Site icon Vistara News

WPL 2024: ಲಾರೆನ್ ಬೆಲ್ ಬದಲಿಗೆ ಯುಪಿ ವಾರಿಯರ್ಸ್ ಸೇರಿದ ಚಾಮರಿ ಅಟಪಟ್ಟು

Chamari Athapaththu

ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024ರ(WPL 2024) ಮುಂಬರುವ ಆವೃತ್ತಿಯಿಂದ ಇಂಗ್ಲೆಂಡ್ ವೇಗಿ ಲಾರೆನ್ ಬೆಲ್(Lauren Bell) ಹಿಂದೆ ಸರಿದಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ಯುಪಿ ವಾರಿಯರ್ಸ್(UP Warriorz)​ ತಂಡ ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು(Chamari Athapaththu) ಅವರನ್ನು ಆಯ್ಕೆ ಮಾಡಿಕೊಂಡಿದೆ.

ಕಳೆದ ವರ್ಷ ನಡೆದಿದ್ದ ಆಟಗಾರ್ತಿಯರ ಹರಾಜಿನಲ್ಲಿ ಚಾಮರಿ ಅಟಪಟ್ಟು ಅನ್​ ಸೋಲ್ಡ್​ ಆಗಿದ್ದರು. ಇದೀಗ ಅವರು ಬದಲಿ ಆಟಗಾರ್ತಿಯಾಗಿ ಡಬ್ಲ್ಯುಪಿಎಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ಮೂಲ ಬೆಲೆ 30 ಲಕ್ಷಕ್ಕೆ ಯುಪಿ ವಾರಿಯರ್ಸ್ ತಂಡಕ್ಕೆ ಸೇರಿಸಿಕೊಂಡಿದೆ.

“ಟಾಟಾ ಮಹಿಳಾ ಪ್ರೀಮಿಯರ್ ಲೀಗ್ 2024 ರ ಮುಂಬರುವ ಋತುವಿನಿಂದ ಇಂಗ್ಲಿಷ್ ವೇಗದ ಬೌಲರ್ ಲಾರೆನ್ ಬೆಲ್ ಹಿಂದೆ ಸರಿದಿದ್ದಾರೆ. ಅವರ ಸ್ಥಾನಕ್ಕೆ ಶ್ರೀಲಂಕಾದ ಚಾಮರಿ ಅಟಪಟ್ಟು ಅವರನ್ನು ಬದಲಿಯಾಗಿ ತಂಡಕ್ಕೆ ಆಯ್ಕೆ ಮಾಡಲಾಗಿ” ಎಂದು ಯುಪಿ ವಾರಿಯರ್ಸ್​ ಫ್ರಾಂಚೈಸಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

“ಸ್ಫೋಟಕ ಬ್ಯಾಟಿಂಗ್​ ಖ್ಯಾತಿಯ ಮಹಿಳಾ ಆಟಗಾರ್ತಿಯರಲ್ಲಿ ಲಂಕಾ ನಾಯಕಿ ಅಟಪಟ್ಟು ಕೂಡ ಅತ್ಯಂತ ಅನುಭವಿಯಾಗಿದ್ದಾರೆ. ಅವರು 120ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಟಿ20ಯಲ್ಲಿ ಶತಕ ಗಳಿಸಿದ ಏಕೈಕ ಲಂಕಾದ ಮಹಿಳಾ ಆಟಗಾರ್ತಿ ಎಂಬ ಹಿರಿಮೆಯೂ ಅವರದ್ದಾಗಿದೆ. ಅವರ ಆಗಮನದಿಂದ ತಂಡ ಬಲಿಷ್ಠಗೊಂಡಿದೆ” ಎಂದು ಯುಪಿ ವಾರಿಯರ್ಸ್​ ಹೇಳಿದೆ.

ಇದನ್ನೂ ಓದಿ RCB WPL 2024: ಬಲಿಷ್ಠ ತಂಡ ಕಟ್ಟಿದ ಮಹಿಳಾ ಆರ್​ಸಿಬಿ; ಆಟಗಾರ್ತಿಯರ ಫುಲ್​ ಲೀಸ್ಟ್​ ಇಲ್ಲಿದೆ 

ಫ್ರೆಬ್ರವರಿಯಲ್ಲಿ ಆರಂಭ


ಎರಡನೇ ಆವೃತ್ತಿಯ ಡಬ್ಲ್ಯುಪಿಎಲ್ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಫೆ.23ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಮಾರ್ಚ್ 17ರಂದು ಹೊಸದಿಲ್ಲಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಕಳೆದ ವರ್ಷ ಸಂಪೂರ್ಣವಾಗಿ ಮುಂಬೈನಲ್ಲಿ ಟೂರ್ನಿ ನಡೆದಿತ್ತ. ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿಯೂ ನಡೆಯಲಿದೆ. ಮೊದಲ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್ ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.

ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು


ಈ ಬಾರಿಯ ಟೂರ್ನಿಗಾಗಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರೆಂದರೆ, ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್​ಲ್ಯಾಂಡ್ ಹಾಗೂ ಭಾರತದ ಅನ್​ಕ್ಯಾಪ್ಡ್​ ಆಟಗಾರ್ತಿ ಕಾಶ್ವಿ ಗೌತಮ್. ಉಭಯ ಆಟಗಾರ್ತಿಯರರು ತಲಾ 2 ಕೋಟಿ ಮೊತ್ತಕ್ಕೆ ಸೇಲ್​ ಆದರು. ಕರ್ನಾಟಕದ ವೃಂದಾ ದಿನೇಶ್​ 1.3 ಕೋಟಿ ರೂ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 1.2 ಕೋಟಿ ರೂ., ಆಸ್ಟ್ರೇಲಿಯಾದ ಯುವ ಆಟಗಾರ್ತಿ ಫೋಬಿ ಲಿಚ್ ಫೀಲ್ಡ್ 1 ಕೋಟಿ ರೂ.ಗೆ ಸೇಲ್​ ಆಗಿದ್ದರು.

ಯುಪಿ ವಾರಿಯರ್ಸ್​ ತಂಡ


ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಚಾಮರಿ ಅಟಪಟ್ಟು, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್‌ವಾಡ್, ಎಸ್. ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ, ಡ್ಯಾನಿಯಲ್​ ವ್ಯಾಟ್, ವೃಂದಾ ದಿನೇಶ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಗೌಹರ್ ಸುಲ್ತಾನಾ.

Exit mobile version