2024 Points Table: ಡಬ್ಲ್ಯುಪಿಎಲ್​ನಲ್ಲಿ ಇನ್ನು 9 ಪಂದ್ಯಗಳು ಬಾಕಿ; ಅಂಕಪಟ್ಟಿ ಹೇಗಿದೆ?

Royal Challengers Bangalore Women

ಬೆಂಗಳೂರು: ಮಹಿಳಾ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ 11 ಲೀಗ್​(WPL 2024) ಪಂದ್ಯಗಳು ಮುಕ್ತಾಯಕಂಡಿದ್ದು ಇನ್ನು ಕೇವಲ 9 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. 5 ಪಂದ್ಯಗಳ ಪೈಕಿ ನಾಲ್ಕು ತಂಡಗಳು ಅಂಕಪಟ್ಟಿಯಲ್ಲಿ(WPL 2024 Points Table) ಹಾವು ಏಣಿ ಆಟದಂತೆ ಪೈಪೋಟಿ ನಡೆಸುತ್ತಿದೆ. ಕನ್ನಡಿಗರ ನೆಚ್ಚಿನ ತಂಡದವಾದ ಆರ್​ಸಿಬಿ(Royal Challengers Bangalore) ನಿನ್ನೆ ನಡೆದ ತವರಿನ ಅಂತಿಮ ಪಂದ್ಯದಲ್ಲಿ ಯುಪಿ ವಾರಿಯರ್ಸ್​(UP Warriorz) ವಿರುದ್ಧ ಗೆದ್ದು ಒಂದು ಸ್ಥಾನದ ಏರಿಕೆ ಕಂಡಿದೆ.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ಆಡಿದ 4 ಪಂದ್ಯಗಳಲ್ಲಿ ಒಂದು ಸೋಲು ಮೂರು ಗೆಲುವು ದಾಖಲಿಸಿ 6 ಅಂಕದೊಂದಿಗೆ ಅಗ್ರಸ್ಥಾನಿಯಾಗಿದೆ. ಜತೆಗೆ ತಂಡದ ರನ್​ ರೇಟ್​ ಕೂಡ ಉತ್ತಮವಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​​(Mumbai Indians Women) ಕೂಡ 6 ಅಂಕ ಸಂಪಾದಿಸಿ ದ್ವಿತೀಯ ಸ್ಥಾನಿಯಾಗಿದೆ. ಆರ್​ಸಿಬಿ ತಂಡ ಯುಪಿ ವಿರುದ್ಧ ಗೆದ್ದ ಕಾರಣ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿದೆ. ಯುಪಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಗೆಲುವು ದಾಖಲಿಸಿದ ಗುಜರಾತ್​ ಕೊನೆಯ ಸ್ಥಾನಿಯಾಗಿದೆ. ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆದ್ದರೆ ಎಲಿಮಿನೇಟರ್​ಗೇರುವ ಅವಕಾಶವೂ ಈ ತಂಡಕ್ಕಿದೆ. ಸೋತರೆ ಹೊರಬಿಳುವುದು ಖಚಿತ.

ಇದನ್ನೂ ಓದಿ WPL 2024: ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದ ಆರ್​ಸಿಬಿ; ಯುಪಿ ವಿರುದ್ಧ 23 ರನ್​ ಜಯ

ಮುಂಬೈ ಸೋತರೆ ಆರ್​ಸಿಬಿಗೆ ಲಾಭ


ಮುಂಬೈ ಮತ್ತು ಡೆಲ್ಲಿ ತಂಡಗಳು ಇಂದು ನಡೆಯುವ 12ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಮುಂಬೈ ತಂಡ ಸೋತರೆ ಆರ್​ಸಿಬಿಗೆ ಲಾಭವಾಗಲಿದೆ. ಸೋಲಿನಿಂದಾಗಿ ಸಹಜವಾಗಿಯೇ ಮುಂಬೈ ತಂಡದ ರನ್​ ರೇಟ್​ ಕುಸಿತ ಕಾಣುತ್ತದೆ. ಆಗ ಮೂರನೇ ಸ್ಥಾನಿಯಾದ ಆರ್​ಸಿಬಿ ದ್ವಿತೀಯ ಸ್ಥಾನಕ್ಕೇರಲಿದೆ. ಡೆಲ್ಲಿ ಸೋತರೆ ಆರ್​ಸಿಬಿಗೆ ಲಾಭವಾಗದು ಏಕೆಂದರೆ ಅದರ ರನ್ ರೇಟ್​ +1 ಇರುವುದರಿಂದ ಭಾರಿ ಬದಲಾವಣೆ ಸಂಭವಿಸುವುದು ಕಷ್ಟ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಡೆಲ್ಲಿ ಕ್ಯಾಪಿಟಲ್ಸ್​​4316 (+1.251)
ಮುಂಬೈ ಇಂಡಿಯನ್ಸ್4316 (+0.402)
ಆರ್​ಸಿಬಿ​​5326 (+0.242)
ಯುಪಿ ವಾರಿಯರ್ಸ್​5234 (-0.073)
ಗುಜರಾತ್​ ಜೈಂಟ್ಸ್​4040 (-1.804)

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ  ಸ್ಮೃತಿ ಮಂಧಾನ(80) ಮತ್ತು ಎಲ್ಲಿಸ್​ ಪೆರ್ರಿ(58) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ತಂಡ(Royal Challengers Bangalore) ಯುಪಿ ವಾರಿಯರ್ಸ್(UP Warriorz) ಎದುರು 23 ರನ್​ಗಳ ಗೆಲುವು ಸಾಧಿಸಿತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸಂಪೂರ್ಣ ಜೋಶ್​ನಿಂದ ಬ್ಯಾಟಿಂಗ್​ ನಡೆಸುವ ಮೂಲಕ ಕೇವಲ 3 ವಿಕೆಟ್​ ನಷ್ಟಕ್ಕೆ 198 ರನ್​ ಬಾರಿಸಿತು. ಬೃಹತ್​ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ಒಂದು ಹಂತದವರೆಗೆ ದಿಟ್ಟ ಹೋರಾಟ ನಡೆಸಿ ಆ ಬಳಿಕ ಕುಸಿತ ಕಂಡು ನಿಗದಿತ 20 ಓವರ್​ಗೆ 8 ವಿಕೆಟ್​ ಕಳೆದುಕೊಂಡು 175 ರನ್​ ಗಳಿಸಲಷ್ಟೇ ಶಕ್ತವಾಯಿತು.

Exit mobile version