Site icon Vistara News

WPL Auction: ಬಿಡ್ಡಿಂಗ್​ನಲ್ಲಿ ಬಂದ ಹಣದಿಂದ ಹೆತ್ತವರಿಗೆ ಮನೆ ಖರೀದಿಸುವೆ; ರಿಚಾ ಘೋಷ್

richa ghosh

#image_title

ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಆಟಗಾರ್ತಿಯರ ಹರಾಜು ಪ್ರಕ್ರಿಯೆ(WPL Auction) ಸೋಮವಾರ(ಫೆ.13) ಮುಂಬೈಯಲ್ಲಿ ಮುಕ್ತಾಯ ಕಂಡಿದೆ. ಹರಾಜಿನಲ್ಲಿ ಭಾರತ ತಂಡದ 19 ವರ್ಷದ ರಿಚಾ ಘೋಷ್(Richa Ghosh) ಬರೋಬ್ಬರಿ 1.90 ಕೋಟಿ ರೂಗಳಿಗೆ ಆರ್​​ಸಿಬಿ ತಂಡದ ಪಾಲಾಗಿದ್ದಾರೆ.

ಆರ್​​ಸಿಬಿ ತಂಡಕ್ಕೆ 1.90 ಕೋಟಿ ರೂಗಳಿಗೆ ಪಾಲಾದ ಬಳಿಕ ಮಾತನಾಡಿದ ರಿಚಾ ಘೋಷ್ ಈ ಹಣದಲ್ಲಿ ತನ್ನ ಹೆತ್ತವರಿಗಾಗಿ ಕೋಲ್ಕೊತಾ ಈಡನ್​ ಗಾರ್ಡನ್​ ಬಳಿ ಅಪಾರ್ಟ್‌ಮೆಂಟ್​ವೊಂದನ್ನು ಖರೀದಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

‘ನನ್ನ ಹೆತ್ತವರಿಗೆ ಕೋಲ್ಕೊತಾದಲ್ಲಿ ಫ್ಲಾಟ್‌ವೊಂದನ್ನು ಖರೀದಿಸಲು ಬಯಸುತ್ತೇನೆ. ನನ್ನ ತಂದೆ-ತಾಯಿ ಅಲ್ಲಿ ನೆಲೆಸಬೇಕು. ಈ ಮೂಲಕ ಇಷ್ಟು ದಿನ ಕಷ್ಟ ಪಟ್ಟ ಅವರು ತಮ್ಮ ಮುಂದಿನ ಜೀವನವನ್ನು ಆನಂದಿಸಬೇಕೆಂದು ಆಸೆ ಪಡುವೆ. ಅವರು ನನಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಈಗಲೂ ನನ್ನ ತಂದೆ ಅಂಪೈರ್ ಕೆಲಸ ಮಾಡುತ್ತಿದ್ದಾರೆ. ಇಂದಿನಿಂದ ಅವರು ಕಷ್ಟಪಟ್ಟು ಕೆಲಸ ಮಾಡಬೇಕಾಗಿಲ್ಲ ಎಂದು ಭಾವಿಸುತ್ತೇನೆ’ ಎಂದು ರಿಚಾ ಘೋಷ್​ ಹೇಳಿದರು.

ಅಂಡರ್​-19 ವಿಶ್ವ ಕಪ್​ ಗೆದ್ದ ತಂಡದ ಸದಸ್ಯೆಯಾಗಿರುವ ಯುವ ವಿಕೆಟ್​ ಕೀಪರ್​ ರಿಚಾ ಘೋಷ್​ ಟೀಮ್​ ಇಂಡಿಯಾದಲ್ಲಿ ಸ್ಪೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಮಹಿಳಾ ಟಿ20 ವಿಶ್ವಕಪ್‌ನ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರಿಚಾ ಘೋಷ್ 20 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ WPL 2023: ಸ್ಮೃತಿ ಮಂಧಾನಾಗೆ ನೀಡುವ ಹಣದ ಅರ್ಧದಷ್ಟೂ ಮೊತ್ತ ಪಡೆಯುತ್ತಿಲ್ಲ ಪಾಕ್ ಆಟಗಾರರು!

ಮಗಳ ಸಾಧನೆಯಿಂದ ಹೆಮ್ಮೆಯಿದೆ

ರಿಚಾ ಘೋಷ್ ಅವರು ಆರ್​ಬಿಸಿ ತಂಡ ಸೇರಿದ ಬಳಿಕ ಮಾತನಾಡಿದ ಅವರ ತಂದೆ ಮನಬೇಂದ್ರ ಘೋಷ್, ಮಗಳ ಸಾಧನೆಗೆ ಸಂತೋಷವಾಗುತ್ತಿದೆ. ಅವಳು ನನ್ನ ಮಗಳು ಎನ್ನುವ ಹೆಮ್ಮೆ ಇದೆ. ಅವಳ ಕ್ರಿಕೆಟ್​ ಪ್ರಯಾಣ ತುಂಬಾ ಕಷ್ಟಕರವಾಗಿತ್ತು. ಆದರೆ ಇದೀಗ ಅವಳ ಕನಸುಗಳು ಈಡೇರುವ ಹಂತದಲ್ಲಿದೆ. ಈ ಬಾರಿ ಭಾರತ ತಂಡ ಟಿ20 ವಿಶ್ವ ಕಪ್‌ ಗೆಲ್ಲುವಂತಾಗಲಿ’ ಎಂದು ಹೇಳಿದರು.

Exit mobile version