ನವದೆಹಲಿ: ನಿನ್ನೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಘಾತಕ ಬೌಲಿಂಗ್ ದಾಳಿ ನಡೆಸಿ 6 ವಿಕೆಟ್ ಕಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore ) ತಂಡದ ಆಟಗಾರ್ತಿ ಎಲ್ಲಿಸ್ ಪೆರ್ರಿ(Ellyse Perry) ಅವರು ದಾಖಲೆಯೊಂದನ್ನು ಬರೆದಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ನ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ವಿಕೆಟ್ ಕಿತ್ತ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಡಬ್ಲ್ಯುಪಿಎಲ್ ಟೂರ್ನಿಯ ಪಂದ್ಯವೊಂದರಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಡೆಲ್ಲಿ ತಂಡದ ಆಟಗಾರ್ತಿ ಮರಿಝನ್ನೆ ಕಾಪ್ ಹೆಸರಿನಲ್ಲಿತ್ತು. ಅವರು ಕಳೆದ ವರ್ಷ ನಡೆದ ಚೊಚ್ಚಲ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 15 ರನ್ ನೀಡಿ 5 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಎಲ್ಲಿಸ್ ಪೆರ್ರಿ ಅಳಿಸಿ ಹಾಕಿದ್ದಾರೆ. ನಾಲ್ಕು ಓವರ್ ಎಸೆದು 15 ರನ್ಗೆ 6 ವಿಕೆಟ್ ಕಿತ್ತು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
Fire with the ball 👍
— Women's Premier League (WPL) (@wplt20) March 12, 2024
Calmness with the bat 👍
For her exceptional all-round performance, @ellyseperry receives the Player of the Match Award 🏆#TATAWPL | #MIvRCB pic.twitter.com/UxyHpF8rIL
ಪ್ಲೇ ಆಫ್ ಪ್ರವೇಶಿಸಿದ ಆರ್ಸಿಬಿ
ಮುಂಬಯಿ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ ದಾಖಲಿಸಿ ಸ್ಮೃತಿ ಮಂಧಾನಾ ನೇತೃತ್ವದ ಆರ್ಸಿಬಿ ತಂಡ ಪ್ಲೇ ಆಫ್ ಪ್ರವೇಶ ಪ್ರವೇಶ ಪಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 19 ಓವರ್ಗಳಲ್ಲಿ 113 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಆಡಿದ ಆರ್ಸಿಬಿ 15 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 1145 ರನ್ ಬಾರಿಸಿ ಗೆಲುವು ಸಾಧಿಸಿತು. ಸಾಧಾರಣ ಮೊತ್ತವನ್ನು ಎದುರಿಸಿದ ಆರ್ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. 22 ರನ್ಗೆ ಮೊದಲ ವಿಕೆಟ್ ಕಳೆಕೊಂಡಿತು. ಸೋಫಿ ಮೊಲಿನಕ್ಸ್ 9 ರನ್ ಬಾರಿಸಿ ಸ್ಟಂಪ್ ಔಟ್ ಆದರು. ಸ್ವಲ್ಪ ಹೊತ್ತಿನಲ್ಲೇ ನಾಯಕ ಸ್ಮೃತಿ 11 ರನ್ಗೆ ಔಟಾದರು. 25 ರನ್ಗೆ 2 ವಿಕೆಟ್ ನಷ್ಟ ಮಾಡಿಕೊಂಡ ಆರ್ಸಿಬಿಗೆ ಆತಂಕ ಶುರುವಾಯಿತು. ಅದ ಜತೆಗೆ ಸೋಫಿ ಡಿವೈನ್ ಕೂಡ 4 ರನ್ ಬಾರಿಸಿ ನಿರ್ಗಮಿಸಿದರು.
ಬೌಲಿಂಗ್ನಲ್ಲಿ ಅಬ್ಬರಿಸಿದ್ದ ಎಲಿಸ್ ಪೆರಿ ಬ್ಯಾಟಿಂಗ್ನಲ್ಲೂ ಆರ್ಸಿಬಿಗೆ ನೆರವಾದರು. 38 ಎಸೆತಕ್ಕೆ 5 ಫೊರ್ ಹಾಗೂ 1 ಸಿಕ್ಸರ್ ಸಮೇತ 40 ರನ್ ಬಾರಿಸಿದರು. ರಿಚಾ ಕೂಡ ಮುಂಬೈ ಬೌಲರ್ಗಳನ್ನು ಚೆಂಡಾಡಿದರು. ಹಿಂದಿನ ಪಂದ್ಯದಂತೆಯೇ 4 ಫೋರ್ ಹಾಗೂ 2 ಸಿಕ್ಸರ್ ಸಹಿತ 28 ಎಸೆತಗಳಲ್ಲಿ 36 ರನ್ ಬಾರಿಸಿತು. ಈ ಜೋಡಿ ನಾಲ್ಕನೇ ವಿಕೆಟ್ಗೆ 71 ರನ್ ಜತೆಯಾಟವಾಡಿ ಆರ್ಸಿಬಿ ಗೆಲುವು ಸುಲಭವಾಗಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ಉತ್ತಮ ಆರಂಭ ಪಡೆಯಿತು ಹೀಲಿ ಮ್ಯಾಥ್ಯೂಸ್ ಮತ್ತು ಎಸ್ ಸಜನಾ 43 ರನ್‌ಗಳ ಜೊತೆಯಾಟವಾಡಿದರು. ಮ್ಯಾಥ್ಯೂಸ್ 26 ರನ್ ಗಳಿಸಿದರೆ, ಸಜನಾ 30 ರನ್ ಪೇರಿಸಿದರು. ಸಜನಾ ವಿಕೆಟ್ ಕಬಳಿಸುವುದರೊಂದಿಗೆ ಎಲ್ಲಿಸ್ ಪೆರ್ರಿ ಮಾರಕ ದಾಳಿ ಶುರುವಾಯ್ತು. ಮೇಲಿಂದ ಮೇಲೆ 6 ವಿಕೆಟ್ ಕಬಳಿಸುವ ಮೂಲಕ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದರು.