Site icon Vistara News

WPL RCB: ಅಭ್ಯಾಸ ಆರಂಭಿಸಿದ ಮಹಿಳಾ ಆರ್​ಸಿಬಿ ತಂಡ: ಫೆ. 23ರಿಂದ ಟೂರ್ನಿ ಆರಂಭ

WPL practice session

ಬೆಂಗಳೂರು: ಬಹುನಿರೀಕ್ಷಿತ ಮಹಿಳಾ ಕ್ರಿಕೆಟಿಗರ ವರ್ಣರಂಜಿತ ಟಿ20 ಕ್ರಿಕೆಟ್​ ಲೀಗ್ ಡಬ್ಲ್ಯೂಪಿಎಲ್ (WPL 2024) ನ ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 23ರಂದು ಬೆಂಗಳೂರಿನಲ್ಲಿ ಟೂರ್ನಿ ಆರಂಭವಾಗಲಿದ್ದು ಮಾರ್ಚ್ 17ರಂದು ನವದೆಹಲ್ಲಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಟೂರ್ನಿಗಾಗಿ ಕನ್ನಡಿಗರ ನೆಚ್ಚಿನ ತಂಡವಾದ ಸ್ಮೃತಿ ಮಂಧಾನ(Smriti Mandhana) ಸಾರಥ್ಯದ ರಾಯಲ್​ ಚಾಲೆಂಜರ್ಸ್ ಬೆಂಗಳೂರು(WPL RCB) ತಂಡ ಅಭ್ಯಾಸ ಆರಂಭಿಸಿದೆ.

ತಂಡದ ಆಟಗಾರ್ತಿಯರು ಅಭ್ಯಾಸ ಆರಂಭಿಸಿದ ಫೋಟೊಗಳನ್ನು ಆರ್​ಸಿಬಿ(Royal Challengers Bangalore) ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಬುಧವಾರದಿಂದ ಅಭ್ಯಾಸ ಆರಂಭವಾಗಿದೆ. ಸ್ಮೃತಿ ಮಂಧನಾ ನಾಯಕತ್ವದ ಆರ್​ಸಿಬಿ ತಂಡವು ಕಳೆದ ಸೀಸನ್​ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಈ ಬಾರಿ ಸ್ಟಾರ್​ ಆಟಗಾರರ ಸೇರ್ಪಡೆಯೊಂದಿಗೆ ತಂಡ ಮತ್ತಷ್ಟು ಬಲಿಷ್ಠವಾಗಿದೆ.

ಇಂಗ್ಲೆಂಡ್​ ತಂಡದ ನಾಯಕಿಯಾಗಿರುವ ಹೀದರ್ ನೈಟ್ ನ್ಯೂಜಿಲ್ಯಾಂಡ್​ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ದೇಶವನ್ನು ಪ್ರತಿನಿಧಿಸುವ ಸಲುವಾಗಿ ಡಬ್ಲ್ಯುಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಆರ್​ಸಿಬಿಗೆ ಈ ಬಾರಿ ಅವರ ಸೇವೆ ಲಭ್ಯವಿಲ್ಲ. ಅವರ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ಈಗಾಗಲೇ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಡಿನ್ ಡಿ ಕ್ಲರ್ಕ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಮಧ್ಯಮ ವೇಗದ ಬೌಲಿಂಗ್ ಮತ್ತು ಬಲಗೈ ಬ್ಯಾಟ್ ಮಾಡುವ ಡಿ ಕ್ಲರ್ಕ್ ದಕ್ಷಿಣ ಆಫ್ರಿಕಾ ಪರ 30 ಏಕದಿನ ಮತ್ತು 46 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.

ಆರ್​ಸಿಬಿ ತಂಡ


ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವಾರೆಹಮ್, ಏಕ್ತಾ ಬಿಷ್ತ್, ಕೇಟ್ ಕ್ರಾಸ್, ಶುಭಾ ವಾರೇಹಮ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್.

ಇದನ್ನೂ ಓದಿ WPL 2024 : ಕ್ಯಾನ್ಸರ್​ ಬಾಧೆ; ಮಹಿಳಾ ಐಪಿಎಲ್​ನಿಂದ ಹಿಂದೆ ಸರಿದ ಆಟಗಾರ್ತಿ

ಬೆಂಗಳೂರಿನಲ್ಲಿಯೂ ನಡೆಯಲಿದೆ ಪಂದ್ಯ


ಕಳೆದ ವರ್ಷ ಸಂಪೂರ್ಣವಾಗಿ ಮುಂಬೈನಲ್ಲಿ ಟೂರ್ನಿ ನಡೆದಿತ್ತು. ಈ ಬಾರಿ ಬೆಂಗಳೂರು ಮತ್ತು ದೆಹಲಿಯಲ್ಲಿಯೂ ನಡೆಯಲಿದೆ. ಮೊದಲ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್​ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ. ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.

ಸ್ವರೂಪದಲ್ಲಿ ಬದಲಾವಣೆ ಇಲ್ಲ


ಡಬ್ಲ್ಯೂಪಿಎಲ್ನ 2024 ರ ಋತುವು ಕಳೆದ ವರ್ಷದಂತೆ ಅದೇ ಸ್ವರೂಪದಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಅಗ್ರ ಮೂರು ತಂಡಗಳು ಪ್ಲೇ ಆಫ್​ಗಳಿಗೆ ಅರ್ಹತೆ ಪಡೆಯುತ್ತವೆ. ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಮಾರ್ಚ್ 15 ರಂದು ಎಲಿಮಿನೇಟರ್​ನಲ್ಲಿ ಆಡಲಿವೆ.

Exit mobile version