ಮುಂಬಯಿ: ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಆಟಗಾರ್ತಿಯರ(WPL Player Auction) ಹರಾಜು ಪ್ರಕ್ರಿಯೆ ಮುಂದೂಡಿಕೆಯಾಗಿದೆ ಎಂದು ತಿಳಿದು ಬಂದಿದೆ. ನೂತನ ವರದಿ ಪ್ರಕಾರ ಫೆಬ್ರವರಿ 11 ಅಥವಾ 13ರಂದು ಹರಾಜು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಆಟಗಾರ್ತಿಯರ ಹರಾಜು ಪ್ರಕ್ರಿಯೆ ಫೆಬ್ರವರಿ 6ರಂದು ನಡೆಸಲು ಬಿಸಿಸಿಐ ಚಿಂತನೆ ನಡೆಸಿತ್ತು. ಆದರೆ ಇದೀಗ ಐದೂ ತಂಡಗಳ ಮಾಲಕರು ಸದ್ಯ ಯುಎಇನಲ್ಲಿ ನಡೆಯುತ್ತಿರುವ ಐಎಲ್ ಟಿ20 ಮತ್ತು ಸೌತ್ ಆಫ್ರಿಕಾ ಟಿ20 ಯಲ್ಲಿ ತಂಡಗಳನ್ನು ಹೊಂದಿದ್ದಾರೆ. ಕ್ರಮವಾಗಿ ಈ ಟೂರ್ನಿಗಳ ಫೈನಲ್ ಪಂದ್ಯಗಳು ಫೆಬ್ರವರಿ 11 ಮತ್ತು 12ರಂದು ನಡೆಯಲಿದೆ.
ಇದನ್ನೂ ಓದಿ WPL 2023: ವುಮೆನ್ಸ್ ಐಪಿಎಲ್ಗೆ ಹೊಸ ಹೆಸರಿಟ್ಟ ಬಿಸಿಸಿಐ
ಹೀಗಾಗಿ ಫೆಬ್ರವರಿ 11 ಅಥವಾ 13ರಂದು ಮುಂಬಯಿಯಲ್ಲಿ ಆಟಗಾರ್ತಿಯರ ಹರಾಜು ನಡೆಯಬಹುದು ಎಂದು ವರದಿಯಾಗಿದೆ. ಜತೆಗೆ ಮಾರ್ಚ್ 4ರಿಂದ 24ರವರೆಗೆ ಡಬ್ಲ್ಯೂಪಿಎಲ್ ಕೂಟ ನಡೆಯಲಿದೆ ಎಂದು ತಿಳಿದುಬಂದಿದೆ.