Site icon Vistara News

WPL 2024: ಈ ಬಾರಿಯ ಡಬ್ಲ್ಯುಪಿಎಲ್ ಟೂರ್ನಿಯ ತಂಡಗಳು, ತಾಣ, ಸ್ವರೂಪ ಹೇಗಿದೆ?

WPL harmanpreet kaur

ಬೆಂಗಳೂರು: 2ನೇ ಆವೃತ್ತಿಯ ಮಹಿಳಾ ಕ್ರಿಕೆಟಿಗರ ವರ್ಣರಂಜಿತ ಟಿ20 ಕ್ರಿಕೆಟ್​ ಲೀಗ್ ಡಬ್ಲ್ಯೂಪಿಎಲ್ (WPL 2024) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 23ರಿಂದ ಬೆಂಗಳೂರಿನಲ್ಲಿ ಟೂರ್ನಿ ಆರಂಭಗೊಳ್ಳಲಿದೆ. ಮಾರ್ಚ್​ 17ಕ್ಕೆ ಫೈನಲ್​ ಪಂದ್ಯ ನಡೆಯಲಿದೆ. ಕೂಟದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ರನ್ನರ್​ ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಲಿದೆ.

ತಂಡಗಳು: ಮುಂಬೈ ಇಂಡಿಯನ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್​, ಗುಜರಾತ್​ ಜೈಂಟ್ಸ್​.

ಟೂರ್ನಿಯ ಸ್ವರೂಪ


ಡಬ್ಲ್ಯುಪಿಎಲ್ 2024ರ ಆವೃತ್ತಿ ಕೂಡ ಕಳೆದ ವರ್ಷದಂತೆ ಅದೇ ಸ್ವರೂಪದಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಅಗ್ರ ಮೂರು ಸ್ಥಾನ ಪಡೆದ ತಂಡಗಳು ಪ್ಲೇ ಆಫ್​ಗಳಿಗೆ ಅರ್ಹತೆ ಪಡೆಯುತ್ತವೆ. ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್​ನಲ್ಲಿ ಆಡಿ ಫೈನಲ್​ ಪ್ರವೇಶಿಸಲಿದೆ.

2 ತಾಣದಲ್ಲಿ ಪಂದ್ಯಾವಳಿ


ಮೊದಲ ಆವೃತ್ತಿಯಲ್ಲಿ ಎಲ್ಲ ಪಂದ್ಯಗಳನ್ನು ಮುಂಬೈಯಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ 2 ತಾಣಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಈ ತಾಣಗಳೆಂದರೆ ಬೆಂಗಳೂರು ಮತ್ತು ನವದೆಹಲಿ. ಈಗಾಗಲೇ ಬೆಂಗಳೂರು ಚರಣದ 11 ಪಂದ್ಯಗಳ ಟಿಕೆಟ್​ ಮಾರಟ ಆರಂಭಗೊಂಡಿದೆ. ಬುಕ್​ಮೈಶೋ ವೆಬ್​ಸೈಟ್​ನಲ್ಲಿ ಟಿಕೆಟ್​ಗಳು ಲಭ್ಯವಿದ್ದು, 100 ರೂ. ಮುಖಬೆಲೆ ಹೊಂದಿವೆ.

ಡಬ್ಲ್ಯುಪಿಎಲ್ 2024ರ ಪೂರ್ಣ ತಂಡಗಳು


ಆರ್​ಸಿಬಿ: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವಾರೆಹಮ್, ಏಕ್ತಾ ಬಿಷ್ತ್, ಕೇಟ್ ಕ್ರಾಸ್, ಶುಭಾ ವಾರೇಹಮ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್.

ಇದನ್ನೂ ಓದಿ WPL 2024 : ಜರ್ಸಿ ಅನಾವರಣಗೊಳಿಸಿದ ಅದಾನಿ ನೇತೃತ್ವದ ಗುಜರಾತ್‌ ಜೈಂಟ್ಸ್‌ ತಂಡ

ಡೆಲ್ಲಿ ಕ್ಯಾಪಿಟಲ್ಸ್ : ಜೆಮಿಮಾ ರೋಡ್ರಿಗಸ್, ಲಾರಾ ಹ್ಯಾರಿಸ್, ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಸ್ನೇಹಾ ದೀಪ್ತಿ, ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಸ್ ಜೊನಾಸೆನ್, ಮರಿಜಾನ್ನೆ ಕಪ್, ಮಿನ್ನಿ ಮಣಿ, ಶಿಖಾ ಪಾಂಡೆ, ರಾಧಾ ಯಾದವ್, ತನಿಯಾ ಭಾಟಿಯಾ, ಟೈಟಾಸ್ ಸಾಧು, ಅನ್ನಾಪರ್ ಮೊನ್‌ಡಾಲ್ ಯಾದವ್, ಪೂನಮ್ ಸುಥರ್ ಯಾದವ್, ಅಶ್ವನಿ ಕುಮಾರಿ.

ಮುಂಬೈ ಇಂಡಿಯನ್ಸ್ : ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮನ್ಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹೇಲಿ ಮ್ಯಾಥ್ಯೂಸ್, ಹುಮೈರಾ ಕಾಜಿ, ಇಸಾಬೆಲ್ಲೆ ವಾಂಗ್, ಜಿಂಟಿಮಣಿ ಕಲಿತಾ, ನಟಾಲಿ ಸೀವರ್, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಯಾಸ್ತಿಕಾ ಭಾಟಿಯಾ, ಸೈಕಾ ಇಶಾಕ್, ಶಬ್ನಿಮ್ ಇಸ್ಮಾಯಿಲ್, ಎಸ್ ಸಜನಾ, ಅಮನದೀಪ್ ಕೌರ್, ಫಾತಿಮಾ ಜಾಫರ್, ಕೀರ್ತನಾ ಬಾಲಕೃಷ್ಣನ್.

ಗುಜರಾತ್ ಜೈಂಟ್ಸ್ : ಆ್ಯಶ್ಲೇ ಗಾರ್ಡನರ್, ಬೆತ್ ಮೂನಿ (ನಾಯಕಿ), ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಲಾರೆನ್ ಚೀಟಲ್, ಕ್ಯಾಥ್ರಿನ್ ಚೀಟ್ಲ್, ಕ್ಯಾಥ್ರಿನ್ ಬ್ರೈಸ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್, ವೇದಾ ಕೃಷ್ಣಮೂರ್ತಿ.

ಯುಪಿ ವಾರಿಯರ್ಸ್ : ಅಲಿಸಾ ಹೀಲಿ (ನಾಯಕಿ), ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್ ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಗ್ರಾತ್, ಡೇನಿಯಲ್ ವ್ಯಾಟ್, ವೃಂದಾ ದಿನೇಶ್, ಪೂನಮ್ ಖೆನ್ನಾರ್, ಸೈಮಾ ಠಾಕೋರ್, ಗೌನ್ಹೆರ್ ಸುಲ್ತಾನಾ.

Exit mobile version