Site icon Vistara News

WPL 2024: ಡಬ್ಲ್ಯುಪಿಎಲ್‌ ಟ್ರೋಫಿಯೊಂದಿಗೆ ಕಣ್ಮನ ಸೆಳೆದ ನಾಯಕಿಯರು

wpl 2024 trophy

ಬೆಂಗಳೂರು: ಎರಡನೇ ಆವೃತ್ತಿಯ(WPL 2024) ಮಹಿಳಾ ಪ್ರೀಮಿಯರ್‌ ಲೀಗ್‌ (Women’s Premier League) ಇದೇ ಶುಕ್ರವಾರ(ಫೆ. 23) ದಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(M. Chinnaswamy Stadium) ಆರಂಭವಾಗಲಿದೆ. ಅದ್ಧೂರಿ ಉದ್ಘಾಟನ ಸಮಾರಂಭದಲ್ಲಿ ಬಾಲಿವುಡ್​ ಖ್ಯಾತ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ(sidharth malhotra), ಶಾಹಿದ್ ಕಪೂರ್(shahid kapoor)​ ಮತ್ತು ಕಾರ್ತಿಕ್‌ ಆರ್ಯನ್‌(kartik aaryan) ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ಶುಕ್ರವಾರ ಸಂಜೆ 6.30ಕ್ಕೆ ಉದ್ಘಾಟನ ಸಮಾರಂಭ ಆರಂಭಗೊಳ್ಳಲಿದೆ. ಬುಧವಾರ 5 ತಂಡದ ತಂಡದ ನಾಯಕಿಯರು ಟ್ರೋಫಿಯೊಂದಿಗೆ ಫೋಟೊ ಶೂಟ್​ ಮಾಡಿಸಿಕೊಂಡಿದ್ದಾರೆ.

ಐವರು ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್), ಸ್ಮೃತಿ ಮಂಧಾನ (ಆರ್‌ಸಿಬಿ), ಅಲಿಸ್ಸಾ ಹೀಲಿ (ಯುಪಿ ವಾರಿಯರ್ಸ್), ಮೆಗ್ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್), ಮತ್ತು ಬೆತ್ ಮೂನಿ (ಗುಜರಾತ್ ಜೈಂಟ್ಸ್) ಟ್ರೋಫಿ ಅನಾವರಣದ ವೇಳೆ ಕಂಗೊಳಿಸಿದರು. ಇದೇ ವೇಳೆ ಆಸ್ಟ್ರೇಲಿಯಾದವರಾದ ಬೆತ್ ಮೂನಿ ಮೆಗ್ ಲ್ಯಾನಿಂಗ್ ಮತ್ತು ಅಲಿಸ್ಸಾ ಹೀಲಿ ಟ್ರೋಫಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಟ್ರೋಫಿಯೊಂದಿಗೆ ಕಂಗೊಳಿಸಿದ ನಾಯಕಿಯರ ವಿಡಿಯೊವನ್ನು ಡಬ್ಲ್ಯುಪಿಎಲ್‌ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದು 5 ನಾಯಕಿಯರು…ಒಂದು ಗುರಿ(5 Captains. 1 Goal) ಎಂದು ಬರೆದುಕೊಂಡಿದೆ. ಶುಕ್ರವಾರ ನಡೆಯುವ ಉದ್ಘಾಟನ ಪಂದ್ಯದಲ್ಲಿ ಕಳೆದ ಬಾರಿಯ ಫೈನಲೀಸ್ಟ್​ಗಳಾದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ರನ್ನರ್ಸ್​ ಅಪ್​ ಡೆಲ್ಲಿ ಕ್ಯಾಪಿಲ್ಸ್​ ಮುಖಾಮುಖಿಯಾಗಲಿವೆ. ಫೆ. 23ರಿಂದ ಮಾ. 4ರ ತನಕ ಬೆಂಗಳೂರಿನಲ್ಲಿ ಲೀಗ್‌ ಪಂದ್ಯಗಳು ನಡೆಯಲಿವೆ. ಮಾ. 5ರಿಂದ ಹೊಸದಿಲ್ಲಿಯಲ್ಲಿ ಪಂದ್ಯಾವಳಿ ಮುಂದುವರಿಯುತ್ತದೆ.

ಇದನ್ನೂ ಓದಿ WPL 2024: ಡಬ್ಲ್ಯುಪಿಎಲ್ ಟಿಕೆಟ್ ದರ ಎಷ್ಟು?; ಯಾವ ವೆಬ್​ಸೈಟ್​ನಲ್ಲಿ ಲಭ್ಯ?

ಆತಿಥೇಯ ಆರ್​ಸಿಬಿ ಮಹಿಳಾ ತಂಡ ಫೆಬ್ರವರಿ 4ರಂದು ಯುಪಿ ವಾರಿಯರ್ಸ್​ ವಿರುದ್ಧ ತನ್ನ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿ ಲೀಗ್​ನಿಂದ ಮೊದಲ ತಂಡವಾಗಿ ಹೊರಬಿದ್ದಿದ್ದ ಆರ್​ಸಿಬಿ ಈ ಬಾರಿ ತವರಿನ ಸಂಪೂರ್ಣ ಲಾಭವೆತ್ತಿ ಶ್ರೇಷ್ಠ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

ಡಬ್ಲ್ಯುಪಿಎಲ್ 2024ರ ಆವೃತ್ತಿ ಕೂಡ ಕಳೆದ ವರ್ಷದಂತೆ ಅದೇ ಸ್ವರೂಪದಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಅಗ್ರ ಮೂರು ಸ್ಥಾನ ಪಡೆದ ತಂಡಗಳು ಪ್ಲೇ ಆಫ್​ಗಳಿಗೆ ಅರ್ಹತೆ ಪಡೆಯುತ್ತವೆ. ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್​ನಲ್ಲಿ ಆಡಿ ಫೈನಲ್​ ಪ್ರವೇಶಿಸಲಿದೆ.

Exit mobile version