Site icon Vistara News

WPL 2024: ಸಾಂಪ್ರದಾಯಿಕ ಉಡುಗೆ ತೊಟ್ಟು ಪಬ್​ನಲ್ಲಿ ಕುಣಿದು ಕುಪ್ಪಳಿದ ಆರ್​ಸಿಬಿ ಆಟಗಾರ್ತಿಯರು

Royal Challengers Bangalore Women

ಬೆಂಗಳೂರು: 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್​ನಲ್ಲಿ(ಡಬ್ಲ್ಯುಪಿಎಲ್​)(WPL 2024) ಉತ್ತಮ ಪ್ರದರ್ಶನ ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರು(Royal Challengers Bangalore Women) ರೆಟ್ರೋ ಲುಕ್​ನಲ್ಲಿ ಪಬ್​ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ಆಟಗಾರ್ತಿಯರು ಚಿಲ್ ಮಾಡಿದ ಫೋಟೊ ಮತ್ತು ವಿಡಿಯೊವನ್ನು ಆರ್​ಸಿಬಿ(RCB) ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಕನ್ನಡತಿ ಶ್ರೇಯಾಂಕ ಪಾಟೀಲ್​(Shreyanka Patil) ಮತ್ತು ಆಸ್ಟ್ರೇಲಿಯಾದ ಎಲ್ಲಿಸ್​ ಪೆರ್ರಿ(Ellyse Perry) ಸಾಂಪ್ರದಾಯಿಕ ಉಡುಗೆ ತೊಟ್ಟು ಕಣ್ಮನ ಸೆಳೆದಿದ್ದಾರೆ. ಅದರಲ್ಲೂ ಎಲ್ಲಿಸ್​ ಪೆರ್ರಿ ಸಾರಿ ಉಟ್ಟು ಅಪ್ಪಟ ಭಾರತೀಯ ನಾರಿಯಂತೆ ಕಂಡಿದ್ದಾರೆ. ಅವರ ಲುಕ್​ ಕಂಡು ಆರ್​ಸಿಬಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸ್ಮೃತಿ ಮಂದಾನ(Smriti Mandhana) ನೇತೃತ್ವದ ಆರ್​ಸಿಬಿ ತಂಡ ರೆಟ್ರೋ ನೈಟ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ ಆಟಗಾರ್ತಿಯರು ಎಂಜಾಯ್​ ಮಾಡಿದ್ದಾರೆ. ರಿಚಾ ಘೋಷ್(Richa Ghosh), ಸೋಫಿ ಡಿವೈನ್(Sophie Devine), ಜಾರ್ಜಿಯಾ ವೇರ್ಹ್ಯಾಮ್ ಕ್ಲಾಸಿಕ್​ ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ನಾಯಕಿ ಮಂದಾನ ಪಿಚ್ಚರ್ ಅಭೀ ಬಾಕಿ ಹೈ ಮೇರಿ ದೋಸ್ತ್​ ಎಂದು ಕ್ಯೂಟ್​ ಆಗಿ ಹೇಳಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ಇನ್ನು 5 ಲೀಗ್​ ಪಂದ್ಯಗಳು ಮಾತ್ರ ಬಾಕಿ ಇದ್ದು, ಸದ್ಯ ಆರ್​ಸಿಬಿ ಆಡಿದ 6 ಪಂದ್ಯಗಳ ಪೈಲಿ ತಲಾ 3 ಗೆಲುವು ಮತ್ತು ಸೋಲು ಕಂಡು 6 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ನಾಳೆ ನಡೆಯುವ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸ್ಮೃತಿ ಮಂದಾನ ಈ ಬಾರಿಯ ಲೀಗ್​ನಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ನೆರವಾಗುತ್ತಿದ್ದಾರೆ.

ಇಂದು ನಡೆಯುವ ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್​ ಜೈಂಟ್ಸ್​ ಪಂದ್ಯದಲ್ಲಿ ಮುಂಬೈ ಗೆದ್ದರೆ 10 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಗುಜರಾತ್​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಈ ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಳ್ಳಲಿದೆ. ಸೋತರೆ ಬಹುತೇಕ ಲೀಗ್​ನಿಂದ ಹೊರಬೀಳಲಿದೆ. ಹೀಗಾಗಿ ಈ ಪಂದ್ಯ ರೋಚಕತೆಯಿಂದ ಸಾಗುವ ನಿರೀಕ್ಷೆಯೊಂದನ್ನು ಮಾಡಬಹುದು.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಡೆಲ್ಲಿ ಕ್ಯಾಪಿಟಲ್ಸ್​​6428 (+1.059)
ಮುಂಬೈ ಇಂಡಿಯನ್ಸ್​6428 (+0.375)
ಆರ್​ಸಿಬಿ​​6336 (+0.038)
ಯುಪಿ ವಾರಿಯರ್ಸ್​7346 (-0.365)
ಗುಜರಾತ್​ ಜೈಂಟ್ಸ್​5142 (-1.278)
Exit mobile version