Site icon Vistara News

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

WPL Auction 2024

ಮುಂಬಯಿ: ಪ್ರತಿಷ್ಠಿತ ವುಮೆನ್ಸ್​ ಪ್ರೀಮಿಯರ್ ಲೀಗ್‌ (WPL Auction 2024) ಸೀಸನ್-2 ಆಟಗಾರ್ತಿಯರ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಆಟಗಾರ್ತಿಯರ ಮಿನಿ ಹರಾಜು ಡಿಸೆಂಬರ್ 9 ರಂದು ನಡೆಯಲಿದೆ. ಹರಾಜು ಪ್ರಕ್ರಿಯೆಗಾಗಿ ಈಗಾಗಲೇ ಒಟ್ಟು 165 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಹರಾಜಿಗೂ ಮುನ್ನ ಐದು ಫ್ರಾಂಚೈಸಿಗಳು ಒಟ್ಟು 60 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, 29 ಮಂದಿಯನ್ನು ರಿಲೀಸ್ ಮಾಡಿದೆ.

ಡಿಸೆಂಬರ್ 9 ರಂದು ನಡೆಯುವ ಹರಾಜಿನಲ್ಲಿ ಖಾಲಿ ಉಳಿದಿರುವ 30 ಸ್ಲಾಟ್​ಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ. ಈ ಸದ್ಯ ಯಾವ ತಂಡಕ್ಕೆ ಒಟ್ಟು ಆಟಗಾರ್ತಿಯನ್ನು ಖರೀದಿ ಮಾಡಬಹುದು ಮತ್ತು ಅವರ ಬಳಿ ಇರುವ ಹಣದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ತಂಡದಲ್ಲಿ ಒಟ್ಟು 18 ಆಟಗಾರ್ತಿಯರಿಗೆ ಮಾತ್ರ ಅವಕಾಶ.

ಬಿಡ್ಡಿಂಗ್ ಪ್ರಾರಂಭ?

ಬಿಡ್ಡಿಂಗ್ ಪ್ರಕ್ರಿಯೆ ಮಧ್ಯಾಹ್ನ 2.30 ರಿಂದ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರವನ್ನು ಸ್ಪೋರ್ಟ್ಸ್​-18 ಚಾನೆಲ್​ನಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ ಜಿಯೋ ಸಿನಿಮಾ ಆ್ಯಪ್​ನಲ್ಲಿ ಮತ್ತು ವೆಬ್​ಸೈಟ್​ನಲ್ಲಿ ಈ ಹರಾಜು ಪ್ರಕ್ರಿಯೆಯ ಲೈವ್ ಸ್ಟ್ರೀಮಿಂಗ್​ ಇರಲಿದೆ.

ಒಟ್ಟು 5 ತಂಡಗಳು

ಪುರುಷರ ಐಪಿಎಲ್​ನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಭಾಗವಹಿಸಲಿದೆ. ಇದು ಎರಡನೇ ಆವೃತ್ತಿಯಾಗಿದೆ. ಎಎಲ್ಲ 5 ತಂಡಗಳ ತವರಿನಲ್ಲಿ ಪಂದ್ಯಗಳು ನಡೆಯಲಿದೆ. ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಕೌರ್​ ಸಾರಥ್ಯದ ಮುಂಬೈ ಇಂಡಿಯನ್ಸ್​ ತಂಡ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮಣಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಈ ಬಾರಿ ಚಾಂಪಿಯನ್​ ಯಾರಗಲಿದ್ದಾರೆ ಎನ್ನುವುದು ಟೂರ್ನಿಯ ಕುತೂಹಲವಾಗಿದೆ.

ತಂಡಗಳು

ಮುಂಬೈ ಇಂಡಿಯನ್ಸ್

ಡೆಲ್ಲಿ ಕ್ಯಾಪಿಟಲ್ಸ್

ಯುಪಿ ವಾರಿಯರ್ಸ್

ಗುಜರಾತ್ ಜೈಂಟ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಯಾವ ತಂಡಕ್ಕೆ ಎಷ್ಟು ಆಟಗಾರ್ತಿಯನ್ನು ಖರೀದಿ ಮಾಡಬಹುದು?

