ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುವಿ ವಾರಿಯರ್ಸ್ ನಡುವಿನ ಹಣಾಹಣಿಯ ಫಲಿತಾಂಶದ ನಂತರ ಲೀಗ್ನಲ್ಲಿ ರೋಚಕತೆ ಹೆಚ್ಚಿದೆ. ಸದ್ಯ ಅಂಕಪಟ್ಟಿಯಲ್ಲಿ(WPL Points Table) ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಂತಿದೆ.
ಡೆಲ್ಲಿ ಮತ್ತು ಯುಪಿ ವಾರಿಯರ್ಸ್ ನಡುವಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಗೆಲುವು ಸಾಧಿಸಿದರೂ ಕೂಡ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿಲ್ಲ. ಈ ಹಿಂದಿನಂತೆ ಯಥಾಸ್ಥಿತಿಯಲ್ಲಿಯೇ ತಂಡಗಳು ಯಾವ ಸ್ಥಾನದಲ್ಲಿತ್ತೋ ಅದೇ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಅಂಕಗಳ ಬದಲಾವಣೆ ಸಂಭವಿಸಿದೆ. ಯುಪಿ 6 ಅಂಕಗಳಿಸಿದೆ. ಅಗ್ರಸ್ಥಾನಿ ಡೆಲ್ಲಿ ತನ್ನ ರನ್ರೇಟ್ನಲ್ಲಿ ಕುಸಿತ ಕಂಡಿದೆ.
ಇಂದು ನಡೆಯುವ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಪಂದ್ಯದಲ್ಲಿ ಮುಂಬೈ ಗೆದ್ದರೆ 10 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಗುಜರಾತ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಈ ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಳ್ಳಲಿದೆ. ಸೋತರೆ ಬಹುತೇಕ ಲೀಗ್ನಿಂದ ಹೊರಬೀಳಲಿದೆ. ಹೀಗಾಗಿ ಈ ಪಂದ್ಯ ರೋಚಕತೆಯಿಂದ ಸಾಗುವ ನಿರೀಕ್ಷೆಯೊಂದನ್ನು ಮಾಡಬಹುದು.
ನೂತನ ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಡೆಲ್ಲಿ ಕ್ಯಾಪಿಟಲ್ಸ್ | 6 | 4 | 2 | 8 (+1.059) |
ಮುಂಬೈ ಇಂಡಿಯನ್ಸ್ | 6 | 4 | 2 | 8 (+0.375) |
ಆರ್ಸಿಬಿ | 6 | 3 | 3 | 6 (+0.038) |
ಯುಪಿ ವಾರಿಯರ್ಸ್ | 7 | 3 | 4 | 6 (-0.365) |
ಗುಜರಾತ್ ಜೈಂಟ್ಸ್ | 5 | 1 | 4 | 2 (-1.278) |
WHAT. A. MATCH! 🙌
— Women's Premier League (WPL) (@wplt20) March 8, 2024
That's a surreal comeback from the @UPWarriorz as they clinch a 1-run win💜
Scorecard 💻📱https://t.co/HW6TQgqctC#TATAWPL | #DCvUPW pic.twitter.com/5r0D2PlR1P
ರೋಚಕ ಪಂದ್ಯ
ಲುವಿಗೆ 2 ರನ್ ಬೇಕಿದ್ದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಲ್ಔಟ್ ಆಗುವ ಮೂಲಕ ಮೂಲಕ ಯುಪಿ ವಾರಿಯರ್ಸ್ ತಂಡಕ್ಕೆ 1 ರನ್ ರೋಚಕ ಗೆಲುವು ಲಭಿಸಿತು. ಕೊನೆಯಲ್ಲಿ ಸತತವಾಗಿ ಆರು ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡ ಕೈಯಲ್ಲಿದ್ದ ಪಂದ್ಯವನ್ನು ಕಳೆದುಲಕೊಂಡಿತು. ಗೆಲ್ಲಲೇಬೇಕಾದ ಪರಿಸ್ಥಿಲ್ಲಿ ಗೆದ್ದ ಯುಪಿ ವಾರಿಯರ್ಸ್ ಪ್ಲೇಆಫ್ ಕನಸನ್ನು ಮತ್ತಷ್ಟು ಜೀವಂತವಾಗಿಟ್ಟುಕೊಂಡಿತು.
ಕೊನೆಯ ಎರಡು ಓವರ್ಗಳಲ್ಲಿ ಡೆಲ್ಲಿ ಗೆಲುವಿಗೆ 15 ರನ್ ಬೇಕಿತ್ತು. ಕೇವಲ ನಾಲ್ಕು ವಿಕೆಟ್ ಉರುಳಿತ್ತು. ತಂಡದ ಮೊತ್ತ 124ಕ್ಕೆ 4 ಆಗಿತ್ತು. ಆದರೆ 19ನೇ ಓವರ್ ಬೌಲಿಂಗ್ ಎಸೆದ ದೀಪ್ತಿ ಶರ್ಮಾ ಮೊದಲ ಎರಡು ಎಸೆತಗಳಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ಅರುಂಧತಿ ರೆಡ್ಡಿ ಅವರನ್ನು ಔಟ್ ಮಾಡಿದರು. ನಾಲ್ಕನೇ ಎಸೆತದಲ್ಲಿ ಶಿಖಾ ಪಾಂಡೆ ವಿಕೆಟ್ ಪಡೆದರು.