Site icon Vistara News

WPL Points Table: ಮುಂಬೈಗೆ ಸೋಲು; ಅಂಕಪಟ್ಟಿಯಲ್ಲಿ ಮೇಲೇರಿದ ಆರ್​ಸಿಬಿ

Shikha Pandey deceived Nat Sciver-Brunt with an inswinger

ನವದೆಹಲಿ: ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್(Mumbai Indians)​ ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ನಡುವಣ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ(WPL Points Table) ಮಹತ್ವದ ಬದಲಾವಣೆ ಸಂಭವಿಸಿದೆ. ಮುಂಬೈ ಸೋಲಿನ ಲಾಭ ಆರ್​ಸಿಗೆ ಲಭಿಸಿದೆ. ಮುಂಬೈ ತಂಡದ ರನ್​ರೇಟ್​ ಕುಸಿತದಿಂದ ಆರ್​ಸಿಬಿ(RCB) ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೇರಿದೆ.

ಡೆಲ್ಲಿ ತಂಡ ಈ ಮೊದಲು ಅಗ್ರಸ್ಥಾನದಲ್ಲೇ ಕಾಣಿಸಿಕೊಂಡಿತ್ತು. ಇದೀಗ ಈ ಗೆಲುವಿನೊಂದಿಗೆ 8 ಅಂಕ ಸಂಪಾದಿಸಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಜತೆಗೆ ರನ್​ ರೇಟ್​ ಕೂಡ ಉತ್ತಮಪಡಿಸಿಕೊಂಡಿದೆ. ಮುಂಬೈ ಸೋತರೆ ಆರ್​ಸಿಬಿ 2ನೇ ಸ್ಥಾನಕ್ಕೇರುವುದು ಖಚಿತವಾಗಿತ್ತು. ಏಕೆಂದರೆ ಉಭಯ ತಂಡಗಳು 6 ಅಂಕ ಪಡೆದಿತ್ತು. ಜತೆಗೆ ಮುಂಬೈ ದೊಡ್ಡ ರನ್​ ರೇಟ್​ ಕೂಡ ಹೊಂದಿರಲಿಲ್ಲ. ಸೋತಾಗ ಮತ್ತಷ್ಟು ಕುಸಿತಗೊಳ್ಳುತ್ತದೆ. ಹೀಗಾಗಿ ಈ ಲಾಭ ಆರ್​ಸಿಬಿ ಒಳಿದಿದೆ. ಯುಪಿ ತಂಡ ಈ ಹಿಂದಿನಂತೆ 4ನೇ ಸ್ಥಾನದಲ್ಲೇ ಮುಂದುವರಿದಿದೆ.

ನಾಳಿನ ಪಂದ್ಯಲ್ಲಿ ಗೆಲುವಿನ ಖಾತೆಯೇ ತೆರೆಯದ ಗುಜರಾತ್​ ಜೈಂಟ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಾದರೂ ಮೂನಿ ಪಡೆ ಗೆಲುವು ಸಾಧಿಸೀತೇ ಎಂದು ಕಾದು ನೋಡಬೇಕಿದೆ. ಆರ್​ಸಿಬಿ ಗೆದ್ದರೂ ಕೂಡ ಅಗ್ರಸ್ಥಾನಕ್ಕೇರಲು ಸಾಧ್ಯವಿಲ್ಲ. ಏಕೆಂದರೆ ರನ್​ರೇಟ್​ ಅಷ್ಟು ಉತ್ತಮವಾಗಿಲ್ಲ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಡೆಲ್ಲಿ ಕ್ಯಾಪಿಟಲ್ಸ್​​5418 (+1.301)
ಆರ್​ಸಿಬಿ​​5326 (+0.242)
ಮುಂಬೈ ಇಂಡಿಯನ್ಸ್​​​5326 (+0.018)
ಯುಪಿ ವಾರಿಯರ್ಸ್​5234 (-0.073)
ಗುಜರಾತ್​ ಜೈಂಟ್ಸ್​4040 (-1.804)

ಹೀನಾಯ ಸೋಲಿಗೆ ತುತ್ತಾದ ಮುಂಬೈ


ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್​(WPL 2024) ಲೀಗ್​ನ 12ನೇ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ನಿಗದಿತ ತವರಿನ ಸಂಪೂರ್ಣ ಲಾಭವೆತ್ತಿ 20 ಓವರ್​ಗಳಲ್ಲಿ ಕೇವಲ 4 ವಿಕೆಟ್​ ನಷ್ಟಕ್ಕೆ 192 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ಕಂಡು ಬೆಚ್ಚಿಬಿದ್ದ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ವಿಕೆಟ್​ ಕಳೆದುಕೊಂಡು ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ಗೆ 163 ರನ್​ ಗಳಿಸಿ 29 ರನ್​ಗಳ ಹೀನಾಯ ಸೋಲು ಕಂಡಿತು. ಮೆಗ್​ ಲ್ಯಾನಿಂಗ್​(53), ಜೆಮಿಮಾ ರೋಡ್ರಿಗಸ್(69*)​ ಅವರ ಅರ್ಧಶತಕ ಹಾಗೂ ಜೆಸ್ ಜೊನಾಸೆನ್(3 ವಿಕೆಟ್​) ಅವರ ಬೌಲಿಂಗ್​ ಪರಾಕ್ರಮ ಡೆಲ್ಲಿ ಸರದಿಯ ಪ್ರಮುಖ ಹೈಲೆಟ್ಸ್​ ಆಗಿತ್ತು.

ಇದನ್ನೂ ಓದಿ WPL 2024: ಮುಂಬೈ ವಿರುದ್ಧ ತವರಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಜೆಮಿಮಾ ರೋಡಿಗ್ರಸ್​ ಭರವಸೆಯ ಆಟವಾಡಿದರು. ಕೊನೆಯ ತನಕ ಬ್ಯಾಟಿಂಗ್​ ನಡೆಸಿದ ಅವರು 33 ಎಸೆತಗಳಿಂದ 69 ರನ್​ ಬಾರಿಸಿ ಅಜೇಯರಾಗಿ ಉಳಿದರು. ಅವರ ಈ ಅರ್ಧಶತಕದ ಇನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್​ ದಾಖಲಾಯಿತು. ಫೀಲ್ಡಿಂಗ್​ನಲ್ಲಿಯೂ ಜೆಮಿಮಾ ಅದ್ಭುತ ಡೈವಿಂಗ್​ ಮೂಲಕ ಕ್ಯಾಚೊಂದನ್ನು ಹಿಡಿದು ಗಮನಸೆಳೆದರು.

Exit mobile version