ಮುಂಬೈ ಇಂಡಿಯನ್ಸ್​

ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನು 5 ಆಟಗಾರ್ತಿಯನ್ನು ಖರೀದಿ ಮಾಡಬಹುದು. ಸದ್ಯ 13 ಆಟಗಾರರನ್ನು ಉಳಿಸಿಕೊಂಡಿದ್ದು 4 ಆಟಗಾರರನ್ನು ಬಿಡುಗಡೆ ಮಾಡಿದೆ. ಮುಂಬೈ ಬಳಿಯಿರುವ ಮೊತ್ತ 2.1 ಕೋಟಿ ರೂ.

ಇದನ್ನೂ ಓದಿ IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸ್ಟಾರ್​ ಆಟಗಾರ್ತಿಯರ ಪಡೆಯನ್ನೇ ಹೊಂದಿದ್ದರೂ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 11 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು 8 ಆಟಗಾರ್ತಿಯನ್ನು ಖರೀದಿ ಮಾಡಬಹುದಾಗಿದೆ. ಸದ್ಯ ಫ್ರಾಂಚೈಸಿ ಬಳಿ ಉಳಿದಿರುವ ಮೊತ್ತ 3.35 ಕೋಟಿ ರೂ.

ಯುಪಿ ವಾರಿಯರ್ಸ್

ಯುಪಿ ವಾರಿಯರ್ಸ್ ತಂಡದ ಬಳಿ ಇನ್ನು 4 ಕೋಟಿ ರೂ. ಉಳಿದಿದೆ. 5 ಆಟಗಾರರನ್ನು ಬಿಡುಗಡೆ ಮಾಡಿದೆ. 13 ಆಟಗಾರ್ತಿಯನ್ನು ಖರೀದಿ ಮಾಡಬೇಕಿದೆ. ಬಲಿಷ್ಠ ಆಟಗಾರ್ತಿಯನ್ನು ಕಳೆದ ಬಾರಿ ಹೊಂದಿದ್ದರೂ ನಿರೀಕ್ಷಿತ ಪ್ರದರ್ಶನ ಮಾತ್ರ ಕಂಡು ಬಂದಿರಲಿಲ್ಲ. ಹೀಗಾಗಿ ಕೇವಲ 5 ಆಟಗಾರ್ತಿಯನ್ನು ಉಳಿಸಿಕೊಂಡು ಉಳಿದ ಎಲ್ಲ ಆಟಗಾರ್ತಿಯನ್ನು ತಂಡದಿಂದ ಕೈಬಿಟ್ಟಿದೆ.

ಡೆಲ್ಲಿ ಕ್ಯಾಪಿಟಲ್ಸ್

ಇತ್ತೀಚೆಗೆ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಆಸೀಸ್​ ತಂಡದ ಮೆಗ್​ ಲ್ಯಾನಿಂಗ್​ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್​ 15 ಆಟಗಾರರನ್ನು ಉಳಿಸಿಕೊಂಡಿದ್ದಾರೆ. 2.25 ಕೋಟಿ ರೂ. ಹರಾಜು ಮೊತ್ತ ಹೊಂದಿದೆ. ಮೂರು ಆಟಗಾರ್ತಿಯನ್ನು ಖರೀದಿ ಮಾಡಬಹುದಾಗಿದೆ.

ಗುಜರಾತ್ ಜೈಂಟ್ಸ್

ಗುಜರಾತ್ ಜೈಂಟ್ಸ್ ಗರಿಷ್ಠ 11 ಆಟಗಾರರನ್ನು ಬಿಡುಗಡೆ ಮಾಡಿದ್ದು ಕೇವಲ 7 ಆಟಗಾರ್ತಿಯನ್ನು ಮಾತ್ರ ಉಳಿಸಿಕೊಂಡಿದೆ. ಗುಜರಾತ್ ಜೈಂಟ್ಸ್ ಬಳಿ 5.95 ಕೋಟಿ ರೂ. ಹರಾಜು ಮೊತ್ತವಿದೆ. ಈ ಹಣದಲ್ಲಿ ಮತ್ತೆ 11 ಆಟಗಾರ್ತಿಯರನ್ನು ಖರೀದಿ ಮಾಡಬೇಕಿದೆ.

Exit mobile version